
ಇಂಡಿಯನ್ ಪ್ರೀಮಿಯರ್ ಲೀಗ್ ನ 17ನೇ (IPL 2024) ಸೀಸನ್ನ ಆರನೇ ಪಂದ್ಯ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS) ನಡುವೆ ನಡೆಯಿತು. ಈ ಪಂದ್ಯದಲ್ಲಿ ಚಿನ್ನಸ್ವಾಮಿಯ ಬ್ಯಾಟಿಂಗ್ ಪಿಚ್ ನಲ್ಲಿ ಪಂಜಾಬ್ ಬ್ಯಾಟರ್ ಗಳು ಉತ್ತಮ ಪ್ರದರ್ಶನ ನೀಡಿದರು.
ಈ ಮೂಲಕ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್ಗೆ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕರ್ನಾಟಕದ ಮನೆಮಗನಾಗಿರುವ ವಿರಾಟ್ ಕೊಹ್ಲಿ (Virat Kohli) ಅವರ ಅದ್ಭುತ ಬ್ಯಾಟಿಂಗ್ ಮೂಲಕ ನಿಗದಿತ 19.2 ಓವರ್ ಗೆ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸುವ ಮೂಲಕ 4 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದರು. ಈ ಮೂಲಕ ಆರ್ಸಿಬಿ ತಂಡ ಸೀಸನ್ ನ ಮೊದಲ ಗೆಲುವು ದಾಖಲಿಸಿದೆ.
ಪಂಜಾಬ್ ವಿರುದ್ಧ ಅಬ್ಬರಿಸಿದ ಕಿಂಗ್ ಕೊಹ್ಲಿ:
ಇನ್ನು, ಟಾಸ್ ಗೆದ್ದು ಬೌಲಿಂಗ್ ಮಾಡಿದ ಆರ್ಸಿಬಿ ತಂಡಕ್ಕೆ ಪಂಜಾಬ್ ತಂಡ 177 ರನ್ ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭದಲ್ಲಿಯೇ ನಾಯಕ ಫಾಫ್ ಡುಪ್ಲೇಸಿಸ್ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ಫಾಫ್ 3 ರನ್ ಸಿಡಿಸಿ ಔಟ್ ಆದರೆ, ಕ್ಯಾಮರೂನ್ ಗ್ರೀನ್ ಸಹ 3 ರನ್ ಗಳಿಸಿ ಪೆವೆಲಿಯನ್ ಸೇರಿದರು. ರಜತ್ ಪಾಟಿದಾರ್ ಸಹ 18 ರನ್ ಗಳಿಸಿ ಔಟ್ ಆದರೆ ಗ್ಲೇನ್ ಮ್ಯಾಕ್ಸ್ವೆಲ್ ಮತ್ತೊಮ್ಮೆ ವಿಫಲರಾಗುವ ಮೂಲಕ 3 ರನ್ ಗೆ ಪೆವೆಲಿಯನ್ ಸೇರಿದರು. ಆದರೆ ಪಂಜಾಬ್ ವಿರುದ್ಧ ಏಕಾಂಗಿಯಾಗಿ ಅಬ್ಬರಿಸಿದ ವಿರಾಟ್ ಕೊಹ್ಲಿ ಒಂದೆಡೆ ಫೋರ್ ಗಳ ಸುರಿಮಳೆಗೈದರು. ಈ ಮೂಲಕ ಕೊಹ್ಲಿ 49 ಎಸೆತದಲ್ಲಿ 11 ಫೋರ್ ಮತ್ತು 2 ಸಿಕ್ಸ್ ಮೂಲಕ 77 ರನ್ ಸಿಡಿಸಿದರು. ಅನುಜತ್ ರಾವತ್ ಸಹ ಕೇವಲ 11 ರನ್ ಗಳಿಸಿ ಎಲ್ಬಿ ಬಲೆಗೆ ಬಲಿಯಾದರು.
ಆದರೆ ಕೊಹ್ಲಿ ವಿಕೆಟ್ ಪತವಾಗುತ್ತಿದ್ದಂತೆ ಒಮ್ಮೆಲೆ ಪಂದ್ಯ ಪಂಜಾಬ್ ಕಡೆ ವಾಲಿದಂತಾಯಿತು. ಆದರೆ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಮತ್ತು ಇಂಫ್ಯಾಕ್ಟ್ ಪ್ಲೇಯರ್ ಆಗಿದ್ದ ಮಹಿಪಾಲ್ ಲೋಮ್ರೋರ್ ಅವರ ಅದ್ಭುತ ಜೊತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ದಿನೇಶ್ ಕಾರ್ತಿಕ್ 10 ಎಸೆತದಲ್ಲಿ 2 ಸಿಕ್ಸ್ ಮತ್ತು 3 ಬೌಂಡರಿ ಮೂಲಕ 28 ರನ್ ಹಾಗೂ ಲೋಮ್ರೋರ್ 8 ಎಸೆತದಲ್ಲಿ 1 ಸಿಕ್ಸ್ ಮತ್ತು 2 ಫೋರ್ ಮೂಲಕ 17 ರನ್ ಗಳಿಸಿ ಮಿಂಚಿದರು.
ಪಂಜಾಬ್ ಉತ್ತಮ ಬ್ಯಾಟಿಂಗ್:
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು vs ಪಂಜಾಬ್ ಪಂದ್ಯದ ಆರಂಭದಲ್ಲಿ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಪಂಜಾಬ್ ಕಿಂಗ್ಸ್ಗೆ ಮೊದಲು ಬ್ಯಾಟಿಂಗ್ ಆರಂಭಿಸಿತು. ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಶಿಖರ್ ಧವನ್ 45 ರನ್, ಪ್ರಭಾಸಿಮ್ರಾನ್ ಸಿಂಗ್ 28 ರನ್, ಲಿವಿಂಗ್ಸ್ಟೋನ್ 17 ರನ್, ಸ್ಯಾಮ್ ಕರನ್ 23 ರನ್, ಜಾನಿ ಬೇರ್ಸಅಟೋ 8 ರನ್, ಲೀವಿಂಗ್ಸ್ಟನ್ 17 ರನ್, ಜಿತೇಶ್ ಶರ್ಮಾ 27 ರನ್ ಮತ್ತು ಸುಶಾಂಕ್ ಸಿಂಗ್ 21 ರನ್ ಗಳಿಸಿದರು. ಆರ್ಸಿಬಿ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್, ಗ್ಲೆನ್ ಮ್ಯಾಕ್ಸ್ವೆಲ್ 2 ವಿಕೆಟ್ ಪಡೆದರೆ, ಯಶ್ ದಯಾಲ್ 1 ವಿಕೆಟ್, ಅಲ್ಜಾರಿ ಜೋಸೆಫ್ 1 ವಿಕೆಟ್ ಪಡೆದರು. ಪಂಜಾಬ್ ಕಿಂಗ್ಸ್ 10 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1