ಅರೆಸ್ಟ್ ವಾರೆಂಟ್ ಇದ್ದರು ಉಕ್ರೇನ್ ಗೆ ನುಗ್ಗಿದರಾ ರಷ್ಯಾ ಅಧ್ಯಕ್ಷ..? : ರಷ್ಯಾ ಮಾಧ್ಯಮಗಳ ವರದಿ ನಂಬೋದಾ..? ಉಕ್ರೇನು ಮಾತ್ರ ಏನು ಹೇಳ್ತಿಲ್ಲ..!

ಉಕ್ರೇನ್ ದೇಶದ ಮೇಲೆ ರಷ್ಯಾ ಅಧ್ಯಕ್ಷ ಯುದ್ಧ ಸಾರಿ ವರ್ಷಗಳ ಮೇಲಾಗಿದೆ. ಸಾಕಷ್ಟು ಸಾವು ನೋವು ಸಂಭವಿಸಿದೆ. ಈ ಹಿನ್ನೆಲೆ ಅಂತರಾಷ್ಟ್ರೀಯ ಅಪರಾಧ ನ್ಯಾಯಾಲಯ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಈ ಬೆನ್ನಲ್ಲೇ ರಾಜಾರೋಷವಾಗಿ ವ್ಲಾಡಿಮರ್ ಪುಟಿನ್ ಉಕ್ರೇನ್ ನೆಲಕ್ಕೆ ಭೇಟಿ ನೀಡಿದ್ದಾರೆಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

ಉಕ್ರೇನ್ ಗೆ ಬೆಂಬಲವಾಗಿ ನಿಂತಿರುವ ಅಮೆರಿಕಾ, ನ್ಯಾಟೋ ಪಡೆಗಳಿಗೆ ರಷ್ಯಾ ಅಧ್ಯಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಉಕ್ರೇನ್ ಆಕ್ರಮಿತ ಪ್ರದೇಶಗಳಿಗೆ ಪುಟಿನ್ ಭೇಟಿ ನೀಡಿ, ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ ಎನ್ನುತ್ತಿವೆ ರಷ್ಯಾ ಮಾಧ್ಯಮಗಳು. ಉಕ್ರೇನ್ ಯುದ್ಧದಲ್ಲಿ ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿರುವ ಬಂದರು ನಗರಿ ಮರಿಯುಪೋಲ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಭೇಟಿ ನೀಡಿದ್ದಾರೆ. ಮರಿಯುಪೋಲ್ ಬಂದರು ನಗರದಿಂದ ಕೂಗಳತೆ ದೂರದಲ್ಲಿರುವ ಕ್ರಿಮಿಯಾಗೂ ಭೇಟಿ ನೀಡಿದ್ದರು ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ.

ಹೆಲಿಕಾಪ್ಟರ್ ಮೂಲಕ ಮರಿಯಪೋಲ್ ಗೆ ಬಂದಿಳಿದು, ಅಲ್ಲಿನ ಸ್ಥಳೀಯರನ್ನು ಪುಟೀನ್ ಭೇಟಿ ಮಾಡಿ, ಮಾತನಾಡಿಸಿದ್ದಾರೆ ಎನ್ನಲಾಗ್ತಾ ಇದೆ. ಆದ್ರೆ ಉಕ್ರೇನ್ ಅಧ್ಯಕ್ಷರಾಗಲಿ ಈ ಬಗ್ಗೆ ಒಂದೇ ಒಂದು ಮಾತು ಆಡಿಲ್ಲ. ಇನ್ನು ಉಕ್ರೇನ್ ಮಾಧ್ಯಮಗಳು ಸಹ ಈ ಬಗ್ಗೆ ಸುದ್ದಿ ಮಾಡಿಲ್ಲ.

The post ಅರೆಸ್ಟ್ ವಾರೆಂಟ್ ಇದ್ದರು ಉಕ್ರೇನ್ ಗೆ ನುಗ್ಗಿದರಾ ರಷ್ಯಾ ಅಧ್ಯಕ್ಷ..? : ರಷ್ಯಾ ಮಾಧ್ಯಮಗಳ ವರದಿ ನಂಬೋದಾ..? ಉಕ್ರೇನು ಮಾತ್ರ ಏನು ಹೇಳ್ತಿಲ್ಲ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/vIPNRL6
via IFTTT

Leave a Reply

Your email address will not be published. Required fields are marked *