ಚಿತ್ರದುರ್ಗ,ಆ.16:
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
79 ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಉನ್ನತಿ ಟ್ರಸ್ಟ್ ವತಿಯಿಂದ ನಗರದ ಜೋಗಿಮಟ್ಟಿ ರಸ್ತೆಯ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಬಡ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ನಗರಸಭೆ ಸದಸ್ಯ ಮಹೇಶ್ ಮಾತನಾಡಿ, ಈ ದಿನ ಅನೇಕ ಮಹಾನುಭವರು ತ್ಯಾಗ ಬಲಿದಾನದ ಮೂಲಕ ನಮಗೆ ಸ್ವಾತಂತ್ರ್ಯ ಸಿಕ್ಕದೆ. ಈ ದಿನ ಬಡ ಮಕ್ಕಳಿಗೆ ಉನ್ನತಿ ಟ್ರಸ್ಟ್ ವತಿಯಿಂದ ಶಿಕ್ಷಣಕ್ಕೆ ಪೂರಕವಾಗಿ ನೋಟ್ ಪುಸ್ತಕಗಳನ್ನು ವಿತರಣೆ ಮಾಡುತ್ತಿರುವುದು ಬಹಳ ಸಂತಸದ ವಿಷಯ. ಇದನ್ನು ಮಕ್ಕಳು ಉಪಯೋಗಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಹೆಚ್ಚು ಅಂಕಗಳನ್ನು ಗಳಿಸುವುದರ ಜೊತೆಗೆ ಶಿಕ್ಷಣದ ಮೂಲಕ ತಮ್ಮ ಕುಟುಂಬವನ್ನು ಅರ್ಥಿಕವಾಗಿ ಬಲಪಡಿಸಬೇಕು ಎಂದು ಕೆರೆ ನೀಡಿದರು.
ಈ ಸಮಯದಲ್ಲಿ ಅತಿಥಿಗಳಾದ ಟ್ರಸ್ಟ್ ನ ಅಧ್ಯಕ್ಷರಾದ ಕಿರಣ್ ಕುಮಾರ್ ಪಿ. ಕಾರ್ಯದರ್ಶಿಯಾದ ಸುನೀಲ್.ಡಿ, ಖಾಜಾಂಜಿಗಳಾದ ಸಾಲೋಮನ್ ರಾಜು ಪಿ ,ಸಂಸ್ಥಾಪಕರಾದ ಪ್ರವೀಣ್, ಧನಂಜಯ, ಬಸವರಾಜು, ಶ್ರೀನಿವಾಸ್, ಸದಸ್ಯರಾದ ಮೋಶೆ ಭಾಗವಹಿಸಿದ್ದರು.
Views: 48