ನೀವೂ ಅತಿ ಹೆಚ್ಚು ಆನ್ಲೈನ್ ಶಾಪಿಂಗ್ ಮಾಡುತ್ತೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ!

Online Shopping: ಇತ್ತೀಚಿನ ಕೆಲವು ವರ್ಷಗಳಲ್ಲಿ, ಜನರಲ್ಲಿ ಆನ್‌ಲೈನ್ ಶಾಪಿಂಗ್ ಕ್ರೇಜ್ ಸಾಕಷ್ಟು ಹೆಚ್ಚಾಗಿದೆ. ಜನರು ಆನ್‌ಲೈನ್‌ನಲ್ಲಿ ಸಾಕಷ್ಟು ಸರಕುಗಳನ್ನು ಆರ್ಡರ್ ಮಾಡಲು ಪ್ರಾರಂಭಿಸಿದ್ದಾರೆ. ಏತನ್ಮಧ್ಯೆ, ಸರ್ಕಾರವು ರಾಷ್ಟ್ರೀಯ ಇ-ಕಾಮರ್ಸ್ ನೀತಿಯನ್ನು ಜಾರಿಗೆ ತರುತ್ತಿದೆ, ಇದು ಕಂಪನಿಗಳು ಮತ್ತು ಆನ್‌ಲೈನ್ ಶಾಪರ್‌ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ (Business News In Kannada).  

ಬೆಂಗಳೂರು: ಇಂದಿನ ಯುಗದಲ್ಲಿ ಆನ್‌ಲೈನ್ ಶಾಪಿಂಗ್ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಜನರು ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಾರೆ. ವಾಸ್ತವದಲ್ಲಿ, ಆನ್‌ಲೈನ್‌ನಲ್ಲಿ ಸರಕುಗಳನ್ನು ಆರ್ಡರ್ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ (Business News In Kannada). ಒಂದು, ಅದರಲ್ಲಿ ರಿಯಾಯಿತಿಯೂ ಸಿಗುತ್ತದೆ ಮತ್ತು ಸರಕುಗಳನ್ನು ಮನೆಗೂ ಕೂಡ ತಲುಪಿಸಲಾಗುತ್ತದೆ, ಇದರಿಂದಾಗಿ ಜನರಿಗೆ ಅನುಕೂಲವಾಗುತ್ತದೆ. ಆದರೆ, ಇದೀಗ ಸರ್ಕಾರ ಆನ್‌ಲೈನ್ ಶಾಪಿಂಗ್‌ಗೆ ಸಂಬಂಧಿಸಿದ ಕೆಲವು ನೀತಿಗಳನ್ನು ಜಾರಿಗೊಳಿಸಲು ಹೊರಟಿದೆ. ರಾಷ್ಟ್ರೀಯ ಇ-ಕಾಮರ್ಸ್ ನೀತಿಯನ್ನು ಸರ್ಕಾರವು ಅನುಷ್ಟಾನಕ್ಕೆ ತರಲು ಚಿಂತನೆ ನಡೆಸುತ್ತಿದೆ. ಇದು ಆನ್‌ಲೈನ್ ಶಾಪಿಂಗ್‌ನ ಮೇಲೂ ಪರಿಣಾಮ ಬೀರಬಹುದು.

ಆನ್ಲೈನ್ ​​ಶಾಪಿಂಗ್
ಇತ್ತೀಚಿನ ಮಾಹಿತಿಯ ಪ್ರಕಾರ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಲಾಯದ  ಮೂಲಕ ಸಿದ್ಧಪಡಿಸಲಾಗುತ್ತಿರುವ ಉದ್ದೇಶಿತ ರಾಷ್ಟ್ರೀಯ ಇ-ಕಾಮರ್ಸ್ ನೀತಿ ಅಂತಿಮ ಹಂತದಲ್ಲಿದೆ. ಈ ಕುರಿತು ಮಾಹಿತಿ ನೀಡಿರುವ ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು, ಮಧ್ಯಸ್ಥಗಾರರ ಅಭಿಪ್ರಾಯ ಪಡೆಯಲು ಯಾವುದೇ ಹೊಸ ಕರಡು ನೀತಿಯನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ವಾಸ್ತವವಾಗಿ, ಇ-ಕಾಮರ್ಸ್ ಕಂಪನಿಗಳು ಈ ನೀತಿಯಿಂದ ನಿಯಂತ್ರಿಸಲ್ಪಡುತ್ತವೆ, ಅದರ ಪರಿಣಾಮವನ್ನು ಆನ್‌ಲೈನ್ ಶಾಪಿಂಗ್‌ನಲ್ಲಿ ಗೋಚರಿಸಲಿದೆ.

ಇ-ಕಾಮರ್ಸ್
ಇ-ಕಾಮರ್ಸ್ ಕಂಪನಿಗಳ ಮೂಲಕ ನೀಡಲಾಗುವ ರಿಯಾಯಿತಿಗಳು, ಉತ್ಪನ್ನಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹಲವು ಬಾರಿ ಕಂಡುಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಈ ನೀತಿಯಿಂದ ಜನರಿಗೆ ಪರಿಹಾರ ನೀಡುವ ಕೆಲಸ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಆಗಸ್ಟ್ 2 ರಂದು ಇ-ಕಾಮರ್ಸ್ ಕಂಪನಿಗಳು ಮತ್ತು ದೇಶೀಯ ವ್ಯಾಪಾರಿಗಳ ಪ್ರತಿನಿಧಿಗಳೊಂದಿಗೆ ಉದ್ದೇಶಿತ ನೀತಿಯ ಕುರಿತು ವಿಸ್ತೃತ ಚರ್ಚೆ ನಡೆಸಿದೆ.  ಈ ಸಭೆಯಲ್ಲಿ ಪ್ರಸ್ತಾವಿತ ನೀತಿಯ ಬಗ್ಗೆ ಸಂಬಂಧಪಟ್ಟ ಮಧ್ಯಸ್ಥಗಾರರಲ್ಲಿ ವಿಶಾಲವಾದ ಒಮ್ಮತ ಹೊರಹೊಮ್ಮಿದೆ ಎನ್ನಲಾಗಿದೆ.

ಕರಡು ನೀತಿ ಇಲ್ಲ
ಅನಾಮಧೇಯತೆಯ ಷರತ್ತಿನ ಮೇಲೆ ಮಾಹಿತಿ ನೀಡಿರುವ ಅಧಿಕಾರಿ, “ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕರಡು ನೀತಿ ಬರುವುದಿಲ್ಲ. ಆ ಕಸರತ್ತು ಇದೀಗ ಮುಗಿದಿದೆ. ನಾವು ಅಂತಿಮ ಸಹಿಗಾಗಿ ಕಾಯುತ್ತಿದ್ದೇವೆ.’’ ಎಂದಿದ್ದಾರೆ. ಪ್ರಸ್ತಾವಿತ ನೀತಿಯನ್ನು ಇದೀಗ ಸರಕಾರದ ಉನ್ನತ ಮಟ್ಟಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ  ದತ್ತಾಂಶ ಸ್ಥಳೀಕರಣದ ಕುರಿತು, ಇ-ಕಾಮರ್ಸ್ ಕಂಪನಿಗಳು ದೇಶದ ಕಾನೂನನ್ನು ಅನುಸರಿಸಬೇಕು ಎಂದು ಅಧಿಕಾರಿ ಹೇಳಿದ್ದಾರೆ. ಇದಕ್ಕೂ ಮುನ್ನ ಸಚಿವಾಲಯವು ಎರಡು ಕರಡು ರಾಷ್ಟ್ರೀಯ ಇ-ಕಾಮರ್ಸ್ ನೀತಿಗಳನ್ನು ಬಿಡುಗಡೆ ಮಾಡಿತ್ತು.

Source : https://zeenews.india.com/kannada/business/business-news-in-kannada-fond-of-online-shopping-then-you-must-read-this-story-153329

Leave a Reply

Your email address will not be published. Required fields are marked *