ಈ ಕೆಲಸಗಳನ್ನು ಮನೆಯಿಂದಲೇ ಮಾಡಿ ಹಣ ಸಂಪಾದಿಸಲು ಕೇಂದ್ರ ಸರ್ಕಾರ ಸಹಾಯ ಮಾಡುತ್ತೆ ಗೊತ್ತಾ?

Business Concept: ಒಂದು ವೇಳೆ ನೀವೂ ಕೂಡ ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಲು ಯೋಜನೆ ರೂಪಿಸುತ್ತಿದ್ದರೆ, ಆತ್ಮ ನಿರ್ಭರ್ ಭಾರತ ಯೋಜನೆಯ ಮೂಲಕ ನಿಮ್ಮ ಈ ಕನಸನ್ನು ನೀವು ನನಸಾಗಿಸಬಹುದು. ಈ ಯೋಜನೆಯಡಿಯಲ್ಲಿ ಸ್ವಂತ ಉದ್ಯಮ ಆರಂಭಿಸಲು ಸಾಲ ಸೌಲಭ್ಯ ನೀಡಲಾಗುತ್ತದೆ .

ಬೆಂಗಳೂರು: ಒಂದು ವೇಳೆ ನೀವೂ ಕೂಡ ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಲು ಯೋಜನೆ ರೂಪಿಸುತ್ತಿದ್ದರೆ, ಆತ್ಮ ನಿರ್ಭರ್ ಭಾರತ ಯೋಜನೆಯ ಮೂಲಕ ನಿಮ್ಮ ಈ ಕನಸನ್ನು ನೀವು ನನಸಾಗಿಸಬಹುದು. ಈ ಯೋಜನೆಯಡಿಯಲ್ಲಿ ಸ್ವಂತ ಉದ್ಯಮ ಆರಂಭಿಸಲು ಸಾಲ ಸೌಲಭ್ಯ ನೀಡಲಾಗುತ್ತದೆ (Business News In Kannada) . ಇದಕ್ಕಾಗಿ ನಾವು ನಿಮಗೆ ಕೆಲ ವ್ಯಾಪಾರದ ಪರಿಕಲ್ಪನೆಗಳನ್ನು ನೀಡುತ್ತಿದ್ದೇವೆ. ಈ ಉದ್ಯಮಗಳನ್ನು ನೀವು ನಿಮ್ಮ ಮನೆಯಿಂದಲೇ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದು. ಈ ಉದ್ಯಮಗಳಲ್ಲಿ ಗಳಿಕೆಯೂ ಕೂಡ ಚೆನ್ನಾಗಿದೆ 

1. ನೀವು ಉತ್ತಮ ವಿದ್ಯಾರ್ಹತೆಯನ್ನು ಹೊಂದಿದ್ದು, ನಿಮ್ಮ ಸ್ವಂತ ವ್ಯವಹಾರ ಆರಂಭಿಸಲು ಬಯಸುತ್ತಿದ್ದರೆ. ನೀವು ಆನ್ಲೈನ್ ಕೋರ್ಸ್ ಆರಂಭಿಸಬಹುದು. ಬ್ಯಾಂಕ್, ಎಸ್‌ಎಸ್‌ಸಿಯಿಂದ ಸಿವಿಲ್ ಸರ್ವಿಸಸ್‌ ಪರೀಕ್ಷೆಗಳಿಗೆ ಇದೀಗ ಆನ್‌ಲೈನ್‌ನಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಇದಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ಆನ್ ಲೈನ್ ಶಿಕ್ಷಕರಿಗೂ ಭಾರಿ ಬೇಡಿಕೆ ಇದೆ. ಆನ್‌ಲೈನ್ ಕೋರ್ಸ್‌ಗಳಿಂದಲೇ ಹಲವಾರು ಕೋಟಿಗಳ ವಹಿವಾಟು ನಡೆಸುತ್ತಿರುವ ಹಲವು ವೇದಿಕೆಗಳಿವೆ. ನೀವು ಇದರಲ್ಲಿ ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ.

2. ನೀವು ಮನೆಯಲ್ಲಿ ಕುಳಿತು ವ್ಯಾಪಾರ ಮಾಡಲು ಬಯಸುತ್ತಿದ್ದರೆ, ನೀವು ಬ್ರೆಡ್ ತಯಾರಿಕೆಯ ಕೆಲಸವನ್ನು ಪ್ರಾರಂಭಿಸಬಹುದು. ಮನೆಯಲ್ಲಿ ಬ್ರೆಡ್ ಗಳನ್ನು ತಯಾರಿಸಿ, ನೀವು ಅವುಗಳನ್ನು ಬೇಕರಿ ಅಥವಾ ಮಾರುಕಟ್ಟೆಯಲ್ಲಿ ಸರಬರಾಜು ಮಾಡಬಹುದು. ಇದರಲ್ಲಿ ಹೆಚ್ಚು ಹೂಡಿಕೆ ಮಾಡುವ ಅಗತ್ಯವಿಲ್ಲ. ಲಾಕ್‌ಡೌನ್ ನಂತರ ಬ್ರೆಡ್ ವ್ಯಾಪಾರವು ಭಾರಿ ವೇಗವನ್ನು ಪಡೆದುಕೊಂಡಿದೆ. ನೀವು ಕೇವಲ 10,000 ರೂಪಾಯಿಗಳಲ್ಲಿ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಇದಕ್ಕಾಗಿ ನಿಮಗೆ ಗೋಧಿ ಹಿಟ್ಟು ಅಥವಾ ಮೈದಾ, ಉಪ್ಪು, ಸಕ್ಕರೆ, ನೀರು, ಬೇಕಿಂಗ್ ಪೌಡರ್ ಅಥವಾ ಈಸ್ಟ್, ಡ್ರೈಫ್ರೂಟ್ ಮತ್ತು ಹಾಲಿನ ಪುಡಿಯಂತಹ ವಸ್ತುಗಳು ಬೇಕಾಗುತ್ತವೆ.

3.ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಇಂದು ದೊಡ್ಡವರು, ಮಕ್ಕಳು ಸೇರಿದಂತೆ ಮಹಿಳೆಯರು ಕೂಡ  ಯೂಟ್ಯೂಬ್ ಚಾನೆಲ್ ನಿಂದ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ನೀವು ಕ್ಯಾಮರಾ ಸ್ನೇಹಿಯಾಗಿದ್ದು, ನಿಮ್ಮ ಬಳಿ ಉತ್ತಮ ಕಂಟೆಂಟ್ ಇದ್ದರೆ, ನೀವು Youtube ನಲ್ಲಿ ವೀಡಿಯೊಗಳನ್ನು ಮಾಡುವ ಮೂಲಕ ಉತ್ತಮ ಹಣವನ್ನು ಗಳಿಸಬಹುದು. ಇದಕ್ಕಾಗಿ ನೀವು ತಿಳುವಳಿಕೆ ಮತ್ತು ಸೃಜನಶೀಲತೆಯನ್ನು ಹೊಂದಿರಬೇಕು. ಭಾರತದಲ್ಲಿ ಇಂತಹ ಸಾವಿರಾರು ಚಾನೆಲ್‌ಗಳಿವೆ, ಅವುಗಳಿಂದ ಮನೆಯಲ್ಲಿ ಕುಳಿತು ಜನರು ಉತ್ತಮ ಹಣವನ್ನು ಗಳಿಸುತ್ತಿದ್ದಾರೆ.

4. ಒಂದು ವೇಳೆ ನಿಮಗೆ ಬರವಣಿಗೆ ಚೆನ್ನಾಗಿ ಗೊತ್ತಿದ್ದರೆ, ನೀವು ನಿಮ್ಮ ಸ್ವಂತ ಬ್ಲಾಗ್ ತಯಾರಿಸಿ ಉತ್ತಮ ಹಣ ಗಳಿಕೆ ಮಾಡಬಹುದು. ಆದರೆ, ಇದಕ್ಕಾಗಿ ನಿಮ್ಮ ಬಳಿ ಬರವಣಿಗೆಯ ಕೌಶಲ್ಯ ಇರಬೇಕು. ನೀವು ನಿಮ್ಮ ಸ್ವಂತ ವೆಬ್ ಸೈಟ್ ಅನ್ನು ಕೂಡ ತಯಾರಿಸಬಹುದು. ಅದರ ಪ್ರಚಾರಕ್ಕೆ ಇಂದು ಹಲವು ವೇದಿಕೆಗಳಿವೆ. ಇದರಿಂದ ನೀವು ಕೆಲವೇ ತಿಂಗಳುಗಳಲ್ಲಿ ಗಳಿಕೆಯನ್ನು ಕೂಡ ಮಾಡಬಹುದು.

5. ನೀವು ಸೃಜನಶೀಲರಾಗಿದ್ದು, ನಿಮಗೆ ಜಾಹೀರಾತುಗಳನ್ನು ತಯಾರಿಸುವುದು ಹೇಗೆ ಎಂಬುದು ತಿಳಿದಿದ್ದರೆ, ನೀವು ಅಡ್ವರ್ಟೈಸಿಂಗ್ ಕ್ಯಾಂಪೇನ್ ಡೆವೆಲಪರ್ ಆಗಿ ಕೆಲಸ ಮಾಡಬಹುದು. ಇದೊಂದು ಸಂಪೂರ್ಣ ಆನ್ಲೈನ್ ವ್ಯವಹಾರವಾಗಿದೆ. ಇದಕ್ಕಾಗಿ ನೀವು ತರಬೇತಿ ಪಡೆದುಕೊಳ್ಳಬೇಕು. ನೀವು ವೆಬ್ಸೈಟ್ ರಚಿಸುವ ಮೂಲಕ ನಿಮ್ಮ ಕೆಲಸವನ್ನು ಆರಂಭಿಸಬಹುದು. ಗೂಗಲ್ ನಲ್ಲಿ ಸರ್ಚ್ ಮಾಡುವ ಮೂಲಕ ನೀವು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಕೋರ್ಸ್ ಗಳ ಅವಧಿ 21 ದಿನಗಳಿಂದ 3 ತಿಂಗಳುಗಳವರೆಗೆ ಇರುತ್ತದೆ. ಇದರ ಬಳಿಕ ನೀವು ಡಿಜಿಟಲ್ ಕ್ಯಾಂಪೇನ್ ನಡೆಸಬಹುದು. ಇದರಲ್ಲಿಯೂ ಕೂಡ ಹೆಚ್ಚಿನ ಹೂಡಿಕೆಯ ಅವಶ್ಯಕತೆ ಇರುವುದಿಲ್ಲ. ಆದರೆ ಒಮ್ಮೆ ಕೆಲಸ ಮುಹಿಸಿದರೆ ನೀವು ಲಕ್ಷಾಂತರ ಗಳಿಕೆ ಮಾಡಬಹುದು. 

Source : https://zeenews.india.com/kannada/business/business-news-in-kannada-with-the-help-of-modi-government-start-this-business-from-home-and-earn-handsome-money-151740

Leave a Reply

Your email address will not be published. Required fields are marked *