Voter ID ಕಾರ್ಡ್‌ನಲ್ಲಿ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಲೆಬೇಡಿ! ಇಲ್ಲದಿದ್ರೆ ಜೈಲು ಸೇರುವುದು ಖಚಿತ!

ಭಾರತೀಯ ಚುನಾವಣಾ ಆಯೋಗದ ಚುನಾವಣಾ ಪರಿಶೀಲನಾ ಕಾರ್ಯಕ್ರಮವು ವ್ಯಕ್ತಿಗಳು ತಮ್ಮ ಮತದಾರರ ಗುರುತಿನ ಚೀಟಿಯಲ್ಲಿ (Voter ID Card) ಯಾವುದೇ ದೋಷಗಳನ್ನು ಸರಿಪಡಿಸಲು ಅನುಮತಿಸುತ್ತದೆ. ಇದರೊಂದಿಗೆ ಮತದಾರರ ಗುರುತಿನ ಚೀಟಿಯು ಭಾರತದ ನಾಗರಿಕರಿಗೆ ಮತದಾನದ ಹಕ್ಕನ್ನು ನೀಡುತ್ತದೆ.

ಆದರೆ ಕೆಲವೊಮ್ಮೆ ನಿಮ್ಮದೊಂದು ತಪ್ಪು ನಿಮಗೆ ಭಾರಿ ನಷ್ಟದೊಂದಿಗೆ ಜೈಳಿಗೂ ಸೇರಿಸಬಹುದು. ಮತದಾರರ ಗುರುತಿನ ಚೀಟಿಯಲ್ಲಿ (Voter ID Card) ಬದಲಾವಣೆ ಅಂದ್ರೆ ನೀವು ತುಂಬಾ ಜಾಗರೂಕರಾಗಿರಬೇಕು.

ನೀವೊಬ್ಬ ಭಾರತೀಯನಾಗಿದ್ದರೆ ಮತದಾರರ ಗುರುತಿನ ಚೀಟಿಯಲ್ಲಿ (Voter ID Card) ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ ಆದರೆ ಅದರ ಬದಲಾವಣೆ ಕುರಿತು ಇಂದು ನಾವು ನಿಮಗೆ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಒಂದಿಷ್ಟು ಮುಖ್ಯ ಮಾಹಿತಿಯನ್ನು ನೀಡಲಿದ್ದೇವೆ. ಮತದಾರರ ಗುರುತಿನ ಚೀಟಿಯ (Voter ID Card) ಸ್ಟೇಟಸ್ ಅನ್ನು ನೀವು ಆನ್‌ಲೈನ್‌ನಲ್ಲಿ ಹೇಗೆ ಪರಿಶೀಲಿಸುವುದು ಮತ್ತು ಒಂದಕ್ಕಿಂತ ಹೆಚ್ಚು ಕಾರ್ಡ್ ಹೊಂದಿದ್ದರೆ ಅದನ್ನು ಹಿಂತಿರುಗಿಸುವುದು ಹೇಗೆ ಎಂಬುದನ್ನು ಈ ಕೆಳಗೆ ತಿಳಿಯೋಣ.

Voter ID ಕಾರ್ಡ್‌ನಲ್ಲಿ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಲೆಬೇಡಿ!

ಮತದಾರರ ಗುರುತಿನ ಚೀಟಿಯ ಬಗ್ಗೆ ನೀವು ಸ್ಪಷ್ಟವಾಗಿರಬೇಕಾದ ಒಂದು ವಿಷಯವೆಂದರೆ ಅದು ಸರ್ಕಾರಿ ದಾಖಲೆಯಾಗಿದ್ದು ಅದು ನಾಗರಿಕರಿಗೆ ಮತದಾನದಲ್ಲಿ ಭಾಗವಹಿಸಲು ನೀಡಲಾಗುತ್ತದೆ. ಆದರೆ 2 ಅಥವಾ ಅದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿದ್ದರೆ ನಿಮ್ಮನ್ನು ಜೈಲಿಗೆ ಕಳುಹಿಸಬಹುದು. ಆದ್ದರಿಂದ ನೀವು ತುಂಬಾ ಜಾಗರೂಕರಾಗಿರಬೇಕು. ವಾಸ್ತವವಾಗಿ ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಲ್ಲಿ ಮತದಾರರಾಗಿ ನೋಂದಾಯಿಸಿರುವುದು ಅಕ್ರಮವೆಂದು ಸಾಬೀತಾಗಿದೆ.

ಒಂದೇ ಹೆಸರು ಎರಡು Voter ID Card ಪಟ್ಟಿಯಲ್ಲಿ ಕಂಡರೆ ರದ್ದುಗೊಳಿಸುವುದು ಹೇಗೆ?

ನಿಮ್ಮಲ್ಲಿಯೂ ಎರಡು ಮತದಾರರ ಪಟ್ಟಿಗಳಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ನೀವು ಅದನ್ನು ಇಂದು ರದ್ದುಗೊಳಿಸಬಹುದು. ಇದಕ್ಕಾಗಿ ನೀವು ಫಾರ್ಮ್ 7 ಅನ್ನು ಭರ್ತಿ ಮಾಡಬೇಕಾಗುತ್ತದೆ. ನೀವು ಇದನ್ನು ಆಫ್‌ಲೈನ್ ಮತ್ತು ಆನ್‌ಲೈನ್ ಎರಡರಲ್ಲೂ ಭರ್ತಿ ಮಾಡಬಹುದು. ಇದರಲ್ಲಿ ನೀವು ಎಲ್ಲಾ ಮಾಹಿತಿಯನ್ನು ಬಹಳ ಎಚ್ಚರಿಕೆಯಿಂದ ತುಂಬಬೇಕು. ಒಮ್ಮೆ ನೀವು ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ನೀವು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ತೆಗೆಯಲಾಗಿದ್ದರೆ ಈ ರೀತಿ ಪರಿಶೀಲಿಸಬಹುದು.

ವೋಟರ್ ಐಡಿ ಮಾಹಿತಿ ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಿ: ಇದರ ಹೊರತಾಗಿ ನೀವು ಚುನಾವಣಾ ಆಯೋಗದ ಸೈಟ್‌ನಲ್ಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಪಡೆಯಬಹುದು. ಇಲ್ಲಿಗೆ ಹೋಗುವ ಮೂಲಕ ನೀವು ಹೊಸ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು. ಅಲ್ಲದೆ ಇದಕ್ಕಾಗಿ ನೀವು ಪ್ರತ್ಯೇಕವಾಗಿ ಏನನ್ನೂ ಮಾಡಬೇಕಾಗಿಲ್ಲ. ಅರ್ಜಿ ಸಲ್ಲಿಸಿದ ನಂತರ ನೀವು ಸಾಮಾನ್ಯ ಸ್ಟೇಟಸ್ ಪರಿಶೀಲಿಸಬೇಕು. ಆದರೆ ಇದೀಗ ಮತದಾರರ ಗುರುತಿನ ಚೀಟಿ ಪಡೆಯಲು ಬಳಕೆದಾರರು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಆನ್‌ಲೈನ್‌ನಲ್ಲಿ ಇದಕ್ಕೆ ಸಂಬಂಧಿಸಿದ ದೂರನ್ನು ಸಹ ನೋಂದಾಯಿಸಬಹುದು.

Source : https://m.dailyhunt.in/news/india/kannada/digit+kannada-epaper-dgitkan/voter+id+kaardnalli+appitappiyu+ee+tappugalannu+maadalebedi+illadidre+jailu+seruvudu+khachita-newsid-n596717942?sm=Y

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *