
ಚಿತ್ರದುರ್ಗ: ಡಿ.12: ಭಾರತ ಸರಕಾರದ ಆಯುಷ ಸಚಿವಾಲಯವು “ದೇಶ್ ಕಾ ಪ್ರಕೃತಿ ಪರೀಕ್ಷಣ” ಎಂಬುದು ಮನುಷ್ಯನ ದೇಹ ಆರೋಗ್ಯ ಸ್ಥಿತಿಯನ್ನು ತಿಳಿಸುವ ಆಯುಷ್ ಇಲಾಖೆಯ ಒಂದು ಅಪ್ಲಿಕೇಶನ್ ಆಗಿದ್ದು ಇದರ ಮೂಲಕ ಎಲ್ಲರೂ ತಮ್ಮ ದೇಹದ ಆರೋಗ್ಯ ಪರಿಸ್ಥಿತಿಯನ್ನು ತಾವೇ ತಿಳಿದುಕೊಳ್ಳಬಹುದಾಗಿದೆ ಇದನ್ನು ಆಯುಷ್ ಇಲಾಖೆಯು ರಾಷ್ಟ್ರೀಯ ಅಭಿಯಾನವನ್ನಾಗಿ ಪ್ರತಿ ಮನೆಗೆ ಆಯುರ್ವೇದವನ್ನು ಜನರಿಗೆ ಹೆಚ್ಚು ಪರಿಚಯಿಸುವ ಸಲುವಾಗಿ ಹಮ್ಮಿಕೊಂಡಿದ್ದು ಅದರ ಲಾಭವನ್ನು ಚಿತ್ರದುರ್ಗದ ಸಾರ್ವಜನಿಕರು ಹೆಚ್ಚಾಗಿ ಪಡೆದುಕೊಳ್ಳಬೇಕೆಂದು ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆಯ ಹಿರಿಯ ಆಡಳಿತ ವೈದ್ಯಾಧಕಾರಿ ಡಾ|| ಶಿವಕುಮಾರ್ ಟಿ. ಹೇಳಿದರು.

ಅವರು ಗುರುವಾರ ನಗರದ ತುರುವನೂರು ರಸ್ತೆಯ ಭಾರತೀಯ ಯೋಗ ಸಂಸ್ಥೆ ಚಿತ್ರದುರ್ಗ ಯುವ ಕೇಂದ್ರದಲ್ಲಿ ಏರ್ಪಡಿಸಿದ ‘ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನ ಕುರಿತು ಮಾಹಿತಿ ಮತ್ತು ತರಬೇತಿ ನೀಡುತ್ತಾ ಮಾತನಾಡಿ ಈ ಪರೀಕ್ಷೆಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್ಲೈನಲ್ಲಿ ಮಾಡಲಾಗುವುದು, ಇದರಲ್ಲಿ ನಾಗರಿಕರ ಮೊಬೈಲ್ ಫೋನ್ಗಳಲ್ಲಿ ಪ್ರಕೃತಿ ಪರೀಕ್ಷೆಯ ಅಭಿಯಾನದ ನಂತರ, ಅವರ ಪ್ರಕೃತಿಯ ಅನುಸಾರವಾಗಿ ಆಹಾರ ಮತ್ತು ವ್ಯಾಯಾಮದ ದಿನಚರಿ ಬಗ್ಗೆ ಮಾಹಿತಿ ಸ್ವೀಕರಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ಸಂಸ್ಥೆಯ ಅಧ್ಯಕ್ಷ ಹಾಗೂ ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ಎಲ್ಲಾ ಯೋಗ ಸಾಧಕರ ಪರವಾಗಿ ಡಾ|| ಶಿವಕುಮಾರ್ ಟಿ. ಅವರಿಗೆ ಸನ್ಮಾನಿಸಿ ಗೌರವಿಸಿದರು. ಯೋಗ ಸಂಸ್ಥೆಯ ಯೋಗ ಸಾಧಕರಾದ ವನಜಾಕ್ಷಮ್ಮ ಅಂಬುಜಾ ರೇಣುಕಾ ಸರಸ್ವತಿ ಸುಧಮ್ಮ ನಳಿನ ಶೀಲಾ ಸುನೀತಾ ಸವಿತಾ ಇನ್ನಿತರರು ಭಾಗವಹಿಸಿದ್ದರು.