DC vs RCB: ಹೈವೋಲ್ಟೇಜ್ ಪಂದ್ಯಕ್ಕೆ ಆರ್​ಸಿಬಿ ತಯಾರಿ: ಕೊಹ್ಲಿ, ಮ್ಯಾಕ್ಸ್​ವೆಲ್ ಭರ್ಜರಿ ಪ್ರ್ಯಾಕ್ಟೀಸ್

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫಾಫ್ ಡುಪ್ಲೆಸಿಸ್ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು (DC vs RCB) ತಂಡವನ್ನು ಎದುರಿಸಲಿದೆ.ಪಾಯಿಂಟ್ ಟೇಬಲ್​ನಲ್ಲಿ ಮೇಲಕ್ಕೇರಲು ಆರ್​ಸಿಬಿಗೆ ಈ ಪಂದ್ಯ ಬಹುಮುಖ್ಯವಾಗಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತಾವಾಗಿದೆ. ಕೊಹ್ಲಿ, ಫಾಫ್, ಮ್ಯಾಕ್ಸ್​ವೆಲ್, ಸಿರಾಜ್ ಸೇರಿದಂತೆ ಆರ್​ಸಿಬಿಯ ಆಟಗಾರರು ಪ್ರ್ಯಾಕ್ಟೀಸ್​ನಲ್ಲಿ ತೊಡಗಿಕೊಂಡಿದ್ದಾರೆ.ರಾಯಲ್ ಚಾಲೆಂಜರ್ಸ್ ಬೌಲಿಂಗ್ ವಿಭಾಗ ಬಲಿಷ್ಠ ಆಗಿರುವುದು ಸಂತಸದ ಸಂಗತಿ. ಜೋಶ್ ಹೇಜ್ಲೆವುಡ್ ಪರಿಣಾಮಕಾರಿ ಆಗಿ ಗೋಚರಿಸಿದ್ದಾರೆ. ಸ್ಪಿನ್ ವಿಭಾಗ ಕೂಡ ಬಲಿಷ್ಠವಾಗಿದೆ.ಬ್ಯಾಟಿಂಗ್​ನಲ್ಲಿ ಕೊಹ್ಲಿ, ಫಾಫ್ ಮತ್ತು ಮ್ಯಾಕ್ಸ್​ವೆಲ್ ಬಿಟ್ಟರೆ ಉಳಿದವರು ಯಾರೂ ಅಬ್ಬರಿಸುತ್ತಿಲ್ಲ. ಹೀಗಾಗಿ ಕೇದರ್ ಜಾಧವ್ ಮಧ್ಯಮ ಕ್ರಮಾಂಕದ ಬಲ ತುಂಬುವ ಸಾಧ್ಯತೆ ಇದೆ.ಈ ಪಿಚ್ ಸ್ಪಿನ್ನರ್​ಗಳಿಗೆ ಹೆಚ್ಚು ನೆರವು ನೀಡುವ ಕಾರಣ ಆರ್​ಸಿಬಿ ವನಿಂದು ಹಸರಂಗ ಹಾಗೂ ಕರ್ಣ್ ಶರ್ಮಾ ಇಬ್ಬರು ಸ್ಪಿನ್ನರ್​ಗಳನ್ನು ಪ್ಲೇಯಿಂಗ್ ಇಲೆವೆನ್​ನಲ್ಲಿ ಹಾಕುವ ಪ್ಲಾನ್ ಮಾಡಿಕೊಳ್ಳಬಹುದು.ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸರಸಾರಿ ಮೊತ್ತ 164 ಆಗಿದೆ. ಗರಿಷ್ಠ ಸ್ಕೋರ್ 231 ರನ್ ಕಲೆಹಾಕಿದ್ದರೆ 66 ರನ್ ಕನಿಷ್ಠ ಆಗಿದೆ. ಇನ್ನು ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.ಬ್ಯಾಟಿಂಗ್ ಆಭ್ಯಾಸದಲ್ಲಿ ನಿರತರಾಗಿರುವ ವಿರಾಟ್ ಕೊಹ್ಲಿ.

source https://tv9kannada.com/photo-gallery/cricket-photos/virat-kohli-glenn-maxwell-and-other-royal-challengers-bangalore-players-practicing-for-delhi-capitals-match-vb-571357.html

Leave a Reply

Your email address will not be published. Required fields are marked *