DCW vs MIW Final: ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಡೆಲ್ಲಿ-ಮುಂಬೈ ಭರ್ಜರಿ ಅಭ್ಯಾಸ: ಫೋಟೋ

ಭಾರೀ ಕುತೂಹಲ ಕೆರಳಿಸಿದ್ದ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ಫೈನಲ್ ಪಂದ್ಯ ನಡೆಯಲಿದ್ದು, ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಹಾಗೂ ಹರ್ಮನ್​ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಈಗಾಗಲೇ ಉಭಯ ತಂಡಗಳು ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿದ್ದು ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ.ಡೆಲ್ಲಿ ತಂಡದ ಪ್ರಮುಖ ಬಲ ಬ್ಯಾಟರ್​ಗಳೆಂದೇ ಹೇಳಬಹುದು. ಮುಖ್ಯವಾಗಿ ಓಪನರ್​ಗಳಾದ ನಾಯಕಿ ಲ್ಯಾನಿಂಗ್ ಮತ್ತು ಶಫಾಲಿ ವರ್ಮಾ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದು ಅಪಾಯಕಾರಿ ಆಗಿದ್ದಾರೆ.ಜಿಮಿಮಾ ರೋಡ್ರಿಗಸ್, ಯಸ್ತಿಕಾ ಭಾಟಿಯಾ, ಮರಿಝನ್ನೆ ಕಪ್, ಅಲೈಸ್ ಕ್ಯಾಪ್ಸೆ ಕೂಡ ಡೆಲ್ಲಿ ತಂಡದ ಬ್ಯಾಟಿಂಗ್ ಅಸ್ತ್ರ.ಬೌಲಿಂಗ್​ನಲ್ಲಿ ಟಾರಾ ನೋರಿಸ್ ಅಪಾಯಕಾರಿ ಆಗಿದ್ದಾರೆ. ಕಳೆದ ಪಂದ್ಯದಲ್ಲಿ ಇವರು ಆರ್​ಸಿಬಿ ವಿರುದ್ಧ 5 ವಿಕೆಟ್ ಕಿತ್ತು ಮಿಂಚಿದ್ದರು. ಶಿಖಾ ಪಾಂಡೆ, ಜೆಸ್ ಜೋನ್ಸನ್, ಅಲಿಸ್ ಕ್ಯಾಪ್ಸಿ ಪ್ರಮುಖ ಬೌಲರ್ ಆಗಿದ್ದಾರೆ.ಇತ್ತ ಮುಂಬೈ ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಎಲಿಮಿನೇಟರ್ ಪಂದ್ಯದಲ್ಲಿ ನ್ಯಾಟ್ ಸೀವರ್ ಬ್ರಂಟ್ ನೀಡಿದ ಪ್ರದರ್ಶನ ಎದುರಾಳಿಗರಲ್ಲಿ ನಡುಕ ಹುಟ್ಟಿಸಿದೆ. ಒಟ್ಟು 9 ಪಂದ್ಯಗಳಲ್ಲಿ ಇವರು 272 ರನ್ ಗಳಿಸಿದ್ದಾರೆ. 149.45 ಸ್ಟ್ರೈಕ್ ರೇಟ್ ಹೊಂದಿದ್ದಾರೆ.ಹಾಗೆಯೆ ಹೇಲಿ ಮ್ಯಾಥ್ಯೂಸ್ ಕೂಡ 9 ಪಂದ್ಯಗಳಲ್ಲಿ 127.09 ಸ್ಟ್ರೈಕ್ ರೇಟ್‌ನಲ್ಲಿ 258 ರನ್ ಗಳಿಸಿದ್ದಾರೆ. ಜೊತೆಗೆ 13 ವಿಕೆಟ್ ಪಡೆದಿದ್ದಾರೆ. ಹರ್ಮನ್​ಪ್ರೀತ್ ಯಾವುದೇ ಸಂದರ್ಭದಲ್ಲಿ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದಾರೆ.ಇಸ್ಸಿ ವಾಂಗ್ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದರು. ಸೈಕಾ ಇಶಾಕ್ ಕೂಡ ಡೇಂಜರಸ್ ಬೌಲರ್ ಆಗಿದ್ದಾರೆ.

source https://tv9kannada.com/photo-gallery/cricket-photos/wpl-2023-final-delhi-capitals-and-mumbai-indians-practice-for-womens-premier-league-final-kannada-news-vb-au48-543163.html

Views: 0

Leave a Reply

Your email address will not be published. Required fields are marked *