ಚಿತ್ರದುರ್ಗದಲ್ಲಿ ದಿನಸಿ ಕಿಟ್ ವಿತರಣೆ: ದಾನವೇ ಮಾನವೀಯತೆಯ ಮೂಲ ಎಂದು ಶ್ರೀಗಳು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 29

ಮನುಷ್ಯ ತಾನು ದುಡಿದ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ದಾನ ಮಾಡುವುದರ ಮೂಲಕ ಪುಣ್ಯವನ್ನು ಸಂಪಾದಿಸಬಹುದಾಗಿದೆ ಎಂದು ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಕರೆ ನೀಡಿದರು.

ಚಿತ್ರದುರ್ಗ ನಗರದ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ಭಾನುವಾರ ಸಂಜೆ ನ್ಯಾಪಿನಲ್ ನವಚೇತನ ಹೆಲ್ಪಿಂಗ್ ನೇಚರ್ ಟ್ರಸ್ಟ್‍ವತಿಯಿಂದ ನಡೆದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಚಿತ್ರದುರ್ಗದಲ್ಲಿ ದಾನಿಗಳ ಕೊರತೆ ಇಲ್ಲ ಉದಾರವಾಗಿ ದಾನ ಮಾಡುವವರ ಸಂಖ್ಯೆ ನಮ್ಮಲ್ಲಿ ಹೇರಳವಾಗಿದೆ ಅವರನ್ನು ಕೇಳುವುದರ ಮೂಲಕ ಅಗತ್ಯ ಇರುವವರಿಗೆ ದಾನವನ್ನು ಮಾಡುವಂತ ಕಾರ್ಯವನ್ನು ಮಾಡಬೇಕಿದೆ. ಭಗವಂತ ಅವಕಾಶವನ್ನು ನೀಡಿದಾಗ ಬೇರೆಯವರಿಗೆ ದಾನವನ್ನು ಮಾಡುವಂತ ಗುಣವನ್ನು ಬೆಳಸಿಕೊಳ್ಳಬೇಕಿದೆ ಎಂದರು.

ಹುಟ್ಟು ಅನಿಶ್ಚಿತ ಆದರೆ ಸಾವು ಖಚಿತ ಈ ಮಧ್ಯದಲ್ಲಿ ಉತ್ತಮವಾದ ಕೆಲಸವನ್ನು ಮಾಡಿದಾಗ ಸಮಾಜ ನಮ್ಮನ್ನು ಮುಂದಿನ ದಿನದಲ್ಲಿ ನೆನೆಯುತ್ತದೆ. ಶ್ರೀಮಂತರಾದವರು ಬಡವರಿಗೆ ಸಹಾಯವನ್ನು ಮಾಡುವಂತ ಗುಣವನ್ನು ಬೆಳೆಸಿಕೊಳ್ಳಬೇಕಿದೆ, ಇದರಿಂದ ಪುಣ್ಯ ಸಂಪಾದನೆಯಾಗುತ್ತದೆ. ನಿಮಗೆ ಸಹಾಯವನ್ನು ಮಾಡಿದವರನ್ನು ಮರೆಯಬೇಡಿ ನೀವು ಉತ್ತಮವಾಗಿ ಸಂಪಾದನೆಯನ್ನು ಮಾಡುವಾಗ ಬೇರೆಯರಿಗೆ ಸಹಾಯವನ್ನು ಮಾಡುವುದನ್ನು ಮರೆಯಬೇಡಿ ಇದರಿಂದ ನೀವು ಮತ್ತಷ್ಟು ಬೆಳೆಯಲು ಸಹಾಯವಾಗುತ್ತದೆ ಎಂದು ಶ್ರೀಗಳು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನ್ಯಾಪಿನಲ್ ನವ ಚೇತನ ಹೆಲ್ಪಿಂಗ್ ನೇಚರ್ ಟ್ರಸ್ಟ್‍ನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಮಾತನಾಡಿ, ನಮ್ಮ ಟ್ರಸ್ಟ್ ವತಿಯಿಂದ ಹಲಾವರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಇದರಲ್ಲಿ ದಿನಸಿ ಕಿಟ್ ವಿತರಣೆಯೂ ಸಹಾ ಒಂದಾಗಿದೆ, ಇದ್ದಲ್ಲದೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ನೇತ್ರಾ ತಪಾಸಣಾ ಶಿಬಿರ, ಸಸಿಗಳನ್ನು ನೆಡುವುದು ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿಗಳಾದ ಸಾಧಿಕ್‍ಉಲ್ಲಾ ಉದ್ಘಾಟಿಸಿದರು. ಸಾಹಿತಿಗಳಾದ ಆನಂದಕುಮಾರ್, ವೈದ್ಯರಾದ ಖಾಸಿಂ. ಬೆಸ್ಕಾಂನ ಅಭೀಯಂತರರಾದ ತಿಪ್ಪೇಸ್ವಾಮಿ, ರಮೇಶ್, ಸಾಗರ್, ಜೆ.ಜೆ.ಹಟ್ಟಿ ರಾಜಣ್ಣ, ಕಣಿವೆ ಮಾರಮ್ಮ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ನ್ಯಾಪಿನಲ್ ನವ ಚೇತನ ಹೆಲ್ಪಿಂಗ್ ನೇಚರ್ ಟ್ರಸ್ಟ್‍ನ ಕಾರ್ಯದರ್ಶಿ ಪರಮೇಶ್ವರಪ್ಪ, ಖಂಜಾಚಿ ತಿಪ್ಪೇಸ್ವಾಮಿ, ಟ್ರಸ್ಟಿಗಳಾದ ಪ್ರಶಾಂತ ಕುಮಾರ್ ಹಾಗೂ ಪ್ರಕಾಶ್ ಬಾಬು ಭಾಗವಹಿಸಿದ್ದರು.

Views: 36

Leave a Reply

Your email address will not be published. Required fields are marked *