ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಶಿಕ್ಷಕರಿಗೆ ಅನ್ಯಾಯ: ವರ್ಗಾವಣೆ ಕೌನ್ಸಿಲಿಂಗ್ ನಿಲ್ಲಿಸುವಂತೆ ಆಗ್ರಹ.

ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಶಿಕ್ಷಕರಿಗೆ ಅನ್ಯಾಯವಾಗಿದ್ದು, ವರ್ಗಾವಣೆ ಕೌನ್ಸಿಲಿಂಗ್ ನಿಲ್ಲಿಸುವಂತೆ ಆಗ್ರಹಿಸಿ ಪ್ರಭಟನೆ ಮಾಡಲಾಗಿದೆ. ಶಿವಮೊಗ್ಗದ ಮೀನಾಕ್ಷಿ ಭವನದ ಪಕ್ಕದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರಿಂದ ಪ್ರಭಟನೆ ಮಾಡಲಾಗಿದೆ. ಇದುವರೆಗೂ 271 ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆದಿದ್ದು, ನಿಲ್ಲಿಸುವಂತೆ ಶಿಕ್ಷಕರು ಆಗ್ರಹಿಸಿದ್ದಾರೆ. 

ಶಿವಮೊಗ್ಗ, ಜುಲೈ 25: ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ (transfer counselling)​ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದೆ. ಇದರ ಬೆನ್ನಲ್ಲೇ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್​ ನಿಲ್ಲಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ನಗರದ ಮೀನಾಕ್ಷಿ ಭವನದ ಪಕ್ಕದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರತಿಭಟನೆ (Protest) ಮಾಡಲಾಗಿದೆ. ಕಳೆದ 25 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಹೊರ ಊರುಗಳಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಇವರೆಲ್ಲರೂ ವರ್ಗಾವಣೆಗೆ ಕಾಯುತ್ತಿದ್ದರು ವರ್ಗಾವಣೆ ಮಾತ್ರ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

6, 7, 8 ನೇ ತರಗತಿಗಳಿಗೆ ಪ್ರಾಥಮಿಕ ಶಿಕ್ಷಕರೇ ಪಾಠ ಮಾಡುತ್ತಿದ್ದು, ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರ ಹುದ್ದೆಯನ್ನ ನೇಮಕ ಮಾಡಿಲ್ಲ. ಹಾಗಾಗಿ 2017ರಲ್ಲಿ ಜಾರಿಗೆ ಆದ ಸಿ ಆ್ಯಂಡ್​ ಆರ್ ತಿದ್ದುಪಡಿಗೆ ಶಿಕ್ಷಕರು ಆಗ್ರಹಿಸಿದ್ದಾರೆ. ಇದುವರೆಗೂ 271 ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆದಿದ್ದು, ನಿಲ್ಲಿಸುವಂತೆ ಶಿಕ್ಷಕರು ಆಗ್ರಹಿಸಿದ್ದಾರೆ.

Source : https://tv9kannada.com/karnataka/injustice-to-teachers-in-education-ministers-home-district-demand-to-stop-transfer-counselling-karnataka-news-in-kannada-ggs-872006.html

Leave a Reply

Your email address will not be published. Required fields are marked *