ಹಸಿದವರಿಗೆ ಅನ್ನದಾತ; ನಿತ್ಯ ಸಾವಿರಾರು ಜನರ ಹೊಟ್ಟೆ ತುಂಬಿಸುವ ಈ ಫುಡ್​ಮ್ಯಾನ್​ ಬಗ್ಗೆ ಗೊತ್ತಾ?

Lucknow’s food man Vishal Singh: ಫುಡ್ ಮ್ಯಾನ್ ಎಂದೇ ಖ್ಯಾತರಾಗಿರುವ ವ್ಯಕ್ತಿಯೊಬ್ಬರು ಬಡವರ ಹಸಿವನ್ನೇ ನೀಗಿಸಲು ಜನಿಸಿದಂತೆ ಕಾಣುತ್ತಾರೆ. ಇವರು ಪ್ರಾರಂಭಿಸಿದ ಅಭಿಯಾನದಿಂದಾಗಿ ಪ್ರತಿದಿನ ಸಾವಿರಾರು ಜನರು ಹೊಟ್ಟೆ ತುಂಬ ಉಚಿತವಾಗಿ ಊಟ ಮಾಡುತ್ತಿದ್ದಾರೆ.

ಲಖನೌ (ಉತ್ತರಪ್ರದೇಶ): ಯಾರಾದರು ಹಸಿದಿದ್ದರೆ ನಾನೂ ಕೂಡ ಊಟ ಮಾಡಬಾರದು ಎಂಬ ಸಂಕಲ್ಪದಿಂದ ಉತ್ತರ ಪ್ರದೇಶದ ರಾಜಧಾನಿ ಲಖನೌದ ಯುವಕನೊಬ್ಬ ಒಂದೂವರೆ ದಶಕದ ಹಿಂದೆ ಬಡವರಿಗೆ ಅನ್ನ ನೀಡುವ ಅಭಿಯಾನ ಆರಂಭಿಸಿದ್ದರು. ಇದೀಗ ಇದು ದೊಡ್ಡ ಅಭಿಯಾನವಾಗಿ ಮಾರ್ಪಟ್ಟಿದೆ. ಫುಡ್ ಮ್ಯಾನ್ ಎಂದೇ ಹೆಸರಾದ ವಿಶಾಲ್ ಸಿಂಗ್ ಕೂಡ ಆಹಾರವನ್ನೇ ಅವಲಂಬಿಸಬೇಕಾದ ಆ ಕಡು ಬಡತನದಲ್ಲಿ ಜೀವಿಸಿ ಬಂದಿದ್ದಾರೆ.

ಆಸ್ಪತ್ರೆಯಲ್ಲಿ ತಂದೆಯ ಅಕಾಲಿಕ ಮರಣದ ನಂತರ ಫುಡ್​ ಮ್ಯಾನ್​ ವಿಶಾಲ್ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡವರು ಮತ್ತು ನಿರ್ಗತಿಕರಿಗೆ ಉಚಿತ ಆಹಾರದ ವ್ಯವಸ್ಥೆ ಮಾಡಲು ನಿರ್ಧರಿಸಿದರು. ಅವರ ಇಚ್ಛಾಶಕ್ತಿ ಮತ್ತು ಜನರ ಬೆಂಬಲದೊಂದಿಗೆ ಈ ಅಭಿಯಾನವು ಮುಂದುವರೆದಿದೆ. ಅವರು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಿಂದ ‘ಪ್ರಸಾದ ಸೇವೆ’ಯನ್ನು ಪ್ರಾರಂಭಿಸಿದರು. ಈಗ ಪ್ರತಿ ದಿನ ಸಾವಿರಕ್ಕೂ ಹೆಚ್ಚು ಜನರಿಗೆ ಊಟ ಬಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ದಿನನಿತ್ಯ ಸಾವಿರಾರೂ ಜನರ ಹೊಟ್ಟೆ ತುಂಬಿಸುವ ಫುಡ್​ಮ್ಯಾನ್

ವಿಶಾಲ್ ಅವರು ಅನೇಕ ನಿರಾಶ್ರಿತ ಆಶ್ರಯಗಳನ್ನು ನಿರ್ಮಿಸಿದ್ದಾರೆ. ಅಲ್ಲಿ ವಾಸಿಸುವ ಜನರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದೀಗ ವಿಶಾಲ್ ಹಂಗರ್ ಫ್ರೀ ವರ್ಲ್ಡ್ ಆರ್ಮಿ ಎಂಬ ಅಭಿಯಾನವನ್ನು ಆರಂಭಿಸಿದ್ದು, ಅದರ ಅಡಿಯಲ್ಲಿ ಮುಂದಿನ ವರ್ಷ ಅವರನ್ನು ಲಂಡನ್‌ಗೆ ಆಹ್ವಾನಿಸಲಾಗಿದೆ. ಈ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯಲು ಅವರು ಅಲ್ಲಿ ಈ ತಂತ್ರವನ್ನು ರೂಪಿಸಲಿದ್ದಾರೆ.

ಯಾರೀ ಫುಡ್ ಮ್ಯಾನ್?: ಫುಡ್ ಮ್ಯಾನ್ ಎಂದೇ ಖ್ಯಾತರಾಗಿರುವ ವಿಶಾಲ್ ಸಿಂಗ್ 2003ರಲ್ಲಿ ಅವರ ತಂದೆ ಗುರ್ಗಾಂವ್​ನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆ ಸಮಯದಲ್ಲಿ ಹಸಿವಿನಿಂದ ಮತ್ತು ಬಾಯಾರಿಕೆಯಿಂದ ಇರಬೇಕಾದ ಸ್ಥಿತಿ ಅವರಿಗೆ ಬಂದೊದಗಿತ್ತು. ಆಗ ನಾನು ಆ ನೋವನ್ನು ಸಹಿಸಿಕೊಂಡೆ. ಈ ಸಮಸ್ಯೆ ನನ್ನ ಗಮನಕ್ಕೆ ಬಂದಾಗ ಆಸ್ಪತ್ರೆಯಲ್ಲಿ ನಾನೊಬ್ಬನೇ ಈ ನೋವು ಅನುಭವಿಸುತ್ತಿಲ್ಲ. ನನ್ನಂತೆ ಅನೇಕರು ತಮ್ಮ ಕುಟುಂಬ ಸದಸ್ಯರ ಚಿಕಿತ್ಸೆಗೆ ಬಂದಿದ್ದಾರೆ. ಹಣದ ಕೊರತೆ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಇಲ್ಲಿನ ಜನ ಹಸಿವಿನಿಂದ ಇರಬೇಕಾದ ಸ್ಥಿತಿ ಅವರಿಗೆ ಬಂದಿದೆ ಎಂದು ನನಗೆ ತಿಳಿಯಿತು ಅಂತಾ ವಿಶಾಲ್ ಹೇಳುತ್ತಾರೆ. ವಿಶ್ರಾಂತಿ ಪಡೆಯುತ್ತಿರುವ ವಿಶಾಲ್​ ಸಿಂಗ್​

‘ರಸ್ತೆಗೆ ಎಸೆದ ಸಮೋಸ ತಿನ್ನುವುದನ್ನು ನೋಡಿದ್ದೇನೆ’: ನನಗೆ ಜನರ ಸೇವೆ ಮಾಡಿ ಹೊಟ್ಟೆ ತುಂಬಿಸುವ ಸಂಕಲ್ಪ ಚಿಗುರೊಡೆದದ್ದು ಈ ಸಮಯದಲ್ಲೇ. ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಂದೆ ಮೃತಪಟ್ಟಿರು. ಆದರೆ ತನಗೆ ಸಾಧ್ಯವಾದಾಗಲೆಲ್ಲಾ ನಿರ್ಗತಿಕರಿಗೆ ಅಡುಗೆ ಮನೆಯನ್ನು ಖಂಡಿತ ನಡೆಸುತ್ತೇನೆ ಎಂಬ ಸಂಕಲ್ಪ ನನ್ನ ಮನದಲ್ಲಿ ಗಟ್ಟಿಯಾಗಿ ಉಳಿಯಿತು. ಎಸೆದ ಸಮೋಸವನ್ನೂ ತಿನ್ನಬೇಕಾದ ಪರಿಸ್ಥಿತಿಯನ್ನು ನಾನೂ ನೋಡಿದ್ದೇನೆ ಎನ್ನುತ್ತಾರೆ ವಿಶಾಲ್​. ಒಂದೊತ್ತಿನ ಆಹಾರ

ಲಖನೌಗೆ ಬಂದ ಫುಡ್ ಮ್ಯಾನ್: ತಂದೆಯ ಮರಣದ ನಂತರ ನಾನು ಲಖನೌಗೆ ಬಂದೆ. ಸೈಕಲ್ ಸ್ಟ್ಯಾಂಡ್ ಮತ್ತು ಟೀ ಅಂಗಡಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಕಠಿಣ ಪರಿಶ್ರಮದ ನೆರವಿನಿಂದ ನಾನು ಸ್ವಯಂ ಉದ್ಯೋಗಿಯಾಗಲು ಸಾಧ್ಯವಾಯಿತು. ಬಳಿಕ ನನ್ನ ಆರ್ಥಿಕ ಸ್ಥಿತಿ ಸುಧಾರಿಸಿತು ಎಂದು ವಿಶಾಲ್​ ಹೇಳುತ್ತಾರೆ.

ಪ್ರಸಾದ ಸೇವೆ ಆರಂಭಿಸಿದ ಫುಡ್ ಮ್ಯಾನ್: ಆರ್ಥಿಕ ಕ್ಷೇತ್ರದಲ್ಲಿ ನಾವು ಯಶಸ್ಸು ಪಡೆದಾಗ ನನ್ನ ಸಂಕಲ್ಪ ಪೂರೈಸುವ ಸಮಯ ಬಂದಿತು ಎಂದು ನಾನು ಭಾವಿಸಿದೆ. ನಾನು 2007 ರಲ್ಲಿ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಮೊದಲು ನಾವು ವೈದ್ಯಕೀಯ ಕಾಲೇಜಿನ ಹೊರಗಿನ ನಿರ್ಗತಿಕರಿಗೆ ಆಹಾರ ವಿತರಿಸುತ್ತಿದ್ದೆವು. ನಮ್ಮ ಸೇವಾ ಮನೋಭಾವನೆಯನ್ನು ಕಂಡ ವೈದ್ಯಕೀಯ ವಿಶ್ವವಿದ್ಯಾಲಯದ ಆಡಳಿತವು 2015ರಲ್ಲಿ ನರರೋಗ ವಿಭಾಗದ ಮುಂದೆ ಜಾಗ ಒದಗಿಸಿ ‘ಪ್ರಸಾದ ಸೇವೆ’ ಎಂಬ ಹೆಸರಿನಲ್ಲಿ ಇಲ್ಲಿ ಸೇವಾ ಮಂದಿರವನ್ನು ಆರಂಭಿಸಿದೆವು ಎಂದು ವಿಶಾಲ್​ ಹೇಳುತ್ತಾರೆ. ದಿನನಿತ್ಯ ಸಾವಿರಾರೂ ಜನರ ಹೊಟ್ಟೆ ತುಂಬಿಸುವ ಫುಡ್​ಮ್ಯಾನ್

ಸೇವೆಯೇ ಜೀವನದ ಸಂಕಲ್ಪ: ನಾನು ಉದ್ಯೋಗ ತೊರೆದು ಸೇವೆಯನ್ನೇ ಜೀವನದ ಸಂಕಲ್ಪವನ್ನಾಗಿಸಿಕೊಳ್ಳಲು ನಿರ್ಧರಿಸಿದಾಗ ನಮ್ಮ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದರು. ನನ್ನನ್ನು ಹುಚ್ಚ ಎಂದು ಕರೆಯಲಾಯಿತು. ನಮ್ಮ ಕೆಲಸಕ್ಕೆ ವಿರೋಧಿಗಳು ಇದ್ದಾಗ, ನಾವು ಅಷ್ಟೇ ಬೆಂಬಲಿಗರನ್ನು ಸಹ ಕಾಣುತ್ತೇವೆ. ನಮ್ಮ ಸೇವಾ ಮನೋಭಾವನೆಯನ್ನು ಕಂಡು ವೈದ್ಯಕೀಯ ವಿಶ್ವವಿದ್ಯಾಲಯದ ವಿಸಿ ಹಾಗೂ ರಾಜೀವ್ ಸಿಂಗ್ ಅವರಂತಹ ಹಿರಿಯ ಸಹೋದರ ಈ ಗುರಿಯನ್ನು ಸಾಧಿಸಲು ನನಗೆ ಸಾಕಷ್ಟು ಸಹಾಯ ಮಾಡಿದರು. ಕ್ರಮೇಣ ಈ ಸೇವೆ ಬೆಳೆಯಲು ಪ್ರಾರಂಭಿಸಿತು ಎಂದು ಅವರು ಹೇಳುತ್ತಾರೆ. ತಮ್ಮ ಹೋರಾಟದ ಕಥೆ ಹೇಳುವಾಗ ವಿಶಾಲ್ ಭಾವುಕರಾದರು.

ಬಡವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಜನ: ಸೇವೆಯ ಹಾದಿಯಲ್ಲಿ ಸಾಗಿದಾಗ ಎಷ್ಟೇ ಹಣವಿದ್ದರೂ ಅಲ್ಪ ಮೊತ್ತವೇ ಉಳಿಯುತ್ತದೆ. ಹಣದ ಕೊರತೆ ಪ್ರಾರಂಭವಾದಾಗ ನಾವು ಇಲ್ಲಿಗೆ ಆಗಮಿಸಿ ಅವರ ಜನ್ಮದಿನವನ್ನು ಆಚರಿಸಿ ಮತ್ತು ಬಡವರಿಗೆ ಆಹಾರ ನೀಡುವಲ್ಲಿ ನಮ್ಮ ಮಿತ್ರರಾಗುವಂತೆ ಮನವಿ ಮಾಡಿದೆವು. ಕ್ರಮೇಣ ಜನರು ನಮ್ಮೊಂದಿಗೆ ಸೇರಲು ಪ್ರಾರಂಭಿಸಿದರು. ಕೆಲವರು ಹುಟ್ಟುಹಬ್ಬದ ನೆಪದಲ್ಲಿ ಬಂದರೆ, ಇನ್ನೂ ಕೆಲವರು ತಮ್ಮ ವಿವಾಹ ವಾರ್ಷಿಕೋತ್ಸವದ ಖುಷಿಯನ್ನು ಜನರೊಂದಿಗೆ ಹಂಚಿಕೊಳ್ಳಲು ಬರುತ್ತಾರೆ ಎಂದು ವಿಶಾಲ್​ ಸಿಂಗ್​ ವಿವರಿಸುತ್ತಾರೆ.

ಹಲವು ಆಸ್ಪತ್ರೆಗಳಲ್ಲಿ ಪ್ರಸಾದ ಸೇವೆ ಆರಂಭ: ಈಗ ಈ ಮಿಷನ್ ನನ್ನಿಂದ ನಡೆಯುತ್ತಿಲ್ಲ. ಸಮಾಜದಿಂದ ನಡೆಯುತ್ತಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಬಾರಿ ಮರುದಿನದ ಪಡಿತರಕ್ಕಾಗಿ ನಮಗೆ ನಿಬಂಧನೆಗಳಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾನು ತಾಯಿ ಅನ್ನಪೂರ್ಣನನ್ನು ಪ್ರಾರ್ಥಿಸುತ್ತೇನೆ. ಆಗ ಜನರು ದೇವರ ರೂಪದಲ್ಲಿ ನಮ್ಮ ಬಳಿಗೆ ಬರುತ್ತಾರೆ ಮತ್ತು ಆಹಾರದ ವ್ಯವಸ್ಥೆ ಮಾಡುತ್ತಾರೆ. ಈ ಅಭಿಯಾನವೂ ಅದೇ ರೀತಿಯಲ್ಲಿ ನಡೆಯುತ್ತಿದೆ. ಈಗ ನನ್ನನ್ನು ಹೆಚ್ಚಿನ ಆಸ್ಪತ್ರೆಗಳಿಗೆ ಕರೆಯುತ್ತಾರೆ. ಈಗ ನಾವು ಕೆಜಿಎಂಯು, ಬಲರಾಂಪುರ ಆಸ್ಪತ್ರೆ ಮತ್ತು ಲೋಹಿಯಾ ಆಸ್ಪತ್ರೆಯಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಆಹಾರ ಒದಗಿಸಲು ಕೆಲಸ ಮಾಡುತ್ತೇವೆ. ಪ್ರತಿ ದಿನ ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರ ನೀಡುತ್ತೇವೆ ಎಂದು ವಿಶಾಲ್​ ಹೇಳುತ್ತಾರೆ.

ಜಗತ್ತನ್ನು ಹಸಿವು ಮುಕ್ತಗೊಳಿಸುವ ಅಭಿಯಾನ ಆರಂಭ: ಪ್ರಸಾದ ಸೇವೆಯನ್ನು ವಿಸ್ತರಿಸುವ ಸಂದರ್ಭದಲ್ಲಿ ನಾವು ಹಸಿವು ಮುಕ್ತ ಪ್ರಪಂಚ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ನಮ್ಮ ದೇಶ ಹಸಿವಿನ ಸೂಚ್ಯಂಕದಲ್ಲಿ ನಿರಂತರವಾಗಿ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ನಾವು ಭಾರತವನ್ನು ಮತ್ತು ಇಡೀ ವಿಶ್ವವನ್ನು ಹಸಿವು ಮುಕ್ತಗೊಳಿಸಬೇಕೆಂದು ನಾನು ಜನರಲ್ಲಿ ವಿನಂತಿಸುತ್ತೇನೆ. ನಾನು ಜ್ಯೋತಿಷ್ಯದ ವಿದ್ಯಾರ್ಥಿಯೂ ಆಗಿದ್ದೇನೆ. ಅನ್ನದಾನಕ್ಕಿಂತ ದೊಡ್ಡ ದಾನವಿಲ್ಲ ಎಂದು ಹಿಂದೂ ಧರ್ಮಗ್ರಂಥಗಳಲ್ಲಿ ಬರೆಯಲಾಗಿದೆ. ಸಾವನ್ನು ಜಯಿಸಬಲ್ಲ ದಾನವೇನಾದರೂ ಇದ್ದರೆ ಅದು ಅನ್ನದಾನ. ನಾವು ಮನುಷ್ಯನಲ್ಲಿ ನಾರಾಯಣನ ಕಲ್ಪನೆಯನ್ನು ನಂಬುತ್ತೇವೆ. ಈ ನಾರಾಯಣರು ತಮ್ಮ ಪ್ರೀತಿಪಾತ್ರರಿಗೆ ಚಿಕಿತ್ಸೆ ಪಡೆಯಲು ಸೇರಿದಂತೆ ಇತರೆ ಕಾರ್ಯಗಳಿಗೆ ಆಸ್ಪತ್ರೆಗಳಿಗೆ ಬರುತ್ತಾರೆ ಎಂದು ಫುಡ್ ಮ್ಯಾನ್ ವಿಶಾಲ್ ಸಿಂಗ್ ಹೇಳುತ್ತಾರೆ.

ಕೋವಿಡ್ ಸಮಯದಲ್ಲಿ ನಾನು ನನ್ನ ತಾಯಿಯನ್ನು ಕಳೆದುಕೊಂಡರು. ಬಳಿಕ ಕೊರೊನಾ ವೈರಸ್‌ನಿಂದ ಬಳಲುತ್ತಿದ್ದ ವಿಶಾಲ್ ಸಿಂಗ್ ಒಂದು ಕ್ಷಣವೂ ಸೇವಾ ಮನೋಭಾವವನ್ನು ಬಿಡಲಿಲ್ಲ. ಈ ಬಗ್ಗೆ ಮಾತನಾಡಿದ ಅವರು, ಇದು ತುಂಬಾ ಕಷ್ಟಕರ ಅವಧಿಯಾಗಿತ್ತು. ನಮ್ಮಂಥವರು ಮುಂದೆ ಬರದಿದ್ದರೆ ಅಸಹಾಯಕರ ಮತ್ತು ಬಡವರ ಗತಿಯೇನು?. ಗಮನದಲ್ಲಿಟ್ಟುಕೊಂಡು ನಾವು ಮೊದಲು ವಲಸೆ ಕಾರ್ಮಿಕರಿಗೆ ಸೇವೆ ಸಲ್ಲಿಸಲು ಪ್ರಾರಂಭಿಸಿದ್ದೇವೆ. ಕಾನ್ಪುರದ ಅಂದಿನ ಕಮಿಷನರ್ ರಾಜಶೇಖರ್ ಅವರ ಉಪಕ್ರಮದ ಮೇರೆಗೆ ನಾವು ರೋಡ್‌ವೇಸ್ ಸಹಯೋಗದೊಂದಿಗೆ ಸೇವೆಯ ದೊಡ್ಡ ಆಯಾಮವನ್ನು ಸ್ಥಾಪಿಸಿದ್ದೇವೆ. ಪರಿಹಾರ ಮತ್ತು ವಿಪತ್ತು ಆಯೋಗದ ಜನರಿಂದಲೂ ನನಗೆ ಕರೆ ಬಂದಿತು. ಅವರಿಗೆ ಏಳೂವರೆ ಲಕ್ಷ ಆಹಾರ ಪೊಟ್ಟಣಗಳನ್ನೂ ನೀಡಿದ್ದೇವೆ. ಪೊಲೀಸ್ ಕಮಿಷನರ್ ಸುಜಿತ್ ಪಾಂಡೆ ಕೂಡ ಸಾಕಷ್ಟು ಸಹಕಾರ ನೀಡಿದ್ದಾರೆ. ಡಿಆರ್‌ಡಿಒ ಮತ್ತು ಹಜ್ ಹೌಸ್‌ನ ಕೋವಿಡ್ ಕೇಂದ್ರಗಳ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಪರವಾಗಿ ನಾವು ವಹಿಸಿಕೊಂಡಿದ್ದೇವೆ. ಅಲ್ಲಿದ್ದ ಸಾವಿರಾರು ಜನರಿಗೆ ಆಹಾರ ಒದಗಿಸಿದ್ದೇವೆ. ಜನರ ಸೇವೆಯೂ ನಮ್ಮ ಶಕ್ತಿಯ ಮೂಲವಾಗುತ್ತದೆ ಎಂದು ಈ ಅನ್ನದಾತ ತಿಳಿಸಿದರು.

ಪ್ರಸಾದ ಸೇವಾ ಕೇಂದ್ರ ಕೋಮು ಸೌಹಾರ್ದತೆಗೆ ನಿದರ್ಶನ: ಎಲ್ಲ ಧರ್ಮ, ಜಾತಿಯ ಜನರು ಒಂದೇ ಸೂರಿನಡಿ ಕುಳಿತು ಪ್ರಸಾದ ಸ್ವೀಕರಿಸುವುದನ್ನು ನೋಡಬಹುದು. ಎಲ್ಲರೂ ಇಲ್ಲಿಗೆ ಬಂದು ಪ್ರಸಾದವನ್ನು ಪರಸ್ಪರ ಪ್ರೀತಿಯಿಂದ ತೆಗೆದುಕೊಂಡು ಹೋಗುತ್ತಾರೆ. ನಮ್ಮ ವಿಜಯ ಶ್ರೀ ಫೌಂಡೇಶನ್‌ನ ಪ್ರಯತ್ನವು ಸಾಧ್ಯವಾದಷ್ಟು ನಿರ್ಗತಿಕರಿಗೆ ಸಹಾಯ ಮಾಡುವುದು. ಇತರರಿಗೆ ಆಹಾರ ನೀಡುವುದು. ಸ್ವಲ್ಪ ಪಡಿತರ ನೀಡುವ ಮೂಲಕ ಬಡವರ ಸೇವೆ ಮಾಡುವ ಈ ಅಭಿಯಾನದಲ್ಲಿ ಕೆಲವರು ಸೇರಲು ಬಯಸಿದರೆ, ನಾವು ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಪಡಿತರ ಈ ಸಹಾಯವನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು. ಇಲ್ಲಿ ನೀವು ನಿಮ್ಮ ಕುಟುಂಬ ಮತ್ತು ಮಕ್ಕಳ ಹೆಸರಿನಲ್ಲಿ ಆಹಾರ ಅಥವಾ ಹಣವನ್ನು ನೀಡಬಹುದಾಗಿದೆ. ಹಸಿವು ಮುಕ್ತ ವಿಶ್ವ ಸೇನೆ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದೇವೆ. ಈಗಾಗಲೇ ನಮ್ಮನ್ನು ಲಂಡನ್‌ಗೆ ಆಹ್ವಾನಿಸಲಾಗಿದ್ದು, ಮುಂದಿನ ವರ್ಷ ನಾವು ಅಲ್ಲಿಗೆ ತೆರಳಲಿದ್ದೇವೆ. ಅಲ್ಲಿ ಅನೇಕ ದೇಶಗಳ ಪ್ರತಿನಿಧಿಗಳು ನಮ್ಮ ಬ್ಯಾನರ್ ಅಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಅಲ್ಲಿ ನಾವು ಹಸಿವಿನಿಂದ ಜಗತ್ತನ್ನು ಮುಕ್ತಗೊಳಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತೇವೆ ಎಂದು ತಮ್ಮ ಸೇವೆಯ ಕುರಿತು ವಿವರಿಸಿದರು.

Source : https://m.dailyhunt.in/news/india/kannada/etvbhar9348944527258-epaper-etvbhkn/hasidavarige+annadaata+nitya+saaviraaru+janara+hotte+tumbisuva+ee+fud+myaan+bagge+gotta+-newsid-n555089358?listname=newspaperLanding&topic=homenews&index=1&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *