ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನ. 05: ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವದ ಗುರಿ ಕಡಿಮೆ ಇದೆ. ಸದಸ್ಯತ್ವ ಮಾಡಲು ಇನ್ನೂ ಹತ್ತು ದಿನಗಳ ಕಾಲ ಅವಕಾಶ ಇದೆ. ಈ ಸಮಯದಲ್ಲಿ ರಾಜ್ಯ ಘಟಕ ನೀಡಿದ ಗುರಿಯನ್ನು ಸಾಧಿಸುವಂತೆ ಪಕ್ಷದ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೆ ಸೂಚನೆಯನ್ನು ಬಿಜೆಪಿಯ ಸಂಘಟನಾ ಪರ್ವದ ಚುನಾವಣಾಧಿಕಾರಿ ಜೀವನಮೂರ್ತಿ ಕರೆ ನೀಡಿದರು.
ಚಿತ್ರದುರ್ಗ ನಗರದ ದಾವಣಗೆರೆ ರಸ್ತೆಯ ಜಗಲೂರು ಮಹಾಲಿಂಗಪ್ಪ ಟವರ್ಸ್‍ನಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಚಿತ್ರದುರ್ಗ ಸಂಘಟನಾ ಪರ್ವದ ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ 1951ರಲ್ಲಿ ಸ್ಥಾಪನೆಯಾಯಿತು ಅಂದಿನಿಂದ ಇಂದಿನ ದಿನದವರೆಗೂ ನಮ್ಮ ಪಕ್ಷದಲ್ಲಿ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣೆಯ ಮೂಲಕವೇ ಮಾಡಲಾಗುತ್ತಿದೆ. ಪ್ರತಿ ಆರು ವರ್ಷಕ್ಕೆ ಒಮ್ಮೆ ಸದಸ್ಯತ್ವ ಅಭೀಯಾನವನ್ನು ಮಾಡುವುದರ ಮೂಲಕ ನೂತನವಾಗಿ ಸದಸ್ಯರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು. ಪ್ರತರು ಬೂತ್‍ನಲ್ಲಿ 100 ಜನ ಸದಸ್ಯರನ್ನಾಗಿ ಮಾಡಿದವರು ಸಕ್ರಿಯ ಸದಸ್ಯರಾಗಿ ಸಮಿತಿಯಲ್ಲಿ ಪದಾಧಿಕಾರಿಗಳಾಗಲು ಅರ್ಹತೆಯನ್ನು ಹೊಂದಿರುತ್ತಾರೆ ಎಂದರು.
ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಯಲ್ಲಿ ಪ್ರತಿ ಬೂತ್‍ನಲ್ಲಿ ಬಿಜೆಪಿ ಪಕ್ಷದ ಪಡೆದ ಮತಗಳ ಶೇ.70 ರಷ್ಟು ಮತದಾರರನ್ನು
ಪಕ್ಷಕ್ಕೆ ಸದಸ್ಯರನ್ನಾಗಿ ಮಾಡಬೇಕಿದೆ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಿರ್ದೇಶನವಿದೆ. ಈಗಾಗಲೇ ಪಕ್ಷದ ಸದಸ್ಯತ್ವ ಅಭೀಯಾನ
ಅವಧಿ ಮುಗಿದಿದ್ದರು ಸಹಾ ರಾಜ್ಯ ಘಟಕ ಮತ್ತೇ ಸಮಯವನ್ನು ಮುಂದುವರೆಸಿದ್ದ ನ. 15ರವರೆಗೆ ಅವಕಾಶವನ್ನು ನೀಡಿದೆ ಈ
ಸಮಯದಲ್ಲಿ ರಾಜ್ಯ ಘಟಕ ನಮಗೆ ನೀಡಿದ ಗುರಿಯನ್ನು ತಲುಬೇಕಿದೆ. ಇದಕ್ಕಾಗಿ ಪಕ್ಷದ ಪದಾಧಿಕಾರಿಗಳು ಶ್ರಮವನ್ನು ಹಾಕಬೇಕಿದೆ
ಎಂದು ಜೀವನಮೂರ್ತಿ ಕರೆ ನೀಡಿ ಮುಂದಿನ ದಿನದಲ್ಲಿ ಜಿ.ಪಂ. ಮತ್ತು ತಾ.ಪಂ, ಚುನಾವಣೆಗಳು ಸಮೀಪಿಸುತ್ತಿದ್ದು ಇದಕ್ಕೆ ಈ ಸದಸ್ಯತ್ವ
ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಇದರ ಬಗ್ಗೆ ಹೆಚ್ಚಿನ ಗಮನವನ್ನು ನೀಡುವಂತೆ ತಿಳಿಸಿದರು.
ರಾಜ್ಯದಲ್ಲಿ ಅಡಳಿತವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲಿ ಮುಳುಗಿದೆ, ವಾಲ್ಮಿಕೀ ಹಗರಣ ಮುಡಾ ಹಗರಣ ಹಾಗೂ
ಇಂದಿನ ಲ್ಯಾಂಡ್ ಜಿಹಾದ್ ಹಗರಣ ಇದೆ. ಇದರ ಬಗ್ಗೆ ಜನರಿಗೆ ತಿಳಿಸುವುದರ ಮೂಲಕ ಸದಸ್ಯತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ
ಮಾಡುವುದರ ಮೂಲಕ ಮುಂದಿನ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವನ್ನು ಸಾಧಿಸಬೇಕಿದೆ ಇದಕ್ಕೆ ಈಗಿನಿಂದಲೇ ಕಾರ್ಯ
ಪ್ರಾರಂಭ ಮಾಡಬೇಕಿದೆ ಎಂದು ಜೀವನಮೂರ್ತಿ ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್ ಮಾತನಾಡಿ, ಬಿಜೆಪಿ ಸದಸ್ಯತ್ವ ಅಭಿಯಾನದ ನಂತರ ಈಗ ಸಂಘಟನಾ ಪರ್ವ
ಪ್ರಾರಂಭವಾಗಿದೆ. ಪ್ರಪಂಚದಲ್ಲಿ ಬಿಜೆಪಿಯ ಸದಸ್ಯತ್ವದ ಸಂಖ್ಯೆ 12 ಕೋಟಿಯನ್ನು ದಾಟಿದೆ ಇದರಿಂದ ದೇಶದಲ್ಲಿ ಅತಿ ಹೆಚ್ಚು ಸದಸ್ಯರನ್ನು
ಹೊಂದಿದ ಪಕ್ಷವಾಗಿ ಹೂರಹೊಮಿದೆ. ರಾಜ್ಯದಲ್ಲಿ 1 ಕೋಟಿ ಸದಸ್ಯರನ್ನು ಮಾಡುವ ಗುರಿಯನ್ನು ರಾಷ್ಟ್ರ ಘಟಕ ನೀಡಿದೆ ಈಗಾಗಲೇ 70
ಲಕ್ಷ ಸದಸ್ಯರನ್ನು ಮಾಡಲಾಗಿದ ಉಳಿದ ದಿನದಲ್ಲಿ ಅದನ್ನು ಸಹಾ ಪೂರ್ಣ ಮಾಡಲಾಗುವುದು. ಇದೇ ರೀತಿ ಚಿತ್ರದುರ್ಗ ಜಿಲ್ಲೆಗೆ 4.60
ಲಕ್ಷದ ಸದಸ್ಯತ್ವ ಮಾಡಲು ಗುರಿಯನ್ನು ನೀಡಲಾಗಿದೆ ಆದರೆ ಇಲ್ಲಿಯವರೆವಿಗೇ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗುರಿಯನ್ನು ಸಾಧಿಸಿಲ್ಲ,
ಈ ಹಿನ್ನಲೆಯಲ್ಲಿ ಉಳಿದ ದಿನದಲ್ಲಿ ನಮ್ಮ ಗುರಿಗೆ ಸಂಬಂಧಪಟ್ಟಂತೆ ಸದಸ್ಯತ್ವನ್ನು ಮಾಡಬೇಕಿದೆ ಎಂದರು.
ಚಿತ್ರದುರ್ಗ ಜಿಲ್ಲೆಯ 2 ಮಂಡಲಗಳು ಮಾತ್ರ 15,000 ಸದಸ್ಯರನ್ನು ಮಾಡಿದ್ದರೆ ಉಳಿದ 2 ಮಂಡಲಗಳು 14, 000 ಸದಸ್ಯರನ್ನು
ಮಾಡಿದ್ದಾರೆ ಇನ್ನೂ ಉಳಿದ 2 ಮಂಡಲಗಳು ಸದಸ್ಯತ್ವ ಮಾಡುವಲ್ಲಿ ಹಿಂದೆ ಇವೆ. ಇದರ ಬಗ್ಗೆ ಆತ್ಮಾವಲೋಕನವನ್ನು
ಮಾಡಿಕೊಳ್ಳಬೇಕಿದೆ. ಚಿತ್ರದುರ್ಗ ಸದಸ್ಯತ್ವ ಅಭೀಯಾನದಲ್ಲಿ ರಾಜ್ಯದಲ್ಲಿಯೇ ಮೇಲಿಂದ ಮೂರನೆ ಸ್ಥಾನವನ್ನು ಪಡೆಯುತ್ತಿತು ಆದರೆ
ಈಗ ಕೆಳಗಿನಿಂದ ಮೂರನೇ ಸ್ಥಾನವನ್ನು ಪಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಾಜ್ಯ ಹಾಗೂ ಜಿಲ್ಲಾ ಘಟಕದ
ಪದಾಧಿಕಾರಿಗಳಿಗೆ ಆಘಾತವಾಗಿದೆ ಸದಸ್ಯತ್ವ ಮಾಡಲು ಇನ್ನೂ ಸಮಯ ಇದರಿಂದ ಹೆಚ್ಚಿನ ರೀತಿಯಲ್ಲಿ ಸದಸ್ಯರನ್ನು ಮಾಡಿ ಅದರಲೂ
ಮಹಿಳಾ ಸದಸ್ಯರನ್ನು ಮಾಡಲು ಹೆಚ್ಚಿನ ಒತ್ತನ್ನು ನೀಡುವಂತೆ ಕರೆ ನೀಡಿದರು.
ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲ್ಲಿಕಾರ್ಜನ್ ಮಾತನಾಡಿ, ಬಿಜೆಪಿ ಬೂತ್ ಅಧ್ಯಕ್ಷರ ನೇಮಕಾತಿಯನ್ನು ನ. 15 ರಿಂದ
30ರೂಳಗಾಗಿ ಪೂರ್ಣ ಮಾಡಬೇಕಿದೆ. ನ. 21 ರಂದು ರಾಷ್ಟ್ರ ಹಾಗೂ ನ. 27 ರಂದು ರಾಜ್ಯ ಮಟ್ಟ ಮತ್ತು ಡಿ.1 ರಂದು ಜಿಲ್ಲಾ ಮಟ್ಟದ
ಕಾರ್ಯಗಾರಗಳು ನಡೆಯಲಿವೆ. ಈ ಸಮಯದಲ್ಲಿ ಎಲ್ಲರು ಸಹಾ ಸಕ್ರಿಯವಾಗಿ ಸದಸ್ಯರನ್ನು ಮಾಡಬೇಕಿದೆ. ಬಿಜೆಪಿ ಪಕ್ಷಕ್ಕೆ ಮಹಿಳಾ
ಕಾರ್ಯಕರ್ತರ ಅಗತ್ಯ ಇದೆ, ಈ ಹಿನ್ನಲೆಯಲ್ಲಿ ಮಹಿಳಾ ಸದಸ್ಯತ್ವಕ್ಕೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಾಪುರದ ಸುರೇಶ್, ಬಾಳೆಕಾಯಿ ಶ್ರೀನಿವಾಸ್ ಭಾಗವಹಿಸಿದ್ದರು.