ಚಿತ್ರದುರ್ಗದಲ್ಲಿ ಭಾರತೀಯ ಜನತಾ ಪಾರ್ಟಿಯ ಸದಸ್ಯತಾ ಅಭಿಯಾನ-2024ರ ಜಿಲ್ಲಾ ಕಾರ್ಯಗಾರ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 27 : ಮುಂದಿನ ಅಕ್ಟೋಬರ್‍ನಲ್ಲಿ ಜಿ.ಪಂ. ಮತ್ತಯ ತಾ.ಪಂ. ಚುನಾವಣೆಗಳು ಬರಲಿವೆ, ಇದಕ್ಕೆ ಪೂರಕವಾಗಿ ನಮ್ಮ ಪಕ್ಷ ಸದಸ್ಯತ್ವ  ಅಭಿಯಾನವನ್ನು ಪ್ರಾರಂಭ ಮಾಡಿದೆ. ಇದರ ಪ್ರಯೋಜನ ಪಡೆಯುವುದರ ಮೂಲಕ ಮತದಾರರಿಗೆ ಕೇಂದ್ರ ಸರ್ಕಾರದ ಸಾಧನೆ ಮತ್ತು ಯೋಜನೆಗಳನ್ನು ತಿಳಿಸುವ ಕಾರ್ಯವನ್ನು ಮಾಡುವಂತೆ ಲೋಕಸಭಾ ಸದಸ್ಯರು, ಹಾಗೂ ಮಾಜಿ ಉಪಮುಖ್ಯ ಮಂತ್ರಿಗಳಾದ ಗೋವಿಂದ ಎಂ. ಕಾರಜೋಳರವರು  ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಚಿತ್ರದುರ್ಗ ನಗರದ ದಾವಣಗೆರೆ ರಸ್ತೆಯಲ್ಲಿನ ಜಗಲೂರು ಮಹಾಲಿಂಗಪ್ಪ ಕಂಫಟ್ರ್ಸ್‍ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿಯ ಸದಸ್ಯತಾ ಅಭಿಯಾನ-2024ರ ಜಿಲ್ಲಾ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವರ್ಷ ಇಡಿ ದೇಶದಲ್ಲಿ 10 ಕೋಟಿ ಸದಸ್ಯರನ್ನಾಗಿ ಮಾಡುವ ಗುರಿಯನ್ನು ಬಿಜೆಪಿ ಹೊಂದಿದೆ. ಪ್ರತಿ ಬೂತ್‍ನಲ್ಲಿ ಕನಿಷ್ಠ 300 ಜನರನ್ನು ಸದಸ್ಯರನ್ನಾಗಿ ಮಾಡಬೇಕಿದೆ ಎಂದು ರಾಷ್ಟ್ರೀಯ ಅಧ್ಯಕ್ಷರು ಸೂಚನೆಯನ್ನು ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿಯೂ ಸಹಾ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿ ಈ ಸದಸ್ಯತ್ ಅಭಿಯಾನವನ್ನು ಮಾಡಬೇಕಿದೆ. ಮುಂದಿನ ಕೆಲವೇ ತಿಂಗಳಲ್ಲಿ ಕಾರ್ಯಕರ್ತರ ಚುನಾವಣೆಗಳಾದ ಜಿ.ಪಂ. ಮತ್ತು ತಾ,ಪಂ ಚುನಾವಣೆಗಳು ಬರಲಿದೆ ಈ ಹಿನ್ನಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಇದಕ್ಕೆ ಬಳಕೆ ಮಾಡಿಕೊಂಡು ಮತದಾರರಿಗೆ ಕೇಂದ್ರದ ಯೋಜನೆ ಹಾಗೂ ಸಾಧನೆಗಳನ್ನು ತಿಳಿಸುವ ಕಾರ್ಯವನ್ನು ಮಾಡುವಂತೆ ಕರೆ ನೀಡಿದರು.

ಪ್ರತಿಯೊಂದು ಬೂತ ನಲ್ಲಿ ಕನಿಷ್ಠ 300 ಜನ ಸದಸ್ಯರನ್ನಾಗಿ ಮಾಡಬೇಕಿದೆ ಇದರಲ್ಲಿ ಕನಿಷ್ಠ 100 ಜನ ಮಹಿಳಾ ಸದಸ್ಯರಿರಬೇಕಿದೆ. ನಮ್ಮಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ  ಇದ್ದು ಈ ಸಮಯದಲ್ಲಿ ಅದನ್ನು ಹೆಚ್ಚಳ ಮಾಡ ಬೇಕಿದೆ. ನಮ್ಮ ಪಕ್ಷ ಕಾರ್ಯಕರ್ತರ ಪಕ್ಷವಾಗಿದೆ ನಮ್ಮಲ್ಲಿ ಸಾಮಾನ್ಯ ಕಾರ್ಯಕರ್ತರ ಉನ್ನತವಾದ ಸ್ಥಾನವನ್ನು ಪಡೆಯಬಹುದೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿ ತೋರಿಸಿದ್ದಾರೆ. ಇದರಂತೆ ಎಲ್ಲರು ಸಹಾ ಒಂದು ದಿನ ಪಕ್ಷದಲ್ಲಿ ಉನ್ನತವಾದ ಸ್ಥಾನವನ್ನು ಪಡೆಯಬಹುದಾಗಿದೆ ಅದಕ್ಕಾಗಿ ಕಾಯಬೇಕು ಎಂದ ಅವರು ರಾಜ್ಯದಲ್ಲಿ ಈಗ ಇರುವುದು ದರಿದ್ರ ಸರ್ಕಾರವಾಗಿದೆ ಅದು ಆಡಳಿತಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಯಾವ ಅಭೀವೃದ್ದಿ ಕಾರ್ಯವು ಆಗಿಲ್ಲ, ಕಾನೂನು ಸುವ್ಯವೆಸ್ಥೆ ಹದಗೆಟ್ಟಿ ಹೋಗಿದೆ, ಎಲ್ಲಿ ಅಂದರೆ ಅಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ ಇವರನ್ನು ನಿಯಂತ್ರಿಸಬೇಕಿದ್ದ ಸರ್ಕಾರ ಅವರಿಗೆ ಸಹಾಯ ಮಾಡುತ್ತಿದೆ ಇದಕ್ಕೆ ಉದಾಹರಣೆಯಾಗಿ ಇತ್ತೀಚಿನ ದಿನದಲ್ಲಿ ಪರಪ್ಪನ ಆಗ್ರಹಾರದಲ್ಲಿ ನಡೆಯುವ ಘಟನೆಗಳು ಕಾರಣವಾಗಿದೆ. ಇದರ ಬಗ್ಗೆ ಜನರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು.

ರಾಜ್ಯದಲ್ಲಿ ಸರ್ಕಾರವನ್ನು ಯಾರು ಬೀಳಿಸುವುದಿಲ್ಲ ಅದು ತಾನಾಗಿಯೇ ಬೀಳುತ್ತದೆ. ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಕೆಲಸವನ್ನು ಮಾಡಬೇಕಿದೆ. ನಮ್ಮೆಲ್ಲರಿಗೂ ಪಕ್ಷ ತಾಯಿ ಇದ್ದಂತೆ ಅದಕ್ಕೆ ದ್ರೋಹ ಮಾಡದೇ ಆತ್ಮ ವಿಶ್ವಾಸದಿಂದ ಕೆಲಸವನ್ನು ಮಾಡಬೇಕಿದೆ. ಆಗ ಮಾತ್ರ ಪಕ್ಷದಲ್ಲಿ ಉನ್ನತವಾದ ಸ್ಥಾನ ದೂರಕಲು ಸಾಧ್ಯವಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಶಾಸಕರಾದ ಎಂ.ಚಂದ್ರಪ್ಪ ಮಾತನಾಡಿ, 2018ರಲ್ಲಿ ನಮ್ಮ ಪಕ್ಷ ಸದಸ್ಯ ಅಭೀಯಾನವನ್ನು ಮಾಡಿತ್ತು ಅದರಲ್ಲಿ 8 ಕೋಟಿ ಜನರನ್ನು ಸದಸ್ಯರನ್ನಾಗಿ ಮಾಡಲಾಗಿತ್ತು ಈಗ 10 ಕೋಟಿ ಜನರನ್ನು ಸದಸ್ಯರನ್ನಾಗಿ ಮಾಡುವ ಗುರಿಯನ್ನು ನೀಡಲಾಗಿದೆ. ಇದರ ಬಗ್ಗೆ ಎಲ್ಲರು ಶ್ರಮಿಸಬೇಕಿದೆ. ಹೊಳಲ್ಕೆರೆಯಲ್ಲಿ 80 ಸಾವಿರ ಜನರನ್ನು ಸದಸ್ಯರನ್ನಾಗಿ ಮಾಡಲಾಗಿತ್ತು ಇದರಿಂದ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಪಡೆಯಲು ಸಾಧ್ಯವಾಗಿತ್ತು. ಮುಂದಿನ ದಿನದಲ್ಲಿ ಜಿ.ಪಂ. ತಾ.ಪಂ. ಎಪಿಎಂಸಿ ಚುನಾವಣೆಗಳು ಬರಲಿವೆ. ಇದು ಕಾರ್ಯಕರ್ತರ ಚುನಾವಣೆಯಾಗಿದೆ ಇದರಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಚುನಾವಣೆಗೆ ಹುರಿದುಂಬಿಸಬೇಕಿದೆ. ಸೆ, 1ರಿಂದ 30 ರವರೆಗೆ ಸದಸ್ಯತ್ವ ಅಭೀಯಾನ ನಡೆಯಲಿದ್ದು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜಿಲ್ಲೆಯಿಂದ ಸದಸ್ಯರನ್ನಾಗಿ ಮಾಡಬೇಕಿದೆ ಎಂದು ತಿಳಿಸಿದರು.

ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ ಮಾತನಾಡಿ, ನಮ್ಮ ಪಕ್ಷದಲ್ಲಿ ಪ್ರತಿ ಆರು ವರ್ಷಕ್ಕೂಮ್ಮೆ ಸದಸತ್ ಅಭೀಯಾನವನ್ನು ಮಾಡಲಾಗುತ್ತದೆ. ಇದರಲ್ಲಿ ಸದಸ್ಯತ್ವ  ಪಡೆದವರು ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು ಅಲ್ಲದೆ ವಿವಿಧ ರೀತಿಯ ಹುದ್ದೆಗಳನ್ನು ಸಹಾ ಪಡೆಯಬಹುದಾಗಿದೆ ಸದಸ್ಯತ್ ಪಡೆಯದೆ ಪಕ್ಷದಲ್ಲಿ ಯಾವ ಹುದ್ದೆಗಳು ಸಹಾ ಸಿಗುವುದಿಲ್ಲ ಎಂದು ತಿಳಿಸಿ, ಪಕ್ಷ ನೀಡುವಂತ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ, ಸೆ. 2 ರಿಂದ 17 ರವರೆಗೆ ದೂರವಾಣಿ ಮೂಲಕ ಸದಸ್ಯವನ್ನು ಪಡೆಯಲು ಅವಕಾಶವನ್ನು ನೀಡಲಾಗಿದೆ. ಈ ಬಾರಿ 100 ರೂ, ನೀಡಿ ಸದಸ್ಯತ್ವವನ್ನು ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್, ಸುರೇಶ್ ಸಿದ್ದಾಪುರ, ಸದಸ್ಯತ್ವಾ ಅಭಿಯಾನದ ಸಂಚಾಲಕರಾದ ಸಂಪತ್ ಕುಮಾರ್, ಸಹ ಸಂಚಾಲಕರಾದ ಮಲ್ಲಿಕಾರ್ಜನ್, ರೂಪ ಸುರೇಶ್, ಮಂಜುನಾಥ್, ಕಲ್‍ಮಟ್, ರಾಜು ಜಿ.ಪಂ.ಮಾಜಿ ಅಧ್ಯಕ್ಷರಾದ ಶ್ರೀಮತಿ ಸೌಬಾಗ್ಯ ಬಸವರಾಜನ್ ಸೇರಿದಂತೆ ಇತರರು ಭಾಗವಹಿಸಿದ್ದರು.     

Leave a Reply

Your email address will not be published. Required fields are marked *