ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂವಿಧಾನ ರಕ್ಷ ಆಭಿಯಾನ ಕಾರ್ಯಕ್ರಮ.

ಚಿತ್ರದುರ್ಗ ಜ. 06 ಸಂವಿಧಾನ ನಮಗೆ ಹುಟ್ಟುವ ಮೊದಲೇ ಹಾಗೂ ಸಾವಿನ ನಂತರಕ್ಕೂ ಸಹಾ ಸೌಲಭ್ಯವನ್ನು ನೀಡಿದೆ. ನಮ್ಮ ಸಂವಿಧಾನವನ್ನು ನಾವು ರಕ್ಷಣೆ ಮಾಡಬೇಕಿದೆ ಎಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ಕರೆ ನೀಡಿದರು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕೆಪಿಸಿಸಿ ಹಾಗೂ ಲೋಕೋಪಯೋಗಿ ಸಚಿವರ ಆದೇಶವ
ಮೇರೆಗೆ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಜಿಲ್ಲಾ ಆಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಸಂಯುಕ್ತಾಶ್ರಯದಲ್ಲಿ
ಹಮ್ಮಿಕೊಂಡಿದ್ದ ಸಂವಿಧಾನ ರಕ್ಷ ಆಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿಯವರು ಅಂಬೇಡ್ಕರ್‍ರವರನ್ನು ಕಾಂಗ್ರೆಸ್ ಪಕ್ಷ ಚುನಾವಣೆÉಯಲ್ಲಿ ಸೋಲಿಸಿತು ಎಂದು ಎಲ್ಲಡೆ ಹೇಳುತ್ತಿದ್ದಾರೆ ಆದರೆ
ನಿಜವಾಗಿ ಅಂಬೇಡ್ಕರ್‍ರವರನ್ನು ಸೋಲಿಸಿದ್ದ ಕಾಂಗ್ರೆಸ್ ಅಲ್ಲ ಅವರು ಆ ಸಮಯದಲ್ಲಿ ಕಾಂಗ್ರೇಸ್ ಪಕ್ಷವನ್ನು ತೋರೆದು ಬೇರೆ
ಪಕ್ಷವನ್ನು ಕಟ್ಟಿ ಅದರಿಂದ ಅವರು ಚುನಾವಣೆಯಲ್ಲಿ ಸ್ಫರ್ದೆ ಮಾಡಿ ಸೋತಿದ್ದರು. ಈ ಸಮಯದಲ್ಲಿ ಆರ್.ಎಸ್.ಎಸ್. ಸಂಘಟನೆ
ಇವರ ವಿರುದ್ದ ಅವರ ಜನಾಂಗದವರನ್ನು ಚುನಾವಣೆಯಲ್ಲಿ ಸ್ಪರ್ದೆ ಮಾಡುವಂತೆ ಮಾಡಿ ಮತಗಳು ಚದುರುವಂತೆ ಮಾಡಿದ್ದಾರೆ
ಆದರೆ ಇವರು ಚುನಾವಣೆಯಲ್ಲಿ ಸೋತ್ತಿದ್ದರು ಪಕ್ಷವನ್ನು ಬಿಟ್ಟಿದ್ದರೂ ಸಹಾ ಕಾಂಗ್ರೆಸ್ ಅವರನ್ನು ಮರಳಿ ಕರೆದುಕೊಂಡು ರಾಜ್ಯಸಭಾ
ಸದಸ್ಯರನ್ನಾಗಿ ಮಾಡಿ ಕಾನೂನು ಮಂತ್ರಿಯನ್ನಾಗಿ ಮಾಡಿದ ಕೀರ್ತಿ ಕಾಂಗ್ರೆಸ್‍ಗೆ ಸಲ್ಲುತ್ತಿದೆ ಇದನ್ನು ನಮ್ಮ ಪಕ್ಷದ ಮುಖಂಡರು,
ಕಾರ್ಯಕರ್ತರು ಜನರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು.
ಅಮಿತಾ ಷಾ ರವರು ಅಂಬೇಡ್ಕರ್‍ರವರ ಹೆಸರನ್ನು ಸ್ಮರಣೆ ಮಾಡುವುದರ ಬದಲು ದೇವರ ಹೆಸರನ್ನು ಸ್ಮರಣೆ ಮಾಡಿದರೆ ಸ್ವರ್ಗ
ಸಿಗುತ್ತದೆ ಎಂದಿದ್ದಾರೆ ಆದರೆ ಇವರಿಗೆ ಗೊತ್ತಿಲ್ಲ ಹಲವಾರು ಜನಾಂಗವನ್ನು ದೇವಸ್ಥಾನದ ಬಳಗಡೆಯೇ ಬಿಡುವುದಿಲ್ಲ ದೇವರನ್ನು
ನೋಡಲು ಬಿಡದವರು ಸ್ವರ್ಗಕ್ಕೆ ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ, ಜನತೆಯ ಮನಸ್ಸಿನಲ್ಲಿ ಅಂಬೇಡ್ಕರ್ ಅಚ್ಚಳ್ಳಯದೆ
ಉಳಿದಿದ್ದಾರೆ ಅದನ್ನು ತೆಗೆಯುವ ಕಾರ್ಯವನ್ನು ಈ ರೀತಿಯಾದ ಮಾತುಗಳಿಂದ ಅಮಿತಾ ಷಾರವರು ಮಾಡುತ್ತಿದ್ದಾರೆ. ಈ
ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನ ರಕ್ಷ ಅಭಿಯಾನವನ್ನು ಪ್ರಾರಂಭ ಮಾಡಿದೆ ಸಂವಿಧಾನದ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು
ಆಡುತ್ತಿರುವ ಪಕ್ಷಕ್ಕೆ ಸರಿಯಾದ ಪಾಠವನ್ನು ಕಲಿಸಿ ಜನತೆಗೆ ಸಂವಿಧಾನದ ಬಗ್ಗೆ ತಿಳಿಸುವ ಕಾರ್ಯವನ್ನು ದೆಹಲಿಯಿಂದ ಹಿಡಿದು
ಗ್ರಾಮ ಮಟ್ಟದವರೆಗೂ ನಡೆಸಲಾಗುವುದು ಎಂದರು.
ಸಂವಿಧಾನ ಎಲ್ಲರಿಗೂ ಎಲ್ಲಾ ಸಮುದಾಯದವರಿಗೂ ಸಹಾ ಎಲ್ಲಾ ಅರ್ಥದಲ್ಲಿಯೂ ಸೌಲಭ್ಯವನ್ನು ನೀಡಿದೆ. ಇದರಲ್ಲಿ
ಮಹಿಳೆಯರಿಗೂ ಸಹಾ ವಿಶೇಷವಾದ ಸ್ಥಾನವನ್ನು ನೀಡಿದೆ. ಸಂವಿಧಾನದ ಆಶಯದಿಂದಲೇ ಸಣ್ಣ-ಸಣ್ಣ ಸಮುದಾಯದವರು ಸಹಾ
ಆಧಿಕಾರವನ್ನು ಹಿಡಿಯುವಂತೆ ಆಗಿದೆ. ಜನವರಿ 26 ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ತದ ನಂತರ ತಾಲ್ಲೂಕು,
ಹೋಬಳಿ, ಗ್ರಾಮ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನ ಮಾಡಿ, ಸ್ವಾತ್ರಂತ್ರ್ಯ
ಹೋರಾಟಗಾರನ್ನು ಗೌರವಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸವನ್ನು ನೀಡುವಂತೆ ಕೆಪಿಸಿಸಿ ಸೂಚನೆ ನೀಡಿದೆ ಎಂದು
ತಾಜ್‍ಪೀರ್ ತಿಳಿಸಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರಯ ಬಂದ ಮೇಲೆ ಗಾಂಧೀಜಿಯವರನ್ನು
ದೂರವಿಟ್ಟರೆ ಮಾತ್ರ ನಮಗೆ ಉಳಿಗಾಲ ಎಂದು ಆರಿತ ಮನುವಾದಿಗಳು ಅವರನ್ನು ದೂರ ಇಡಲಾಯಿತು. ಬಿಜೆಪಿ ಸಂವಿಧಾನದ
ವಿರುದ್ದ ಹೋರಾಟವನ್ನು ಮಾಡುತ್ತಿದೆ, ಅದರಿಂದಲೇ ನಾವು ಎಂಬ ಸತ್ಯವನ್ನು ಮರೆತ್ತಿದ್ದಾರೆ. ಅಂಬೇಡ್ಕರ್ ರವರು ಬರೀ ಎಸ್.ಸಿ.
ಎಸ್.ಟಿ.ಯವರಿಗೆ ಮಾತ್ರ ಸಂಬಂಧ ಇಲ್ಲ ಎಲ್ಲರಿಗೂ ಸಹಾ ಸಂಬಂಧಪಟ್ಟ ವ್ಯಕ್ತಿಯಾಗಿದ್ದಾರೆ. ಎಲ್ಲರಿಗೂ ಸಮಾನವಾದ ಬದುಕುವ

ಹಕ್ಕನ್ನು ನೀಡಿದ್ದಾರೆ. ಎಲ್ಲಾ ವರ್ಗದವರ ಧ್ವನಿಯಾಗಿ ಸಂವಿಧಾನ ಇದೆ. ಅಂಬೇಡ್ಕರ್ ಒಬ್ಬ ಅಸಮಾನ್ಯವಾದ ವ್ಯಕ್ತಿಯಾಗಿದ್ದಾರೆ
ಅವರು ಜನನವಾಗಿ ಸಂವಿಧಾನವನ್ನು ಬರೆಯದೆ ಇದ್ದಿದ್ದರೆ ಬಹುತೇಕ ಸಮುದಾಯಗಳು ಕಳೆದು ಹೋಗುತ್ತಿದ್ದವು, ಮೀಸಲಾತಿ
ಇಲ್ಲದಿದ್ದರೆ ಅಧಿಕಾರವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ, ಕಾಲ ಕಾಲಕ್ಕೆ ಸಂವಿಧಾನವನ್ನು ತಿದ್ದುಪಡಿ ಮಾಡುವುದರ ಮೂಲಕ
ಜನತೆಗೆ ವಿವಿಧ ರೀತಿಯ ಅಧಿಕಾರವನ್ನು ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಕಾರ್ಯಾದ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಹಿಳಾ ಘಟಕದ
ಅಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿಗೌಡ, ಎಸ್.ಎಂ.ಎಲ್ ತಿಪ್ಪೇಸ್ವಾಮಿ, ಪರಿಶಿಷ್ಟ ಪಂಗಡಗಳ ವಿಭಾಗದ ಜಿಲ್ಲಾ ಅಧ್ಯಕ್ಷರಾದ
ಬಿ.ಮಂಜುನಾಥ್, ಪರಿಶಿಷ್ಟ ಜಾತಿಗಳ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಎಸ್.ಜಯ್ಯಣ್ಣ, ಜಿಲ್ಲಾ ಆಲ್ಪಸಂಖ್ಯಾತರ ಅಧ್ಯಕ್ಷರಾದ ಸೈಯದ್
ಖುದ್ದುಸ್, ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷರಾದ ಎನ್.ಡಿ.ಕುಮಾರ್, ಖಾಸಿಂಆಲಿ, ಲೋಕೇಶ್, ಚೋಟು, ನಗರಸಭೆಯ ಮಾಜಿ
ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *