ಜಿಎಂ ಮಲ್ಲಿಕಾರ್ಜುನಪ್ಪ ಪುಣ್ಯಸ್ಮರಣೆ: ಹಾಲಮ್ಮ ಟ್ರಸ್ಟ್ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ 2.4 ಕೋಟಿ ರೂ. ಮೌಲ್ಯದ ಆಕ್ಸಿಜನ್ ಪ್ಲಾಂಟ್ ವಿತರಣೆ.

ಭೀಮಸಮುದ್ರ ಗ್ರಾಮದಲ್ಲಿ ಇಂದು ಜಿ ಎಂ ಮಲ್ಲಿಕಾರ್ಜುನಪ್ಪ ಹಾಗೂ ಹಾಲಮ್ಮನವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ದಾವಣಗೆರೆಯ ಮಾಜಿ ಲೋಕಸಭಾ ಸದಸ್ಯರಾದ ಹಾಗೂ ಮಾಜಿ ಕೇಂದ್ರ ಸಚಿವರು ಡಾ ಜಿ ಎಂ ಸಿದ್ದೇಶ್ವರ ಮಾತನಾಡಿ ನಮ್ಮ ತಂದೆಯವರು ತೀರಿ ಇವತ್ತಿಗೆ 22 ವರ್ಷ ಪ್ರತಿವರ್ಷದಂತೆ ಈ ವರ್ಷವೂ ಕೂಡ ಗ್ರಾಮದಲ್ಲಿ ಅವರ ಪುಣ್ಯಸ್ಮರಣೆಯನ್ನು ಏರ್ಪಡು ಮಾಡಿದ್ದೆವು ನಮ್ಮ ತಂದೆಯವರ ಹೆಸರಿಗೆ ಚಾರಿಟೇಬಲ್ ಟ್ರಸ್ಟ್ ಮಾಡಿದ್ದು ಅದರಿಂದ ಸಾಕಷ್ಟು ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ಸರ್ಕಾರಿ ಶಾಲೆಗಳಿಗೆ ನೋಟ್ ಬುಕ್ ವಿತರಣೆ ಮಾಡಿದ್ದೇವೆ ಚಿತ್ರದುರ್ಗ ಹರಪನಹಳ್ಳಿ ಹಾಗೂ ಹರಿಹರ ಸರ್ಕಾರಿ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್ ವಿತರಣೆ ಮಾಡಿದ್ದೇವೆ ನಮ್ಮ ಕಾಲೇಜಿನಲ್ಲಿ ಓದುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಕೂಡ ನೀಡಿದ್ದೇವೆ ತಂದೆಯವರ ಸೇವೆ.. ಶ್ರೀ ಭೀಮೇಶ್ವರ ಪ್ರೌಢಶಾಲೆಯಲ್ಲಿ ಸುಮಾರು 40 ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ ತಂದೆಯ ದಾವಣಗೆರೆಯಲ್ಲಿ ವಿದ್ಯಾ ಸಂಸ್ಥೆಯನ್ನು ಪ್ರಾರಂಭ ಮಾಡಿದರು ಇವತ್ತು ಸಾವಿರಾರು ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ತಂದೆಯವರ ಹಾಕಿಕೊಟ್ಟ ದಾರಿ ನಮಗೂ ಹಾಗೂ ನಮ್ಮ ಕುಟುಂಬದವರಿಗೆ ಆಶೀರ್ವಾದವಿದ್ದಂತೆ ಎಂದು ತಿಳಿಸಿದರು.

ಕುಟುಂಬಸ್ಥರೆಲ್ಲ ಸೇರಿ ಬೆಳಗ್ಗೆ ಮಲ್ಲಿಕಾರ್ಜುನಪ್ಪನವರ ಸಮಾಧಿಗೆ ಹೋಗಿ ಪೂಜೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರಾದ ಜಿಎಂ ಸಿದ್ದೇಶ್ವರ್ ಗಾಯತ್ರಿ ಸಿದ್ದೇಶ್ವರ ಜಿ ಎನ್ ಪ್ರಸನ್ ಕುಮಾರ್ ಜಿಎಂ ಲಿಂಗರಾಜು ಜಿ ಎಸ್ ಅನಿತ ಕುಮಾರ ಕುಟುಂಬಸ್ಥರು ಹಾಗೂ ರಾಜಕೀಯ ಶಾಸಕರಾದ ಹೊಳಲ್ಕೆರೆ ಡಾಕ್ಟರ್ ಚಂದ್ರಪ್ಪ ಹರಿಹರ ಶಾಸಕರಾದ ಬಿ ಪಿ ಹರೀಶ್ ಚಿತ್ರದುರ್ಗ MLC ನವೀನ್ ಕುಮಾರ್ ಜಗಳೂರು ಮಾಜಿ ಶಾಸಕರಾದ ಎಚ್ ಪಿ ರಾಜೇಶ್ ಚನ್ನಗಿರಿ ತುಮಕೂರು ಅಧ್ಯಕ್ಷರಾದ ಶಿವಕುಮಾರ್ ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಅಧ್ಯಕ್ಷರಾದ ST ವೀರೇಶ್ ಪ್ರಸನ್ನ ಕುಮಾರ್ ಮಾಜಿ ಜಿಲ್ಲಾಧ್ಯಕ್ಷರಾದ ಯಶ್ವಂತ್ ರಾಜ್ ಜಾದವ್ ಅನಗೋಡಿ ವೀರೇಶ್ ಹಾಗೂ ಮುಖಂಡರುಗಳು ಗ್ರಾಮಸ್ಥರು ಪುಣ್ಯಸ್ಮಣೆಯಲ್ಲಿ ಪಾಲ್ಗೊಂಡಿದ್ದರು.

Views: 31

Leave a Reply

Your email address will not be published. Required fields are marked *