IPL 2023: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನು ಹಿಂದಿಕ್ಕಿದ ಧೋನಿ

IPL 2023 Records: ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ 12 ರನ್​ ಬಾರಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ನಲ್ಲಿ 5 ಸಾವಿರ ರನ್​ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 5ನೇ ಭಾರತೀಯ ಹಾಗೂ 7ನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಯುವ ಧೋನಿ ಇತರೆ ಮೂವರು ಭಾರತೀಯ ಆಟಗಾರರಿಗಿಂತ ವೇಗವಾಗಿ 5 ಸಾವಿರ ರನ್ ಪೂರೈಸಿರುವುದು ವಿಶೇಷ. ಅಂದರೆ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿಗಿಂತ ಕಡಿಮೆ ಎಸೆತಗಳನ್ನು ಎದುರಿಸಿ ಧೋನಿ ಈ ಸಾಧನೆ ಮಾಡಿದ್ದಾರೆ.ಐಪಿಎಲ್​ನಲ್ಲಿ 5 ಸಾವಿರ ರನ್ ಪೂರೈಸಲು ಭಾರತೀಯ ಬ್ಯಾಟರ್​ಗಳು ತೆಗೆದುಕೊಂಡಿರುವ ಎಸೆತಗಳೆಷ್ಟು ಎಂದು ನೋಡೋಣ...1- ಸುರೇಶ್ ರೈನಾ: ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಲಯನ್ಸ್ ಪರ ಆಡಿದ್ದ ಸುರೇಶ್ ರೈನಾ ಕೇವಲ 3619 ಎಸೆತಗಳಲ್ಲಿ 5 ಸಾವಿರ ರನ್ ಪೂರೈಸಿದ್ದರು. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ ಈ ಸಾಧನೆ ಮಾಡಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.2- ಮಹೇಂದ್ರ ಸಿಂಗ್ ಧೋನಿ: ಸಿಎಸ್​ಕೆ ತಂಡದ ನಾಯಕ ಧೋನಿ ಈ ಸಾಧನೆ ಮಾಡಲು ತೆಗೆದುಕೊಂಡಿರುವುದು 3692 ಎಸೆತಗಳು. 236 ಪಂದ್ಯಗಳಲ್ಲಿ 208 ಇನಿಂಗ್ಸ್ ಆಡಿರುವ ಮಹೇಂದ್ರ ಸಿಂಗ್ ಧೋನಿ 3692 ಎಸೆತಗಳಲ್ಲಿ 5004 ರನ್​ ಪೂರೈಸಿದ್ದಾರೆ.3- ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 3817 ಎಸೆತಗಳಲ್ಲಿ 5 ಸಾವಿರ ರನ್ ಕಲೆಹಾಕಿದ್ದರು.4- ವಿರಾಟ್ ಕೊಹ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 5 ಸಾವಿರ ರನ್ ಪೂರೈಸಲು 3827 ಎಸೆತಗಳನ್ನು ಆಡಿದ್ದರು.ಒಟ್ಟಿನಲ್ಲಿ 208 ಇನಿಂಗ್ಸ್ ಮೂಲಕ ಮಹೇಂದ್ರ ಸಿಂಗ್ ಧೋನಿ 5004 ರನ್​ ಗಳಿಸಿದ್ದು, ಈ ಮೂಲಕ ಐಪಿಎಲ್​ನಲ್ಲಿ ಐದು ಸಾವಿರ ಕಲೆಹಾಕಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

source https://tv9kannada.com/photo-gallery/cricket-photos/ipl-records-least-balls-taken-by-indian-to-reach-5000-ipl-runs-kannada-news-zp-au50-549175.html

Leave a Reply

Your email address will not be published. Required fields are marked *