ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು.16 : ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಕ್ಷಯ ರೋಗ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಮಂಜುನಾಥ್ ಇಂದು ಬೆಳಿಗ್ಗೆ 10.30ರ ಸುಮಾರಿಗೆ ನಿಧನರಾಗಿದ್ದಾರೆ.

ಧೀರ್ಘ ಕಾಲದಿಂದ ಅನಾರೋಗ್ಯಕ್ಕಿಡಾಗಿದ್ದ ಡಾ.ಮಂಜುನಾಥ್ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಐಯುಡಿಪಿ ಬಡಾವಣೆಯ 9 ನೇ ಕ್ರಾಸ್‍ನಲ್ಲಿರುವ ಮನೆಯಿಂದ ಚಿಕಿತ್ಸೆಗೆಂದು ಹೊರಗೆ ಕರೆ ತಂದಾಗ ಉಸಿರಾಟದ ಸಮಸ್ಯೆ ಕಂಡು ಬಂದಿದೆ. ಅವರನ್ನು ಮತ್ತೆ ಮನೆಯೊಳಗೆ ಕರೆದುಕೊಂಡು ಬಂದಿದ್ದು, ಮನೆಯಲ್ಲಿಯೇ ಡಾ. ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ. ನಾಳೆ ಅವರ ಅಂತ್ಯಕ್ರಿಯೆಯು ಅವರ ಸ್ವಗ್ರಾಮವಾದ ಹೊಸದುರ್ಗ ತಾಲೂಕಿನ ಹಾಲೇನಹಳ್ಳಿಯಲ್ಲಿ ನಡೆಯಲಿದೆ.
ಮೃತರು ಪತ್ನಿ ಓರ್ವ ಪುತ್ರ ಮತ್ತು ಪುತ್ರಿ ಹಾಗು ಅಪಾರ ಬಂಧು ಮಿತ್ರರರನ್ನು ಆಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.