ಚಿತ್ರದುರ್ಗ|ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಜಿಲ್ಲಾ ಮಟ್ಟದ ಕನ್ನಡ ರಸಪ್ರಶ್ನೆ ಕಾರ್ಯಕ್ರಮ.

ಚಿತ್ರದುರ್ಗ : ನಗರದ ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 69 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.

ಜ್ಞಾನ ಭಾರತಿ ವಿದ್ಯಾ ಮಂದಿರ ದ ಅನನ್ಯ ಜಿ ಡಿ ಮತ್ತು ಚಂದ್ರು ಪ್ರಥಮ ಸ್ಥಾನ ಪಡೆದು 5000 ರೂ ನಗದು ಬಹುಮಾನ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಪಡೆದರು.

ದ್ವಿತೀಯ ಸ್ಥಾನ ಹೊಳಲ್ಕೆರೆ ಯ ವಾಗ್ದೇವಿ ಶಾಲೆಯ ವಿದ್ಯಾರ್ಥಿಗಳಾದ ಅಕ್ಮಲ್ ಮತ್ತು ಪ್ರೀತಮ್ ರವರಿಗೆ 3000 ರೂ ನಗದು ಬಹುಮಾನ ಪ್ರಶಸ್ತಿ ಪತ್ರ,ನೆನಪಿನ ಕಾಣಿಕೆಯನ್ನು ಪಡೆದರು.

ತೃತೀಯ ಸ್ಥಾನವನ್ನು ಚಳ್ಳಕೆರೆಯ ವೇದ ಶಾಲೆಯ ವಿದ್ಯಾರ್ಥಿಗಳಾದ ಸಂಜಯ್ ಮತ್ತು ಶ್ರೀರಂಗ ಎಂಬ ವಿದ್ಯಾರ್ಥಿಗಳು 2000₹ ರೂ ನಗದು ಪ್ರಶಸ್ತಿ ಪತ್ರ ನೆನಪಿನ ಕಾಣಿಕೆಯನ್ನು ಗಳಿಸಿದರು.

ನಾಲ್ಕನೇ ಸ್ಥಾನವನ್ನು ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನ (ಪ್ರೌಢಶಾಲೆ ವಿಭಾಗ) ವಿದ್ಯಾರ್ಥಿಗಳು ಪಡೆದು ಕೊಂಡರು.

ರಸಪ್ರಶ್ನೆ ಯ ಮಾಸ್ಟರ್ ರಮೇಶ್. ಟಿ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲೆಯ ಅದ್ಯಕ್ಷರಾದ ಭಾಸ್ಕರ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ ಪ್ರಾಚಾರ್ಯರಾದ ಸಂಪತ್ ಕುಮಾರ್ ಸಿ.ಡಿ. ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಹೆಡ್ ಕೋ ಆರ್ಡಿನೇಟರ್ ಬಸವರಾಜು.ಕೆ, ಶಿಕ್ಷಕಿಯರಾದ ಪುಷ್ಪಾಂಜಲಿ ಹೆಚ್ ಪಿ ಪವಿತ್ರ ಮತ್ತು ಶರತ್ ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *