ಚಿತ್ರದುರ್ಗ ಸೆ. 27: ಸರ್ಕಾರದವತಿಯಿಂದ ಕುರಿಗಾಹಿಗಳಿಗೆ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ ಇದನ್ನು ಪಡೆಯುವುದರ ಮೂಲಕ ಸರ್ಕಾರದ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಇದರ ಬಗ್ಗೆ ವಿಚಾರ ಮಾಡುವಂತೆ ಶ್ರೀ ದ್ಯಾಮಲಾಂಭ ಕುರಿ ಮತ್ತು ಮೇಕೆ ರೈತ ಉತ್ಪಾದಕರ ಕಂಪನಿ ಲಿಮಿಟೆಡ್‍ನ ಅಧ್ಯಕ್ಷರಾದ ಎಸ್.ಲಕ್ಷ್ಮಿಕಾಂತ ರವರು ಕರೆ ನೀಡಿದರು.
ಚಿತ್ರದುರ್ಗ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿನ ಶ್ರೀ ದ್ಯಾಮಲಾಂಭ ಕುರಿ ಮತ್ತು ಮೇಕೆ ರೈತ ಉತ್ಪಾದಕರ ಕಂಪನಿ
ಲಿಮಿಟೆಡ್‍ನ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆವಹಿಸಿ
ಮಾತನಾಡಿದ ಅವರು, ರೈತಾಪಿ ವರ್ಗದವರು ತಾವು ಮಾಡುವ ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಸಹಾ ಮಾಡಿ, ಇದರಿಂದ ನಿಮ್ಮ
ಆರ್ಥಿಕ ಪ್ರಗತಿಗೆ ದಾರಿಯಾಗುತ್ತದೆ. ಕುರಿ,ಮೇಕೆಯನ್ನು ಸಾಕುವುದರಿಂದ ಆದಾಯವನ್ನು ದ್ವಿಗುಣ ಮಾಡಿಕೊಳ್ಳಬಹುದಾಗಿದೆ
ಸರ್ಕಾರವು ಸಹಾ ಇದಕ್ಕೆ ಆರ್ಥಿಕ ನೆರವನ್ನು ನೀಡುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಇಂದಿನ ದಿನಮಾನದಲ್ಲಿ ದೇಶದ ಸಂಪತ್ತು ಕೆಲವರ ಕೈಯಲ್ಲಿ ಮಾತ್ರ ಇದೆ. ರೈತ ತಾನು ಬೆಳದ ಬೆಳೆಗೆ ತಾನೇ ಬೆಲೆಯನ್ನು
ಕಟ್ಟುವಂತ ವಾತಾವರಣ ಬರಬೇಕಿದೆ. ಆಗ ಮಾತ್ರ ದೇಶದದಲ್ಲಿ ರೈತನ ಪ್ರಗತಿ ಸಾಧ್ಯವಿದೆ. ಅದರೆ ಇಂದಿನ ದಿನದಲ್ಲಿ ಯಾರೂ ಬೆಳೆದರೆ
ಅದರ ಬೆಲೆಯನ್ನು ಮತ್ತೇ ಯಾರೂ ಕಟ್ಟುತ್ತಾರೆ ಇದರಿಂದ ರೈತನಿಗೆ ನಷ್ಠವಾಗುತ್ತಿದೆ. ಇದರ ಬಗ್ಗೆ ಸರ್ಕಾರ ಆಲೋಚನೆ ಮಾಡಬೇಕಿದೆ.
ಇಂದಿನ ದಿನದಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆಯೂ ಸಹಾ ಉದ್ಯಮವಾಗಿ ಪರಿಣಿಮಿಸಿದೆ, ಕುರಿಯಿಂದ ಉತ್ಪಾದನೆಯಾಗುವ ಉಣ್ಣೆ,
ಮಾಂಸ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ. ನಮ್ಮ ಕಂಪನಿಯಲ್ಲಿನ ಷೇರುದಾರರು ತಮ್ಮ ಬೇಡಿಕೆಗೆ ಅನುಗುಣವಾಗಿ ಕಂಪನಿ ಅಗತ್ಯ
ವಸ್ತುಗಳನ್ನು ಪೂರೈಕೆ ಮಾಡಲಿದೆ, ಕಂಪನಿಯಿಂದ ಕಡಿಮೆ ದರದಲ್ಲಿ ವಸ್ತುಗಳನ್ನು ಖರೀದಿಸಿ ಷೇರುದಾರರಿಗೆ ನೀಡಲಾಗುವುದು ಈಗ
ಕಂಪನಿ ಷೇರುದಾರರ ಸಂಖ್ಯೆ ಕಡಿಮೆ ಇದೆ ಇದನ್ನು ಮುಂದಿನ ದಿನದಲ್ಲಿ ಹೆಚ್ಚಳ ಮಾಡಬೇಕಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ
ಎಂದರು.
ಸರ್ಕಾರ ಕುರಿ ಮತ್ತು ಮೇಕೆ ಸಾಕಾಣೀಕೆದಾರರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಇದಕ್ಕೆ ತಮ್ಮ ವ್ಯಾಪ್ತಿ
ಪಂಚಾಯಿತಿಯಲ್ಲಿ ತಾವು ಕುರಿ ಸಾಕಾಣಿಕೆದಾರರು ಎಂಬ ಗುರುತಿನ ಚೀಟಿಯನ್ನು ಪಡೆಯುವುದ ಅಗತ್ಯವಾಗಿದೆ. ಇದರಿಂದ ತಮ್ಮ
ಮಕ್ಕಳ ಶಿಕ್ಷಣಕ್ಕೆ, ಸರ್ಕಾರದಿಂದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ. ಆದರೆ ಇತ್ತೀಚಿನ ದಿನದಲ್ಲಿ ಕೆಲವು ನಕಲಿ ಕುರಿಗಾಹಿಗಳು ಈ
ಗುರುತಿನ ಪತ್ರವನ್ನು ಪಡೆಯುವುದರ ಮೂಲಕ ಸರ್ಕಾರ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಇದು ತಪ್ಪಬೇಕಿದೆ. ಎಲ್ಲರು
ಜಾಗೃತರಾಗಬೇಕಿದೆ ಎಂದ ಲಕ್ಷ್ಮೀಕಾಂತ ತಿಳಿಸಿದರು.
ಶ್ರೀ ದ್ಯಾಮಲಾಂಭ ಕುರಿ ಮತ್ತು ಮೇಕೆ ರೈತ ಉತ್ಪಾದಕರ ಕಂಪನಿ ಲಿಮಿಟೆಡ್‍ನ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ
ಸಭೆಯನ್ನು ಉದ್ಘಾಟಿಸಿದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭೀವೃದ್ದಿ ನಿಗಮದ ಸಹಾಯಕ ನಿರ್ದೇಶಕರಾದ ಡಾ.ತಿಪ್ಪೇಸ್ವಾಮಿ
ಮಾತನಾಡಿ, ಈ ಕಂಪನಿಯೂ ರೈತರಿಗೆ ಉಪಯುಕ್ತವಾದ ಕೆಲಸವನ್ನು ಮಾಡುತ್ತಿದೆ, ಇಲ್ಲಿ ಷೇರುದಾರರಾಗುವುದರ ಮೂಲಕ ತಮ್ಮ
ಬೇಡಿಕೆ ಅನುಗುಣವಾಗಿ ವಸ್ತಗಳನ್ನು ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ. ತಾವು ಬೆಳೆಯುವ ಬೆಳೆಗೆ ಕಂಪನಿ ಸಹಾಯ
ಮಾಡುವುದ್ದಲ್ಲದೆ ತಾವು ಬೆಳೆದ ಬೆಳೆಯನು ಸಹಾ ಉತ್ತಮ ದರದಲ್ಲಿ ಖರೀದಿಯನ್ನು ಸಹಾ ಮಾಡುತ್ತದೆ. ಇದರಿಂದ ಮಧ್ಯವರ್ತಿಗಳಿಲ್ಲ
ಬೆಳೆಯನ್ನು ಮಾರಾಟ ಮಾಡಬಹುದಾಗಿದೆ. ಕಳೆದ 1 ವರ್ಷದಿಂದ ಈ ಕಂಪನಿಗೆ ಕೆಲಸ ಮಾಡುತ್ತಿದ್ದು ಇಲ್ಲಿ 1000 ಷೇರುದಾರರಾದರೆ 10
ಲಕ್ಷ ಹಣ ಆಗುತ್ತದೆ ಇದಕ್ಕೆ ಸರ್ಕಾರವೂ ಸಹಾ 10 ಲಕ್ಷ ರೂ.ಗಳನ್ನು ನೀಡುತ್ತದೆ ಇದರಿಂದ ರೈತರಿಗೆ ಉಪಯುಕ್ತವಾದ ವಸ್ತುಗಳನ್ನು
ಕಂಪನಿಗಳಿಂದ ನೇರವಾಗಿ ಖರೀದಿ ಮಾಡಿ ರೈತರಿಗೆ ನೀಡಲಾಗುತ್ತದೆ ಎಂದರು.
ಕುರಿಗಳನ್ನು ಖರೀದಿ ಮಾಡಲು ಬ್ಯಾಂಕ್‍ಗಳಲ್ಲಿ ಸಾಲ ಸಿಗಲಿದೆ ಕುರಿಗಳನ್ನು ಸಾಕಲು ಇಲಾಖೆ ಅರ್ಥೀಕವಾಗಿ ನೆರವನ್ನು ನೀಡುತ್ತಿದೆ ಇದರ
ಪ್ರಯೋಜನವನ್ನು ಪಡೆಯಬೇಕಿದೆ. ಬ್ಯಾಂಕ್ ಗಳಿಂದ ಸಾಲವನ್ನು ಪಡೆದವರು ಸಕಾಲಕ್ಕೆ ಸರಿಯಾಗಿ ಮರುಪಾವತಿಯನ್ನು ಮಾಡಿದರೆ
ಬ್ಯಾಂಕ್ ನವರು ಮುಂದೆ ನಿಮನ್ನ ಕರೆದು ಸಾಲವನ್ನು ನೀಡುತ್ತಾರೆ. ಸರ್ಕಾರ ಮನ್ನಾ ಮಾಡುತ್ತದೆ ಕಾಯುತ್ತಾ ಕೂರಬೇಡಿ ಸರ್ಕಾರದ
ಎಲ್ಲಾ ಸಾಲಗಳು ಮನ್ನಾ ಆಗುವುದಿಲ್ಲ ಎಲ್ಲೂ ಕೆಲವೊಂದು ಸಾಲಗಳು ಮಾತ್ರ ಮನ್ನಾ ಆಗುತ್ತದೆ ಇದರಿಂದ ಸಕಾಲಕ್ಕೆ ಸರಿಯಾಗಿ
ಸಾಲದ ಕಂತನ್ನು ಭರ್ತಿ ಮಾಡುವಂತೆ ಷೇರುದಾರರಿಗೆ ಡಾ.ತಿಪ್ಪೇಸ್ವಾಮಿ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ದಾವಣಗೆರೆಯ ಜಿಲ್ಲಾ ಸಂಯೋಜಕರಾಧ ಡಾ.ಲೋಕೇಶ್, ಶ್ರೀ ದ್ಯಾಮಲಾಂಭ ಕುರಿ ಮತ್ತು ಮೇಕೆ ರೈತ ಉತ್ಪಾದಕರ
ಕಂಪನಿ ಲಿಮಿಟೆಡ್‍ನ ಕಾರ್ಯಕಾರಿ ಮಂಡಳಿ ಸದಸ್ಯರಾದ ಚಂದ್ರಶೇಖರ್, ಮುಕ್ಕಣ್ಣ, ಸುರೇಶ್, ಸುಭಾಷ್ ಸುರೇಶ್, ಹೇಮಣ್ಣ
ಭಾಗವಹಿಸಿದ್ದರು, ಕಂಪನಿಯ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಭರತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.