
ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಆಯುಷ್ಮಾನ್, ಕರಣ : ವಣಿಜ, ಸೂರ್ಯೋದಯ – 06 : 06 am, ಸೂರ್ಯಾಸ್ತ – 07:03 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:49 – 17:26, ಯಮಘಂಡ ಕಾಲ 09:21 – 10:58, ಗುಳಿಕ ಕಾಲ 12:35 – 14:12.
ಮೇಷ ರಾಶಿ: ನಿಮ್ಮ ವ್ಯವಹಾರದ ಗುಟ್ಟನ್ನು ಹಣಕಾಸನ್ನು ನೋಡಿಕೊಳ್ಳುವನು. ನಿಮ್ಮಿಂದ ಕುಟುಂಬಕ್ಕೆ ಉತ್ತಮವಾದ ಹೆಸರು ಬರಲಿದೆ. ನೀವೇ ಆಯ್ಕೆ ಮಾಡಿಕೊಂಡ ಉದ್ಯೋಗದ ಸ್ಥಳದಿಂದ ನಿಮಗೆ ತೊಂದರೆಯಾಗಿ ಕೆಲಸವನ್ನು ಬಿಡಲಿದಗದೀರಿ. ಸಂಬಂಧಗಳಲ್ಲಿ ಭಾವನಾತ್ಮಕತೆ ಹೆಚ್ಚಿರುತ್ತದೆ. ಬಹಳದಿನಗಳ ಅನಂತೆ ನಿಶ್ಚಿಂತೆಯಿಂದ ನಿದ್ರಿಸುವಿರಿ. ಮನೆಯವರ ಅಭಿಪ್ರಾಯಕ್ಕೆ ಮೌಲ್ಯ ನೀಡಿ. ದಿನದ ಕೊನೆಯಲ್ಲಿ ಅಚ್ಚರಿಯ ಲಾಭದ ಸೂಚನೆ ಇರುವುದು. ವಹಿಸಿಕೊಟ್ಟ ಕೆಲಸದ ಮೇಲೆ ಗಮನಹರಿಸಬೇಕು. ಅದು ಕಷ್ಟವಾದರೆ ಎಲ್ಲಿಗಾದರೂ ಹೋಗಿಬನ್ನಿ. ಭೂಮಿಯ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದ್ದರೂ ಇನ್ನೊಬ್ಬರಿಗೆ ಕೊಟ್ಟೇ ಖಾಲಿಯಾಗುವುದು. ಆಪ್ತರೆನಿಸಿಕೊಂಡವರೆ ವಿಶ್ವಾಸವಿಲ್ಲದೇ ಇದ್ದಿದ್ದು, ಇನ್ಮು ನಂಬಿಕೆ ಬರಲಿದೆ. ಯಾರನ್ನೂ ಗೆಲ್ಲುವೆನು ಎಂಬ ಹುಂಬುತನ ಬೇಡ. ಸಿಟ್ಟಗೊಂಡು ಮಾತನಾಡಬೇಕಾದ ಅವಶ್ಯಕತೆ ಇಲ್ಲ. ಸಮಾಧಾನಚಿತ್ತರಾಗಿ ಮಾತನಾಡಿ. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು.
ವೃಷಭ ರಾಶಿ: ಬಂಧುಗಳು ನಿಮ್ಮನ್ನು ಭೇಟಿ ಮಾಡಬಹುದು. ಇಂದು ಚರಾಸ್ತಿಯ ವಿಚಾರಕ್ಕೆ ಸಹೋದರರ ನಡುವೆ ವಾಗ್ವಾದ ನಡೆಯಬಹುದು. ಇಂದು ಯಾವುದೇ ಪ್ಲಾನ್‌ಇಲ್ಲದೇ ಮಾಡಿದ ವ್ಯವಹಾರಗಳಲ್ಲಿ ಲಾಭವು ಅಧಿಕವಿಲ್ಲ. ಓದಿನಲ್ಲಿ ಆಸಕ್ತಿ ಕಡಿಮೆ ಇರುವುದು ಸ್ಪಷ್ಟವಾಗಿ ಕಾಣುವುದು. ಕೆಲವರು ನಿಮ್ಮ ವಿಚಾರಗಳನ್ನು ತಿರಸ್ಕರಿಸಬಹುದು. ಆಸೆಗಳನ್ನು ಹರಿಬಿಡುವುದು ನಿಮ್ಮ ಯೋಗ್ಯತೆಯನ್ನು ತಿಳಿಸುವುದು. ಹಣಕಾಸಿನಲ್ಲಿ ಸಣ್ಣ ಮೊತ್ತದ ಲಾಭ. ಮನೆಯಲ್ಲಿ ಸಂತೋಷದ ವಾತಾವರಣ. ಕೆಲಸದಲ್ಲಿ ಹೊಸ ಆಯ್ಕೆಗಳತ್ತ ಗಮನ ಹರಿಸಿ. ಶಕ್ತಿ ಮೀರಿ ಏನನ್ನೂ ಮಾಡುವುದು ಬೇಡ. ರಾಜಕೀಯ ವ್ಯಕ್ತಿಗಳು ಎಂದಿಗಿಂತಲೂ ಹೆಚ್ಚು ವಾಗ್ವಾದವನ್ನು ಮಾಡುವರು. ಯಾರನ್ನೋ ಗಾಬರಿಗೊಳಿಸವುದು ಸರಿಯಲ್ಲ. ಬೇಕೆಂದೇ ಸಮಸ್ಯೆಗಳನ್ನು ನಿಮ್ಮ ಬುಡಕ್ಕೆ ಎಳೆದುಕೊಳ್ಳಬೇಡಿ. ಹೇಳಬೇಕಾದ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ. ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ.
ಮಿಥುನ ರಾಶಿ: ಎಷ್ಟೇ ಉಪಕಾರದ ಗುಣವಿದ್ದರೂ ದುರ್ಗುಣವು ಎಲವನ್ನೂ ತಿಂದುಹಾಕಬಹುದು. ಇಂದು ನಿರುಪಯೋಗಿ ವಸ್ತುಗಳನ್ನು ಅನ್ಯರಿಗೆ ಕೊಡುವಿರಿ. ಎಲ್ಲವನ್ನೂ ಮಾತಿನಿಂದಲೇ ಬಗೆಹರಿಸಲಾಗದು. ನಿಶ್ಚಿತ ಆದಾಯವು ನಂಬಿ ಸಾಲವನ್ನು ಪಡೆಯುವಿರಿ. ಗಮನದಿಂದ ಕಾರ್ಯ ಮಾಡಿದರೆ ಯಶಸ್ಸು ಖಚಿತ. ಹಣಕಾಸಿನಲ್ಲಿ ಉತ್ತಮ ಸುಧಾರಣೆ. ಹಳೆಯ ಸಮಸ್ಯೆಗಳಿಗೆ ಪರಿಹಾರ. ಉದ್ಯೋಗದಲ್ಲಿ ಬೆಳವಣಿಗೆ ಸಾಧ್ಯ. ಸಂಬಂಧಗಳಲ್ಲಿ ನಂಬಿಕೆ ಬಲವಾಗಲಿ. ನಿಮ್ಮ ಇಂದಿನ ಮಾತು ಕೇಳಿ ನೀವೊಬ್ಬ ವಾಚಾಳಿ ಎಂಬ ಬಿರುದನ್ನು ಪಡೆಯುವಿರಿ. ಸರ್ಕಾರದಿಂದ ಬರುವ ಹಣವು ವಿಳಂಬವಾಗಿ ಬರಲಿದೆ. ವಾಹನದಲ್ಲಿ ಸುತ್ತಾಡುವ ಬಯಕೆ ಇರಲಿದೆ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವ ಸ್ಥಿತಿವಬಂದಾಗ ಒಮ್ಮೆ ಪರಿಶೀಲಿಸಿ ವಸ್ತುಗಳನ್ನು ತರುವಿರಿ. ಹೊಸ ಯೋಜನೆಗಳೂ ಅವರಿಗೆ ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು.
ಕರ್ಕಾಟಕ ರಾಶಿ: ನಿಮ್ಮನ್ನು ಭದ್ರಪಡಿಸಿಕೊಂಡು ಅನಂತರ ಇನ್ನೊಂದನ್ನು ಪಡೆಯುವ ಬಗ್ಗೆ ಯೋಚಿಸಿ. ಅವಿವಾಹಿತರಿಗೆ ಇಂದು ವಿವಾಹಕ್ಕೆ ಯೋಗ್ಯವಾದ ಮಾತುಗಳು ಕೇಳಿಸಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಇಂದು ಪತಿಯ ವರ್ತನೆಯು ಬದಲಾದಂತೆ ತೋರುವುದು. ಹಣಕಾಸಿನ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸರಿಯಾದ ಸಮಯ. ಸಂಬಂಧಗಳಲ್ಲಿ ಗಂಭೀರವಾಗಿ ವರ್ತಿಸಿ. ನಿಮ್ಮ ಶ್ರಮವನ್ನು ಗುರುತಿಸಲಾಗುತ್ತದೆ. ಪ್ರವಾಸ ಯೋಜನೆ ಮುಂದೂಡುವ ಸಾಧ್ಯತೆ. ಸುಮ್ಮನೇ ಎಲ್ಲರನ್ನು ಅನುಮಾನದ ಕಣ್ಣಿನಿಂದ ನೋಡಿ, ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ತೈಲದ ವ್ಯಾಪಾರದಲ್ಲಿ ಅಭಿವೃದ್ಧಿಯು ಕುಂಠಿತವಾಗಿರುತ್ತದೆ. ಸ್ಥಿರಾಸ್ತಿಯನ್ನು ಅಗ್ಗದ ಬೆಲೆಗೆ ಮಾರಾಟಕ್ಕೆ ಇಟ್ಟರೂ ಖರೀದಿಯಾಗದೇ ಇರುವುದು ಆತಂಕವನ್ನು ತರಿಸುವುದು. ಕಂಡಿದ್ದನ್ನು ಕಂಡಂತೆ ಹೇಳುವುದು ಸರಿಯೇ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ.
ಸಿಂಹ ರಾಶಿ: ವಿದೇಶದಿಂದ ಬರುವಾಗ ಮನೆಯವರಿಗೆ ಅತಂಕ. ಇಂದು ಮನೆಯನ್ನು ನೋಡಿಕೊಳ್ಳುವ ಹೊಣೆ ನಿಮಗೆ ಸಿಗಲಿದೆ. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ಅಪವಾದಗಳು ಬರಬಹುದು. ಒಪ್ಪಂದದ ಕುರಿತು ಯೋಚನೆ ಆಗಬಹುದು. ಹಣಕಾಸಿನಲ್ಲಿ ಸ್ಪಷ್ಟತೆ ಇರಲಿ. ಆರೋಗ್ಯದಲ್ಲಿ ಸಾಧಾರಣ ಸ್ಥಿತಿ. ಸಹೋದ್ಯೋಗಿಯ ಜೊತಡ ಸ್ಪರ್ಧೆ ಎದುರಾಗಬಹುದು. ನಿಮ್ಮ ಶ್ರದ್ಧೆ ಹಾಗೂ ಸಮರ್ಥನೆಯಿಂದ ಜಯ ಸಿಗುವುದು ಖಚಿತ. ನಿಮ್ಮ ನಡೆ ಅನುಮಾನವನ್ನು ತರಿಸಬಹುದು. ಕಛೇರಿಯ ವ್ಯವಹಾರವು ಸಾಕೆನಿಸುವಷ್ಟು ಒತ್ತಡ ಬರಬಹುದು. ಭಾವೋದ್ವೇಗದಲ್ಲಿ ಏನನ್ನಾದರೂ ಹೇಳುವಿರಿ. ಸಾಲ ಮಾಡುವ ಸಂದರ್ಭವು ಬಂದರೆ ನಿಮಗೆ ಬೇಕಾದಷ್ಟು ಮಾತ್ರ ಪಡೆದುಕೊಂಡು ತೀರಿಸಲು ಯತ್ನಿಸಿ. ಸಿಗುವಷ್ಟನ್ನೂ ಆಸೆಯಿಂದ ತೆಗೆದುಕೊಳ್ಳಬೇಡಿ. ಭವಿಷ್ಯತ್ತಿನಲ್ಲಿ ತೊಂದರೆಯಾದೀತು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು.
ಕನ್ಯಾ ರಾಶಿ: ಯೋಗ್ಯವಾದ ಭೂಮಿ ಸಿಗದೇ ಒದ್ದಾಟ ಮಾಡುವಿರಿ. ಇಂದು ನಿಮ್ಮ ಉದ್ಯಮದಲ್ಲಿ ಆದ ನಷ್ಟದಿಂದ ಮನಸಿನೊಳಗೆ ಸಂಕಟಪಡುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಇಂದು ಹೆಚ್ಚಿನ ಲಾಭವನ್ನು ನಿರೀಕ್ಷಿತ ಲಾಭವನ್ನು ಕಾಣಬಹುದಾಗಿದೆ. ಹಳೆಯ ಸಾಲ ತೀರಿಸಬಹುದಾದ ಅವಕಾಶ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳು. ಮನಸ್ಸಿನಲ್ಲಿ ದೃಢತೆ ಇಟ್ಟುಕೊಳ್ಳಿ. ಸ್ನೇಹಿತರಿಂದ ಬೆಂಬಲ ನಿರೀಕ್ಷಿಸಬಹುದು. ವಿದೇಶದಿಂದ ಹಣದ ವ್ಯವಹಾರವನ್ನು ಇಟ್ಟುಕೊಂಡರೆ ಕಷ್ಟವಾದೀತು. ನಿಮ್ಮ ಸ್ನೇಹಿತರ ನಡುವೆ ಬಾಂಧವದಲ್ಯವು ಬಲವಾಗಲಿದೆ. ಪರೀಕ್ಷೆಯನ್ನು ಎದುರಿಸಲು ಸಕಲರೀತಿಯಲ್ಲಿಯೂ ಸಜ್ಜಾಗಲಿದ್ದೀರಿ. ನೀವು ಮಾಡುವ ಕಾರ್ಯದಲ್ಲಿ ಪ್ರಯತ್ನವು ಪೂರ್ಣವಿರಲಿ. ಫಲದ ಅಪೇಕ್ಷೆಯನ್ನು ಬಿಡುವುದು ಉತ್ತಮ. ಇನ್ನೊಬ್ಬರ ವಿಶ್ವಾಸ ಗಳಿಸಿ, ಅವರಿಂದ ಕೆಲಸವನ್ನು ಪಡೆಯುವಿರಿ. ಕುಟುಂಬದಿಂದ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಮಕ್ಕಳು ನಿಮ್ಮನ್ನು ಪ್ರೀತಿಸುವರು. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು.
ತುಲಾ ರಾಶಿ: ಕೇಳಿದವರಿಗೆ ನೀರು ಕೊಟ್ಟು ನೀವು ತೃಪ್ತರಾಗುವಿರಿ. ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ. ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ಅವಕಾಶಗಳು ನಿಮ್ಮ ಕೈತಪ್ಪುವ ಸಾಧ್ಯತೆ ಇದೆ. ಇಷ್ಟು ದಿನ ಹಿಡಿದಿಟ್ಟುಕೊಂಡ ಕೋಪವು ಸ್ಫೋಟವಾಗಿ ಮನೆಯು ರಣಾಂಗಣದಂತೆ ಕಾಣಬಹುದು. ಬದಲಾವಣೆಯೊಂದಿಗೆ ಹೊಂದಾಣಿಕೆ ಸಾಧಿಸುವ ಕೌಶಲ ಅಗತ್ಯ. ಹಣಕಾಸಿನಲ್ಲಿ ಅಪೇಕ್ಷಿತ ಪ್ರಗತಿ ಕಾಣಿಸದಿದ್ದರೂ, ಮುಂದೆ ಫಲ ಇದೆ. ಆರೋಗ್ಯದಲ್ಲಿ ಸಣ್ಣ ಬದಲಾವಣೆಗಳು ಅಸಹಜ ತೊಂದರೆ ತರಬಹುದು. ಎಲ್ಲದಕ್ಕೂ ಕಾರಣ ಬೇಕೆಂದಿಲ್ಲ. ಖುಷಿ ಪಡಿ ಸಾಕು. ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ದೂರವಾಗುವರು. ನಿಮ್ಮ ಖ್ಯಾತಿ ಮತ್ತು ಸ್ಥಾನಮಾನಗಳು ಹೆಚ್ಚಾಗಬಹುದು. ನೀವು ಬದಲಾಗಬೇಕು ಎಂದುಕೊಂಡರೂ ಸ್ನೇಹಿತರ ಬಳಗ ನಿಮ್ಮನ್ನು ಸುಮ್ಮನೆ ಬಿಡದು. ತಂದೆ-ತಾಯಿಗಳು ಮಕ್ಕಳ ಮೇಲೆ ಕಣ್ಣಿಡುವುದು ಒಳ್ಳೆಯದು. ಮಕ್ಕಳ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ.
ವೃಶ್ಚಿಕ ರಾಶಿ: ಮನೆಗೆ ಬಂದವರ ಬಗ್ಗೆ ಸರಿಯಾದ ಗಮನವಿರಲಿ. ಎಲ್ಲರೂ ಒಂದೊಂದು ಕಾರಣಕ್ಕೆ ಬರಲಿದೆ. ನಿಮಗೆ ಸಿಗುವ ಸಾಮಾಜಿಕವಾಗಿ ಮನ್ನಣೆಯು ಅಧಿಕ ಕಾರ್ಯವನ್ನು ಮಾಡುವಂತೆ ಮಾಡೀತು. ಬಂಗಾರದ ವ್ಯಾಪರಿಗಳಿಗೆ ಲಾಭವಾಗಲಿದೆ. ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಲಿದ್ದೀರಿ. ಕುಟುಂಬದಿಂದ ಅಶುಭವಾದ ಸುದ್ದಿಯು ನಿಮಗೆ ತಿಳಿಯಲಿದೆ. ವೃತ್ತಿಯಲ್ಲಿ ನಿರ್ಣಾಯಕ ದಿನವಾಗಬಹುದು. ಹಣಕಾಸಿನಲ್ಲಿ ಸ್ಥಿರತೆ ಕಾಣಬಹುದು. ವ್ಯವಹಾರದಲ್ಲಿ ಹೊಸ ಅವಕಾಶ ಸಾಧ್ಯತೆ. ಬಂಧುಬಳಗದಲ್ಲಿ ಒಳ್ಳೆಯ ಸುದ್ದಿ ನಿರೀಕ್ಷೆ. ಕೆಲವನ್ನು ಕಳೆದುಕೊಂಡು ಸುಖಪಡುವುದೇ ಉತ್ತಮ. ಕುಟುಂಬದಲ್ಲಿ ಸಮೃದ್ಧಿ ಬೇಕಾದರೆ ಒಬ್ಬರೇ ತೀರ್ಮಾನಕ್ಕೆ ಬರಬೇಕು. ಎಲ್ಲರನ್ನೂ ಅನುಸರಿಸಿದರೆ ಕೆಲಸ ಕೆಡುವುದು. ಆಸ್ತಿಯ ಖರೀದಿಯ ವಿಚಾರಗಳನ್ನು ಆದಷ್ಟು ವೇಗವಾಗಿ ತೀರ್ಮಾನ ಮಾಡಿ ಮುಗಿಸಿಕೊಳ್ಳಿ. ದೇಹದಂಡನೆಗೆ ಸರಿಯಾದ ಮಾರ್ಗವನ್ನು ಅನುಸರಿಸಿ. ನಿಮ್ಮ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು.
ಧನು ರಾಶಿ: ಉಚಿತದಿಂದ ನಿಮ್ಮ ಹಣವೇ ನಷ್ಟವೇ ಇಲ್ಲದಂತಾಗುವುದು. ಇಂದು ನಿಮ್ಮ ದಾಂಪತ್ಯದ ಬಿರುಕು ನ್ಯಾಯಾಲಯದ ಮೆಟ್ಟಿಲೇರಿಸಲೂಬಹುದು. ಆಸ್ತಿಯ ವಿಚಾರದಲ್ಲಿ ಕಲಹಗಳು ಉಂಟಾಗಬಹುದು. ನಿಮ್ಮ ಬಗ್ಗೆ ಅಪಪ್ರಚಾರಗಳು ಕೇಳಿ ಬರಬಹುದು. ವ್ಯಕ್ತಿಗತ ಸಮಸ್ಯೆಗಳು ಮನಸ್ಸಿಗೆ ಭಾರವಾಗಬಹುದು. ಆತ್ಮಸ್ಥೆರ್ಯದಿಂದ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯದಲ್ಲಿ ಇವಿಶ್ರಾಂತಿ ಅಗತ್ಯ. ಸಂಜೆಯ ವೇಳೆಗೆ ಶಾಂತ ಮನಸ್ಥಿತಿ ಮೂಡಬಹುದು. ನಿಮಗೆ ಹೊಸ ಶಕ್ತಿ ಸಿಗುತ್ತದೆ. ನಿಮ್ಮ ಗುರಿಯ ಕಡೆಗೆ ಹೆಚ್ಚಿನ ದೃಷ್ಟಿ ಇರಲಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ದೂರದ ಊರಿನಲ್ಲಿ ಅವಕಾಶ ಸಿಕ್ಕರೂ ಹೋಗಲು ಆಗದ ಸ್ಥಿತಿ ಇರುವುದು. ಕೆಲಸದ ಸ್ಥಳದಲ್ಲಿ ನಿಮ್ಮ ವ್ಯವಸ್ಥಾಪಕರ ಜೊತೆ ಉತ್ತಮ ಹೊಂದಾಣಿಕೆಯನ್ನು ಇಟ್ಟುಕೊಂಡಿರುವಿರಿ. ವಂಚಿಸುವ ಯೋಚನೆ ಮಾಡಿದ್ದರೆ ಅದನ್ನು ಮರೆತುಬಿಡಿ. ಎಲ್ಲದಕ್ಕೂ ಯಾರನ್ನಾದರೂ ಕಾರಣವಾಗಿಸುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳು ಯಾರ ಬೆಂಬಲಕ್ಕೂ ಕಾಯದೇ ಪ್ರತಿಭಾಪ್ರದರ್ಶನಕ್ಕೆ ಮುನ್ನುಗ್ಗುವರು.
ಮಕರ ರಾಶಿ: ಬೆನ್ನ ಹಿಂದೆ ಇರುವವರನ್ನು ಗಮನಸಿಕೊಳ್ಳದೇ ಮಾಡಿದ ಕೆಲಸ ಕೆಡುವುದು. ಹಣದ ಪ್ರಾಮುಖ್ಯವನ್ನು ತಿಳಿದುಕೊಳ್ಳುವ ಸಮಯವಿಂದು. ನಿಮ್ಮ ವಿದ್ಯುದುಪಕರಣದಿಂದ ನಿಮಗೆ ನಷ್ಟವಾಗಲಿದೆ. ನಿಮ್ಮ ಶತ್ರುಗಳನ್ನು ನೀವು ಸಂಪೂರ್ಣವಾಗಿ ಸೋಲಿಸಿದ್ದೇನೆ ಎಂಬ ಭಾವನೆ ಇರಬಹುದು. ನಿಮ್ಮೊಳಗಿನ ಹೊಸ ಸಾಮರ್ಥ್ಯವನ್ನು ಬೆಳಕಿಗೆ ತರುತ್ತದೆ. ಕೆಲಸದಲ್ಲಿ ಹೊಸ ಅವಕಾಶಗಳು ಬರುವ ನಿರೀಕ್ಷೆಯಿದೆ. ಆರೋಗ್ಯದಲ್ಲಿ ಸುಧಾರಣೆಯ ಲಕ್ಷಣ. ದೀರ್ಘಕಾಲದ ಸಂಕಷ್ಟಕ್ಕೆ ಪರಿಹಾರ ದೊರೆಯಬಹುದು. ಬುದ್ದಿವಂತಿಕೆ ನಿಮ್ಮ ಶಕ್ತಿಯಾಗಲಿದೆ. ಮಕ್ಕಳ ಕಾರಣದಿಂದ ನಿಮಗೆ ನೀವು ತಲೆ ತಗ್ಗಿಸುವಿರಿ. ಬುದ್ಧಿವಾದವನ್ನು ಮಕ್ಕಳಿಗೆ ಹೇಳುವಿರಿ. ಸಾಲಕೊಡುವಾಗ ವಿವೇಚನೆ ಇರಲಿ. ಅತಿಯಾದ ವಿನಯವು ನಿಮ್ಮ ಮೇಲೆ ಅನುಮಾನವು ಬರುವಂತೆ ಮಾಡುವುದು. ನಿಮ್ಮ ಇಂದಿನ ಸಮಯವನ್ನು ನೀವು ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಖಾಸಗಿ ತನಕ್ಕೆ ತೊಂದರೆಯಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ.
ಕುಂಭ ರಾಶಿ: ಇಂದು ಶೀಘ್ರ ಕೋಪ ಮಾಡಿಕೊಳ್ಳುವುದು ಬೇಡ. ಸಜ್ಜನರ ಭೇಟಿಯಾಗುವ ಸಾಧ್ಯತೆ ಇದೆ. ಆಪ್ತರ ಜೊತೆ ಉದ್ಯೋಗಕ್ಕೆ ಸಂಬಂಧಿಸಿದ ಸಮಾಲೋಚನೆಯನ್ನು ನಡೆಸುವಿರಿ. ನಿಮ್ಮ ಶತ್ರುಗಳು ನಿಮ್ಮನ್ನು ಸೋಲಿಸಲು ತಯಾರಾಗಿರುವರು. ನಿಮ್ಮ ಬಳಿ ಇರುವ ಕೆಲವು ವಸ್ತುಗಳನ್ನು ಇನ್ನೊಬ್ಬರಿಗೆ ನೀಡುವಿರಿ. ಮನೆಯ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಹಣಕಾಸಿನಲ್ಲಿ ಮಧ್ಯಮ ಸ್ಥಿತಿ ನಿರೀಕ್ಷಿಸಬಹುದು. ಆರೋಗ್ಯದಲ್ಲಿ ಸಾಧಾರಣ ಸ್ಥಿತಿ ಇರುತ್ತದೆ. ಮಕ್ಕಳ ಸಾಧನೆಯಿಂದ ಹೆಮ್ಮೆ ಪಡುವಿರಿ. ಆತ್ಮವಿಶ್ವಾಸದಿಂದ ನಿಮಗೆ ಇನ್ನಷ್ಟು ಬಲ ಬರಲಿದೆ. ಪ್ರವಾಸದಿಂದ ನಿಮಗೆ ಆಯಾಸವಾಗಲಿದೆ. ಜೋಪಾನಮಾಡಿ ಇಟ್ಟುಕೊಳ್ಳಿ. ಸಾಧಿಸುವ ಛಲವಿದ್ದರೂ ಪರಿಸ್ಥಿತಿ ಅನುಕೂಲವಾಗಿ ಇರದು. ಸದಾ ನಿದ್ರೆ ಮಾಡುವ ಯೋಚನೆ ಇರಲಿದೆ. ನಿಮ್ಮ ಅಂದಾಜು ಮೀರಬಹುದು. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಮಾರಾಟದ ವಿಷಯದಲ್ಲಿ ಹಿನ್ನಡೆಯಾಗಲಿದೆ. ಆಕಸ್ಮಿಕವಾಗಿ ಆರೋಗ್ಯವು ಹದ ತಪ್ಪಬಹುದು.
ಮೀನ ರಾಶಿ: ಅಸಲು ಸಂಗತಿಗಳಿಂದ ನೀವು ಬಹಳ ದೂರ ಬಂದಿರುವಿರಿ. ಒತ್ತಡದ ನಡುವೆಯೂ ಕಾರ್ಯನಿರ್ವಹಣೆ ಮಾಡಿದ ಕೌಶಲಕ್ಕೆ ಪ್ರಂಶಸೆಗಳು ಸಿಗಲಿವೆ. ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿಸಿ. ಅನೇಕ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ಇಂದು ವಿದ್ಯಾರ್ಥಿಗಳು ದೂರದ ಊರಿಗೆ ಹೆಚ್ಚಿನ ಹಣಕಾಸಿನಲ್ಲಿ ಸತತ ನಿರೀಕ್ಷೆಗಳಿದ್ದರೂ ಚಿಕ್ಕ ನಷ್ಟವೊಂದು ಸಂಭವಿಸಬಹುದು. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಕಾಣಿಸಬಹುದು. ಹಳೆಯ ಸ್ನೇಹಿತರಿಂದ ಪರಿಹಾರ ಸಿಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಖ್ಯಾತಿಯೂ ಹಣವೂ ಸಿಗಲಿದೆ. ನಿಮ್ಮ ಧಾರ್ಮಿಕ ಭಾವನೆಗಳಿಗೆ ತೊಂದರೆ ಕೊಡಬಹುದು. ಯಾರಾದರೂ ತೊಂದ ಹೊಸ ಯೋಜನೆಯ ಕೆಲಸವನ್ನು ನೀವು ಪ್ರಾರಂಭಿಸುವಿರಿ. ವೃತ್ತಿಜೀವನದಲ್ಲಿ ಮುಂದುವರಿಯಲು ನೂತನ ಅವಕಾಶಗಳು ನಿಮಗೆ ಸಿಗಲಿವೆ. ಜೀವನದ ಹಾದಿಯಲ್ಲಿ ಹೆಚ್ಚು ಏರಿಳಿತಗಳು ಇರದೇ ಆರಾಮಾಗಿ ಹೋಗುವಿರಿ.