ಚಿತ್ರದುರ್ಗ| ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದರ ಮೂಲಕ ರಾಜ್ಯ ಸರ್ಕಾರ ಜನತೆಯ ಮೇಲೆ ಬರೆಗಳ ಮೇಲೆ ಬರೆ ಎಳೆಯುತ್ತಿದೆ: ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ್ ಬೇದ್ರೇ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 28 : ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಿವಿಧ ರೀತಿಯ ದರಗಳನ್ನು ಏರಿಕೆ ಮಾಡುವುದರ ಮೂಲಕ ಜನತೆಯ ಮೇಲೆ ಬರೆಗಳ ಮೇಲೆ ಬರೆಯನ್ನು ಎಳೆಯುತ್ತಿದೆ, ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿ ತಪ್ಪು ಮಾಡಿದ್ದೇವೆ ಎಂದು ಮತದಾರ ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾನೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಕಾಂಗ್ರೆಸ್ ಪಕ್ಷ ಚುನಾವಣೆಯ ಸಮಯದಲ್ಲಿ ಮತದಾರರಿಗೆ ಆಸೆ-ಆಮಿಷವನ್ನು ಒಡ್ಡುವುದರ ಮೂಲಕ ಗ್ಯಾರೆಂಟಿಯ ಅಸ್ತ್ರವನ್ನು ಬೀಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ತನ್ನ ಗ್ಯಾರೆಂಟಿಗಳನ್ನು ಪೂರೈಕೆ ಮಾಡುವ ಸಲುವಾಗಿ ಸಿಕ್ಕ-ಸಿಕ್ಕಲ್ಲೆಲ್ಲಾ ದರವನ್ನು ಏರಿಕೆ ಮಾಡುತ್ತಾ ಹೊರಟ್ಟಿದೆ. ಬಸ್ ದರವನ್ನು ಏರಿಕೆ ಮಾಡಾಯಿತು, ವಿದ್ಯುತ್
ದರ ಏರಿಕೆ ಮಾಡಾಯಿತು, ಸಾರಿಗೆ ಇಲಾಖೆಯಲ್ಲಿಯೂ ಸಹಾ ತೆರಿಗೆಯನ್ನು ಏರಿಕೆ ಮಾಡಾಯಿತು, ಈಗ ಹಾಲಿನ ದರವನ್ನು ಸಹಾ
ಏರಿಕೆ ಮಾಡಲು ಸರ್ಕಾರ ಮುಂದಾಗಿದೆ ಇದರಿಂದ ಜನತೆಗೆ ಒಂದರ ಮೇಲೆ ಒಂದರಂತೆ ದರ ಏರಿಕೆಯ ಹೊಡೆತವನ್ನು ಈ
ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ನೀಡಿದ ಮೇಲೆ ಸಂಪನ್ಮೂಲ ಕ್ರೂಢೀಕರಣಕ್ಕೆ ಹಲವು ಸಲ ಅಗತ್ಯ ವಸ್ತುಗಳ ಬೆಲೆ ಏರಿಕೆ
ಮಾಡಿದ್ದ ಸರ್ಕಾರ ಈಗ ಮತ್ತೆ ಹಾಲಿನ ದರ ಏರಿಕೆಗೆ ಒಪ್ಪಿಗೆ ನೀಡುವ ಮೂಲಕ ಬೆಲೆ ಬಿಸಿಯಿಂದ ಸಾರ್ವಜನಿಕರು
ತತ್ತರಿಸಿಹೋಗಿದ್ದಾರೆ. ನಂದಿನಿ ಪ್ಯಾಕೆಟ್ ಹಾಲಿನ ದರ ಪ್ರತಿ ಲೀಟರ್‍ಗೆ 4 ರೂಪಾಯಿ ಹೆಚ್ಚಳ ಮಾಡಲು ರಾಜ್ಯ ಸರ್ಕಾರ
ತೀರ್ಮಾನಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ
ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 4 ರೂ.ಗೆ ಹೆಚ್ಚಿಸಲು ಅನುಮೋದನೆ ನೀಡಿದೆ. ಕಳೆದ ಕೆಲ
ತಿಂಗಳುಗಳ ಹಿಂದೆ ನಂದಿನಿ ಹಾಲಿನ ದರ ಹೆಚ್ಚಿಸಲಾಗಿತ್ತು. ಹಾಲಿನ ದರ ಏರಿಕೆ ಮಾಡಿ ವರ್ಷವಾಗಿಲ್ಲ. ಆಗಲೇ ದರ ಏರಿಕೆಗೆ
ಪ್ರಸ್ತಾಪ ಬಂದಿತ್ತು. ಕೆಎಂಎಫ್ ಅಧಿಕಾರಿಗಳ ಜೊತೆ ಮೂರು ದಿನಗಳ ಹಿಂದೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಲಿ ದರ
ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಇದೀಗ ನಂದಿನ ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಗ್ರಾಹಕರಿಗೆ
ಹಾಲು ಬಿಸಿತುಪ್ಪವಾಗಿ ಪರಿಣಮಿಸಲಿದೆ ಇದ್ದಲ್ಲದೆ ನಂದಿನಿ ಹಾಲಿನದರ 4 ಹೆಚ್ಚಳದ ಹಿನ್ನೆಲೆಯಲ್ಲಿ ಕೆಲವು ಹೋಟೆಲುಗಳಲ್ಲಿ ಕಾಫೀ
ದರ ಹೆಚ್ಚಾಗಿದೆ. ಆದರೂ, ಆನೇಕ ಹೋಟೆಲುಗಳು ದರ ಹೆಚ್ಚಳ ಅನಿವಾರ್ಯವಾಗಲಿದೆ ಎಂದು ನಾಗರಾಜ್ ಬೇದ್ರೇ ತಿಳಿಸಿದ್ದಾರೆ.

ಸರ್ಕಾರ ಯಾವುದೇ ಕಾರಣಕ್ಕೂ ಸಹಾ ಹಾಲಿನ ದರವನ್ನು ಏರಿಕೆ ಮಾಡಬಾರದು, ಈಗಾಗಲೇ ಕೆಲವು ತಿಂಗಳ ಹಿಂದಯೇ ಹಾಲಿನ
ದರವನ್ನು ಹೆಚ್ಚಳ ಮಾಡಲಾಗಿತ್ತು ಈಗ ಮತ್ತೇ ಹಾಲಿನ ದರವನ್ನೂ ಏರಿಕೆ ಮಾಡುವುದು ಸರಿಯಲ್ಲ ಎಂದಿರುವ ಅವರು ಸರ್ಕಾರ
ತನ್ನ ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿದು ಹಿಂದಿನ ದರದಲ್ಲಿಯೇ ಹಾಲನ್ನು ಮಾರಾಟ ಮಾಡುವಂತೆ ಆಗ್ರಹಿಸಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *