ಚಿತ್ರದುರ್ಗ|ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಡಾನ್ ಬೋಸ್ಕ್ ಕಾಲೇಜಿನ ಸಹಯೋಗದಲ್ಲಿ “ಜಿಲ್ಲಾ ಮಟ್ಟದ ಯುವ ಸಂಸತ್ತು ಸ್ಪರ್ಧೆ -2024” ಕಾರ್ಯಕ್ರಮ ಆಯೋಜನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಚಿತ್ರದುರ್ಗ & ಡಾನ್ ಬೋಸ್ಕ್ ಪದವಿ ಪೂರ್ವ ಕಾಲೇಜಿನಲ್ಲಿ ಅಯೋಜಿಸಲಾಗಿದ್ದ “ಜಿಲ್ಲಾ
ಮಟ್ಟದ ಯುವ ಸಂಸತ್ತು ಸ್ಪರ್ಧೆ ~2024ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪದವಿ ಪೂರ್ವ ಶಿಕ್ಷಣ ಇಲಾಖೆ
ಮಕ್ಕಳಿಗಾಗಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಅಣಕು ಯುವ ಸಂಸತ್ ಕಾರ್ಯಕ್ರಮ ತುಂಬಾ ಪ್ರಶಂಸನೀಯ ಹಾಗೂ
ಅರ್ಥಪೂರ್ಣವಾಗಿದೆ. ಯಾಕೆಂದರೆ “ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳು” ಆ ಪ್ರಜೆಗಳೇ ಮುಂದಿನ ರಾಜಕರಣಿಗಳು
ಆಗಬಹುದು. ದೇಶದ ಅಭಿವೃದ್ಧಿ ರಾಜಕಾರಣಿಗಳ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ಈ ಹಿನ್ನಲೆಯಲ್ಲಿ ಸಂಸತ್ ಪ್ರವೇಶಿಸುವ ನಮ್ಮ
ಪ್ರತಿನಿಧಿಗಳು ಪ್ರಜ್ಞಾವಂತರಾಗಿದ್ದರೆ ದೇಶದ ಅಭಿವೃದ್ದಿ ಸಾದ್ಯವಾಗುತ್ತದೆ. ಇಂತಹ ಪ್ರಜ್ಞಾವಂತ ರಾಜಕರಣಿ ಗಳನ್ನು ರೂಪಿಸಲು ಈ
ರೀತಿಯ ಕಾರ್ಯಕ್ರಮಗಳು ಸ್ಪೂರ್ತಿದಾಯಕ ಎಂದು ಬಿ.ಆರ್.ಮಲ್ಲೇಶ್ ತಿಳಿಸಿದರು.

ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದ ಪ್ರಾಂಶುಪಾಲರಾದ ನರಸಿಂಹಮೂರ್ತಿ ಯವರು ಮಾತನಾಡುತ್ತಾ ಪ್ರಜಾಪ್ರಭುತ್ವ
ಬೇರುಗಳು ಗಟ್ಟಿಯಾಗಲು ಈ ರೀತಿಯ ಕಾರ್ಯಕ್ರಮಗಳು ಸಹಕಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾನ್ ಬೋಸ್ಕ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾಧರ್ ಅನುಪ್ ಥಾಮಸ್
ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದೇವೇಂದ್ರಪ್ಪ ಎಸ್. ಪ್ರಾಂಶುಪಾಲರಾದ ಲೋಕೇಶ್, ದೇವರಾಜ್,
ಉಪನ್ಯಾಸಕರಾದ ಕೆ.ತಿಪ್ಪೇಸ್ವಾಮಿ ಭಾಗವಹಿಸಿದ್ದರು ವಿದ್ಯಾರ್ಥಿನಿ ಕುಮಾರಿ ಸುಷ್ಮಿತ ಜೆ. ಪ್ರಾರ್ಥಿಸಿದರೆ, ಬುಡೇನ್ ಸಾಬ್
ಸ್ವಾಗತಿಸಿದರೆ, ರಾಜ್ಯಶಾಸ್ತ್ರ ವೇದಿಕೆಯ ಅಧ್ಯಕ್ಷರಾದ ಡಾ.ಜೆ.ಮೋಹನ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮ ನಿರೂಪಿಸಿ
ವಂದನಾರ್ಪಣೆಯನ್ನು ಉಪನ್ಯಾಸಕರು ಹೊಳಲ್ಕೆರೆ ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಆರ್.ಚಂದ್ರಶೇಖರ್
ನೇರವೇರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ತಾಲ್ಲೂಕಿನ ವಿವಿಧ ಕಾಲೇಜುಗಳಿಂದ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ
ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜಿಲ್ಲಾ ಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹಿರಿಯೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‍ನ ಪ್ರಿಯಾ ಜೆ,
ದ್ವೀತಿಯ ಸ್ಥಾನವನ್ನು ಹೊಳಲ್ಕೆರೆ ತಾಲ್ಲೂಕು ಉಪ್ಪರಿಗೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಯಿಷಾ ತೃತೀಯ ಸ್ಥಾನವನ್ನು
ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಐಶ್ವರ್ಯ ಬಿ ವಿಜೇತರಾಗಿದ್ದಾರೆ.

Leave a Reply

Your email address will not be published. Required fields are marked *