
DC vs RCB Live Score, WPL 2023: ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವುಮೆನ್ಸ್ ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಆಡಿರುವ ನಾಲ್ಕು ಪಂದ್ಯಗಳನ್ನು ಸೋತಿರುವ ಆರ್ಸಿಬಿ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಪಂದ್ಯದೊಂದಿಗೆ ದ್ವಿತೀಯ ಸುತ್ತಿನ ಪಂದ್ಯಗಳು ಶುರುವಾಗುತ್ತಿದ್ದು, ಹೀಗಾಗಿ ಮುಂದಿನ ಹಂತಕ್ಕೇರಲು ಆರ್ಸಿಬಿ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು.
ಮತ್ತೊಂದೆಡೆ 4 ಪಂದ್ಯಗಳಲ್ಲಿ 3 ರಲ್ಲಿ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ರಸ್ತುತ ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದೆ. ಹೀಗಾಗಿ ಆರ್ಸಿಬಿಗೆ ಸೋಲುಣಿಸಿ ಅಗ್ರಸ್ಥಾನಕ್ಕೇರುವ ಇರಾದೆಯಲ್ಲಿದೆ ಡೆಲ್ಲಿ ಕ್ಯಾಪಿಟಲ್ಸ್ ತಂಡ. ಹೀಗಾಗಿ ಉಭಯ ತಂಡಗಳಿಂದ ಈ ಪಂದ್ಯದಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಮೆಗ್ ಲ್ಯಾನಿಂಗ್ (ನಾಯಕಿ) , ತಾನಿಯಾ ಭಾಟಿಯಾ (ವಿಕೆಟ್ ಕೀಪರ್) , ಶಫಾಲಿ ವರ್ಮಾ , ಲಾರಾ ಹ್ಯಾರಿಸ್ , ಜೆಮಿಮಾ ರೋಡ್ರಿಗಸ್ , ಮರಿಝನ್ನೆ ಕಪ್ , ಜೆಸ್ ಜೊನಾಸೆನ್ , ಮಿನ್ನು ಮಣಿ , ರಾಧಾ ಯಾದವ್ , ಶಿಖಾ ಪಾಂಡೆ , ತಾರಾ ನಾರ್ರಿಸ್ , ಅರುಂಧತಿ ಎ ಕಾಪ್ಸೆಯ್ , ಜಾಸ್ ಅಲ್ ಕಾಪ್ತಾರ್ , ಟಿಟಾಸ್ ಸಾಧು , ಸ್ನೇಹ ದೀಪ್ತಿ , ಪೂನಂ ಯಾದವ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ಸೋಫಿ ಡಿವೈನ್ , ಎಲ್ಲಿಸ್ ಪೆರ್ರಿ , ಕನಿಕಾ ಅಹುಜಾ , ಹೀದರ್ ನೈಟ್ , ಶ್ರೇಯಾಂಕಾ ಪಾಟೀಲ್ , ಎರಿನ್ ಬರ್ನ್ಸ್ , ಕೋಮಲ್ ಝಂಝಾದ್ , ರೇಣುಕಾ ಠಾಕೂರ್ ಸಿಂಗ್ , ಸಹನಾ ಪವಾರ್ , ಪೂನಮ್ ಖೇಮ್ನಾರ್ , ದಿಶಾ ಕಸತ್, ಮೇಗನ್ ಶುಟ್, ಡೇನ್ ವ್ಯಾನ್ ನೀಕರ್ಕ್ , ಪ್ರೀತಿ ಬೋಸ್ , ಇಂದ್ರಾಣಿ ರಾಯ್ , ಆಶಾ ಶೋಬನಾ.
Views: 0