ಚಿತ್ರದುರ್ಗ ನ. 26
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಚಿತ್ರದುರ್ಗ ಜಿಲ್ಲಾ ಹಾಗೂ ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಯ ಯೋಜನೆಯ ಕಾರ್ಯಕರ್ತರಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ. ಡಿ ವೀರೇಂದ್ರ ಹೆಗ್ಗಡೆಯವರ 78ನೆಯ ಹುಟ್ಟುಹಬ್ಬವನ್ನು ಬಸವೇಶ್ವರ ವಿದ್ಯಾ ಸಂಸ್ಥೆ (ರಿ) ಹೇಮಾವತಿ, ವಿಕಲಚೇತನರ ಮಹಿಳೆಯರ ಹಾಗೂ ಅನಾಥ ಮಕ್ಕಳ ಆಶ್ರಮದಲ್ಲಿ ಆಯೋಜನೆ ಮಾಡಲಾಯಿತು.
ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷರಾದ ಅರುಣ್ ಕುಮಾರ್ ಧರ್ಮಸ್ಥಳ ಸಂಸ್ಥೆ ಹಲವಾರು ವರ್ಷಗಳಿಂದ ಜನಪರ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿದೆ, ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕಲು ಸಂಸ್ಥೆ ತಿಳಿಸಿಕೊಟ್ಟಿದೆ,ಹಾಗೂ ರೈತರಿಗೆ ಕೃಷಿ ಕಾರ್ಯಕ್ರಮ, ಕೃಷಿ ಮೇಳ ಕಾರ್ಯಕ್ರಮಗಳನ್ನು ನೆಡೆಸುತ್ತಿದ್ದಾರೆ, ಸಂಸ್ಥೆ ಶಿಕ್ಷಣ, ಆರೋಗ್ಯ, ಕ್ಷೇತ್ರದಲ್ಲಿ ಸೇವೆ ನೀಡುತ್ತಿದೆ, ಪ್ರತಿನಿತ್ಯ ಧರ್ಮಸ್ಥಳದ ದರ್ಶನಕ್ಕೆ ಬರುವ ಸಾವಿರಾರು ಭಕ್ತರಿಗೆ ದಿನ ಪ್ರತಿ ಅನ್ನದಾಸೋಹ ಪ್ರಸಾದ ವ್ಯವಸ್ಥೆ ಒದಗಿಸುವ ಧಾರ್ಮಿಕ ಪುಣ್ಯಕ್ಷೇತ್ರವಾಗಿದೆ. ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಸವೇಶ್ವರ ವಿದ್ಯಾ ಸಂಸ್ಥೆಯ ಮಕ್ಕಳಿಗೆ ಹಣ್ಣು,ನೋಟ್‍ಬುಕ್ ಪೆನ್ನು, ಊಟದ ಟೇಬಲ್‍ಗಳನ್ನು ಧರ್ಮಸ್ಥಳ ಯೋಜನೆಯವತಿಯಿಂದ ಗಣ್ಯರ ಮೂಲಕ ಹತ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಧರ್ಮಸ್ಥಳ ಸಂಸ್ಥೆಯ ನಿರ್ದೇಶಕರು ಕಮಲಾಕ್ಷ,ಬಸವೇಶ್ವರ ವಿದ್ಯಾ ಸಂಸ್ಥೆ ಯ ಅಧ್ಯಕ್ಷರು ಶಂಕರಪ್ಪ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ನಾಗರಾಜ್, ರಾಜು, ಶ್ರೀಮತಿ ಶಾಂತಾ ಅಶೋಕ್ ಹಾಗೂ ಸಿರಿಗೆರೆ ಯೋಜನಾಧಿಕಾರಿ ರವಿಚಂದ್ರ ಯೋಜನಾಧಿಕಾರಿ ಮಮತಾ ಭಟ್, ಹಾಗೂ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು , ವಿದ್ಯಾ ಸಂಸ್ಥೆಯ ಮಕ್ಕಳು ಭಾಗವಹಿಸಿದ್ದರು.
Views: 33