Deepavali 2023: ದೀಪದ ಮಹತ್ವ ತಿಳಿದಿದೆಯಾ? ಯಾಕಾಗಿ ಮನೆಗಳಲ್ಲಿ ದೀಪ ಬೆಳಗಿಸಬೇಕು?

ದೀಪಾವಳಿಯ ದಿನ ಮಾತ್ರ ದೀಪಗಳನ್ನು ಬೆಳಗಿಸಬೇಕಾ? ಖಂಡಿತವಾಗಿಯೂ ಇಲ್ಲ. ಆದರೆ ದೀಪಾವಳಿ ಮತ್ತು ಕಾರ್ತೀಕ ಮಾಸದಲ್ಲಿ ದೀಪ ಹಚ್ಚುವುದಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ದೀಪಗಳನ್ನು ಯಾವಾಗಲೂ, ಎಲ್ಲರೂ ಹಚ್ಚಿ ಬೆಳಗಬಹುದು. ಕೆಲವರಲ್ಲಿ ದೀಪ ಯಾವ ಕಾರಣಕ್ಕಾಗಿ ಬೆಳಗಬೇಕು? ಅದರ ಮಹತ್ವವೇನು? ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಅಂತಹ ಜಿಜ್ಞಾಸೆಗಳಿಗೆ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗುತ್ತದೆ.

ದೀಪ ಎಂಬ ಪದ ಎರಡಕ್ಷರದ್ದಾದರೂ ಅದರ ಮಹತ್ವ ಮಾತ್ರ ಅನನ್ಯ. ದೀಪಾವಳಿಯ ದಿನ ಮಾತ್ರ ದೀಪಗಳನ್ನು ಬೆಳಗಿಸಬೇಕಾ? ಖಂಡಿತವಾಗಿಯೂ ಇಲ್ಲ. ಆದರೆ ದೀಪಾವಳಿ ಮತ್ತು ಕಾರ್ತೀಕ ಮಾಸದಲ್ಲಿ ದೀಪ ಹಚ್ಚುವುದಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ  ದೀಪಗಳನ್ನು ಯಾವಾಗಲೂ, ಎಲ್ಲರೂ ಹಚ್ಚಿ ಬೆಳಗಬಹುದು. ಕೆಲವರಲ್ಲಿ ದೀಪ ಯಾವ ಕಾರಣಕ್ಕಾಗಿ ಬೆಳಗಬೇಕು? ಅದರ ಮಹತ್ವವೇನು? ಎಂಬ ಪ್ರಶ್ನೆ ಹುಟ್ಟಿಕೊಳ್ಳಬಹುದು. ಅಂತಹ ಜಿಜ್ಞಾಸೆಗಳಿಗೆ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ದೀಪ ಎಂದರೆ ಶಾಂತಿ, ಸಮೃದ್ಧಿ, ಸಂಪತ್ತು, ದೀಪ ಎಂದರೆ ಪ್ರಖರತೆ ಹೀಗೆ ದೀಪ ಜೀವನದ ಒಂದು ಭಾಗ. ಹಾಗಾಗಿ ದೀಪವನ್ನು ದಿನವೂ ಬೆಳಗಿಸುವುದರಿಂದ ನಿಮ್ಮ ಜೀವನಕ್ಕೆ ಸಂತೋಷ, ನೆಮ್ಮದಿ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲಿಯೂ ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ತರವಾದ ಪ್ರಾಮುಖ್ಯತೆಯನ್ನು ನೀಡಲಾಗಿದೆ. ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಜೊತೆಗೆ ದೀಪ ಬೆಳಗುವ ಮೂಲಕವೇ ಪ್ರತಿಯೊಂದು ಕಾರ್ಯಕ್ರಮ ಅಥವಾ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಎಷ್ಟು ಹೆಸರುವಾಸಿಯಾದರೂ ದೀಪ ಬೆಳಗಬೇಕು ಎಂದಾಕ್ಷಣ ತಮ್ಮ ಪಾದರಕ್ಷೆಗಳನ್ನು ಬಿಚ್ಚಿ ಬರಲೇ ಬೇಕು. ಅದು ದೀಪಕ್ಕಿರುವ ಮಹತ್ವವೂ ಹೌದು. ಇದೆಲ್ಲದರ ಜೊತೆಗೆ ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ ಇದು ವೈಜ್ಞಾನಿಕವಾಗಿಯೂ ಧೃಢವಾಗಿದೆ.

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ದೀಪ ಹಚ್ಚುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಮೊದಲು ನಮ್ಮ ಹಿರಿಯರು ಮಣ್ಣಿನ ದೀಪಗಳನ್ನು ಬಳಸುತ್ತಿದ್ದರು. ಈಗ ಅದೇ ಹಣತೆ ಬಣ್ಣ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆರ್ಟಿಫಿಷಿಯಲ್ ದೀಪಗಳು ಸಿಗುತ್ತವೆ ಆದರೆ ಮಣ್ಣಿಗಿರುವ ಶ್ರೇಷ್ಠತೆ ಯಾವುದರಲ್ಲಿಯೂ ಸಿಗುವುದಿಲ್ಲ ಎಂಬುದನ್ನು ಭಾರತೀಯರಾದ ನಾವು ಮರೆಯಬಾರದು, ದೀಪ ಹಚ್ಚುವುದು ಅಂದ ಚಂದಕ್ಕಾಗಿ ಅಲ್ಲ ಬದಲಾಗಿ ಮನಸ್ಸಿನ ನೆಮ್ಮದಿಗಾಗಿ. ಅದರಲ್ಲಿಯೂ ದೇವರ ಕೋಣೆಯಲ್ಲಿ ದೀಪ ಹಚ್ಚುವುದು ಮನಸ್ಸು ಶಾಂತವಾಗಿರಲಿ ಎಂದು. ದೇವರ ಮುಂದೆ ಕುಳಿತಾಗ, ಭಗವಂತನ ಕುರಿತು ಭಕ್ತಿಭಾವ ಹೆಚ್ಚಾಗಬೇಕು, ದೇವರ ಕೋಣೆಯಲ್ಲಿ ಭಗವಂತನ ಅಸ್ತಿತ್ವದ ಅರಿವಾಗಬೇಕು, ದೇವರು ನಮ್ಮೊಂದಿಗಿದ್ದಾನೆ ಎಂದು ಅನಿಸಬೇಕು. ಹಾಕಿದ್ದಾಗ ಮಾತ್ರ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಪ್ರತಿ ದಿನವೂ ಕನಿಷ್ಠ 2 ದೀಪವನ್ನಾದರೂ ಹಚ್ಚಿ ಅದು ತುಪ್ಪದ್ದಾಗಿರಲಿ ಎಣ್ಣೆಯಾಗಿರಲಿ ನಿಮಗೆ ಅನುಕೂಲಕರ ವಾಗಿರುವುದನ್ನು ಬಳಸಿ ದೇವರಿಗೆ ಅರ್ಪಿಸಿ.

ತುಳಸಿ ಪೂಜೆ ಮತ್ತು ದೀಪ ಹಚ್ಚುವುದಕ್ಕೆ ಕಾರಣವೇನು?

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಮಾಸದಲ್ಲಿ ತುಳಸಿಯನ್ನು ಪೂಜಿಸುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಮತ್ತು ಜೀವನದಿಂದ ಎಲ್ಲಾ ರೀತಿಯ ತೊಂದರೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಈ ತಿಂಗಳಲ್ಲಿ ಭಗವಾನ್‌ ವಿಷ್ಣು ನಾಲ್ಕು ತಿಂಗಳುಗಳ ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ, ಹೀಗಾಗಿ ಈ ಮಾಸವು ಪೌರಾಣಿಕ ಮಹತ್ವವನ್ನು ಹೊಂದಿದೆ. ಜೊತೆಗೆ ಬಹಳ ವಿಶೇಷವೆಂದು ಪರಿಗಣಿಸಲ್ಪಟ್ಟಿದೆ. ಅದರಲ್ಲಿಯೂ ಕಾರ್ತಿಕ ಮಾಸದಲ್ಲಿ ತುಳಸಿ ಕಟ್ಟೆಯ ಮುಂದೆ ದೀಪ ಹಚ್ಚುವುದು ಇನ್ನೂ ಮಂಗಳಕರವಾಗಿದ್ದು ಪ್ರತಿದಿನ ಹಚ್ಚುವುದನ್ನು ಮರೆಯಬೇಡಿ.

ಕಾರ್ತಿಕ ಮಾಸದಲ್ಲಿ ತುಳಸಿಗೆ ಪೂಜೆ ಮಾಡಿ ದೀಪ ಹಚ್ಚುವಾಗ ಈ ಮಂತ್ರವನ್ನು ಪಠಿಸಿ:

ಮಹಾಪ್ರಸಾದ್‌ ಜನನೀ, ಸರ್ವ ಸೌಭಾಗ್ಯವರ್ಧಿನೀ ಆಧಿ ವ್ಯಾಧಿ ಹರಾ ನಿತ್ಯಂ, ತುಳಸೀ ತ್ವಂ ನಮೋಸ್ತುತೇ

Source : https://tv9kannada.com/spiritual/deepavali-2023-do-you-know-the-importance-of-lamp-why-lights-should-be-lit-in-houses-aks-714741.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *