Delhi Capitals: ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್ ಆಟಗಾರನಿಂದ ಮಹಿಳೆಯ ಜೊತೆ ಅನುಚಿತ ವರ್ತನೆ: ಫ್ರಾಂಚೈಸಿಯಿಂದ ಶಾಕಿಂಗ್ ನಿರ್ಧಾರ

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ರೋಚಕತೆ ಸೃಷ್ಟಿಸುತ್ತಿದೆ. ಆದರೆ, ಕಳೆದ ಬಾರಿ ಭರ್ಜರಿ ಪ್ರದರ್ಶನ ತೋರಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಮಂಕಾಗಿ ಹೋಗಿದೆ. ಆಡಿದ ಏಳು ಪಂದ್ಯಗಳ ಪೈಕಿ ಕೇವಲ ಎರಡರಲ್ಲಷ್ಟೆ ಜಯ ಸಾಧಿಸಿದೆ. ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿರುವ ಡೆಲ್ಲಿ ತಂಡಕ್ಕೆ ಇದೀಗ ಮತ್ತೊಂದು ಆಘಾತ ಉಂಟಾಗಿದೆ.ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಸ್ಟಾರ್ ಆಟಗಾರನೊಬ್ಬ ಮಹಿಳೆಯ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾರಂತೆ. ಈ ಬಗ್ಗೆ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದ್ದು, ಡೆಲ್ಲಿಯ ಓರ್ವ ಆಟಗಾರ ಪಾರ್ಟಿಯಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.ಸೋಮವಾರ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ನಡೆದ ಪಾರ್ಟಿಯಲ್ಲಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ. ಆಟಗಾರನ ಹೆಸರು ಬಹಿರಂಗ ಗೊಳಿಸಿಲ್ಲ. ಆದರೆ, ಘಟನೆಯ ನಂತರ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕಠಿಣ ನೀತಿ ಸಂಹಿತೆಯನ್ನು ಜಾರಿಗೊಳಿಸಿದೆ.ಡೆಲ್ಲಿ ಫ್ರ್ಯಾಂಚೈಸ್ ಹೊಸ ನಿರ್ಬಂಧಗಳನ್ನು ಜಾರಿಗೊಳಸಿದ್ದು, ಇನ್ನುಮುಂದೆ ಅತಿಥಿಗಳು ಆಟಗಾರರ ಕೊಠಡಿಗಳನ್ನು ಪ್ರವೇಶಿಸಲು ಅನುಮತಿ ಬೇಕಾಗಿದೆ. ಡೆಲ್ಲಿ ಆಟಗಾರರ ಕೊಠಡಿಗಳಲ್ಲಿ ರಾತ್ರಿ 10 ಗಂಟೆಯ ನಂತರ ಪರಿಚಯಸ್ಥರನ್ನು ಅನುಮತಿಸಲು ನಿರ್ಬಂಧವನ್ನು ಹಾಕಲಾಗಿದೆ.ಇನ್ನು ಆಟಗಾರರ ರೂಮ್​ನೊಳಗೆ ಪ್ರವೇಶ ಪಡೆಯಬೇಕಾದರೆ ಫೋಟೋ ಗುರುತಿನ ಜೊತೆಗೆ ಐಪಿಎಲ್ ತಂಡದ ಅಧಿಕಾರಿಯ ಅನುಮತಿಯನ್ನು ಪಡೆಯಬೇಕು. ಇಲ್ಲದಿದ್ದರೆ, ಆಟಗಾರರು ತಮ್ಮ ಅತಿಥಿಗಳನ್ನು ಹೋಟೆಲ್‌ನ ರೆಸ್ಟೋರೆಂಟ್ ಅಥವಾ ಕಾಫಿ ಶಾಪ್‌ನಲ್ಲಿ ಭೇಟಿ ಆಗಬಹುದು ಎಂದು ಹೇಳಿದೆ.ಅಂತೆಯೆ ಡೆಲ್ಲಿ ಆಟಗಾರರು ಇನ್ನುಮುಂದೆ ಹೋಟೆಲ್‌ನಿಂದ ಹೊರಗಡೆ ಹೋಗುವಾಗ ಫ್ರಾಂಚೈಸಿಗೆ ತಿಳಿಸಬೇಕು. ಪ್ಲೇಯರ್ಸ್ ತಮ್ಮ ಸ್ವಂತ ಖರ್ಚಿನಲ್ಲಿ ಹೆಂಡತಿ ಮತ್ತು ಗೆಳತಿಯರ ಜೊತೆ ಇರಬಹುದು. ಆದರೆ ಕುಟುಂಬ ಸದಸ್ಯರು ಆಟಗಾರರ ಜೊತೆ ಇರುವ ಮೊದಲು ಫ್ರಾಂಚೈಸಿ ಅಧಿಕಾರಿಗಳಿಗೆ ತಿಳಿಸಬೇಕು.ಎಲ್ಲಾ ಆಟಗಾರರು ಫ್ರಾಂಚೈಸಿ ಕಾರ್ಯಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಈ ನಿಯಮವನ್ನು ಮೀರಿದರೆ ದಂಡಕ್ಕೆ ಒಳಗಾಗಬಹುದು. ಒಟ್ಟಾರೆ ಈಗಾಗಲೇ ಸೋಲಿನ ಆಘಾತದಲ್ಲಿರುವ ಡೆಲ್ಲಿ ತಂಡಕ್ಕೆ ಒಬ್ಬ ಆಟಗಾರ ಮಾಡಿದ ತಪ್ಪಿನಿಂದಾಗಿ ಎಲ್ಲ ಪ್ಲೇಯರ್ಸ್ ಶಿಕ್ಷೆ ಅನುಭವಿಸುವಂತಾಗಿದೆ.

source https://tv9kannada.com/photo-gallery/cricket-photos/delhi-capitals-player-misbehaved-with-a-woman-at-a-party-franchise-has-put-in-new-restrictions-kannada-news-vb-au48-564558.html

Leave a Reply

Your email address will not be published. Required fields are marked *