ಕೇವಲ ಸೊಳ್ಳೆ ಬತ್ತಿಯಿಂದಲೇ ನಿಮ್ಮ ಮನೆ ವಿದ್ಯುತ್ ಬಿಲ್ ಎಷ್ಟು ಹೆಚ್ಚಾಗುತ್ತದೆ ಗೊತ್ತಾ? ಯೂನಿಟ್ ಲೆಕ್ಕದಲ್ಲಿ ನೋಡಿ

Electric Mosquito Repellent electricity consumption:ಕೆಲವರು ರಾತ್ರಿ ಹೊತ್ತು ಮಾತ್ರ ಈ ಕಾಯಿಲ್ ಗಳನ್ನು  ಬಳಸಿದರೆ, ಇನ್ನು ಕೆಲವರು ದಿನದ 24 ಗಂಟೆಯೂ ಬಳಸುತ್ತಾರೆ. ಈ ಕಾಯಿಲ್ ತನ್ನ ಕೆಲಸ ಮಾಡಬೇಕಾದರೆ ವಿದ್ಯುತ್ ಬಳಸುತ್ತದೆ. 

Electric Mosquito Repellent electricity consumption : ಜನರು ಮಲಗುವಾಗ ಸೊಳ್ಳೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಮಾನ್ಯವಾಗಿ ಎಲೆಕ್ಟ್ರಿಕ್ ಸೊಳ್ಳೆ ಕಾಯಿಲ್ ಗಳನ್ನು ಬಳಸುತ್ತಾರೆ. ಈ ಸಾಧನಗಳಲ್ಲಿ ಬಳಸುವ ರಾಸಾಯನಿಕಗಳು ಸೊಳ್ಳೆಗಳನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಇದರಿಂದಾಗಿ ಸೊಳ್ಳೆಗಳ ಕಾಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಕೆಲವರು ರಾತ್ರಿ ಹೊತ್ತು ಮಾತ್ರ ಈ ಕಾಯಿಲ್ ಗಳನ್ನು  ಬಳಸಿದರೆ, ಇನ್ನು ಕೆಲವರು ದಿಂದ 24 ಗಂಟೆಯೂ ಬಳಸುತ್ತಾರೆ. ಈ ಕಾಯಿಲ್ ತನ್ನ ಕೆಲಸ ಮಾಡಬೇಕಾದರೆ ವಿದ್ಯುತ್ ಬಳಸುತ್ತದೆ. 

ಎಲೆಕ್ಟ್ರಿಕ್ ಸೊಳ್ಳೆ ನಿವಾರಕ ಸಾಧನ : 
ವಿಶೇಷವಾಗಿ ಬೇಸಿಗೆಯಲ್ಲಿ ಅಥವಾ ಮಳೆಗಾಲದಲ್ಲಿ  ಸೊಳ್ಳೆ ಕಾಟ ಹೆಚ್ಚುತ್ತದೆ. ಸಂಜೆಯಾಗುತ್ತಲೇ ಜೇನಿನಂತೆ ಈ ಸೊಳ್ಳೆಗಳು ಸುತ್ತುವರಿಯಲು ಆರಂಭಿಸುತ್ತದೆ. ಸೊಳ್ಳೆಗಳು ನೋಡಲು ಚಿಕ್ಕದಾಗಿದ್ದರೂ ಅದು ತರುವ ಕಾಯಿಲೆಗಳ ಕಾರಣದಿಂದ ಜನ ಭಯ ಬೀಳುತ್ತಾರೆ. ಹಾಗಾಗಿ ಸೊಳ್ಳೆ ನಿವಾರಕಗಳ ಮೊರೆ ಹೋಗುತ್ತಾರೆ. ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ಜನ ಹೆಚ್ಚಾಗಿ ಸೊಳ್ಳೆ ನಿವಾರಕ ಲಿಕ್ವಿಡ್ ಮತ್ತು ಯಂತ್ರಗಳನ್ನು ಬಳಸುತ್ತಾರೆ. ಆದರೂ ಈ ಮೆಷಿನ್ ಗಳ ಬಳಕೆ ತುಸು ಹೆಚ್ಚೇ ಆಗುತ್ತದೆ. 

ಎಷ್ಟು ವಿದ್ಯುತ್ ತಿನ್ನುತ್ತವೆ ಈ ಸೊಳ್ಳೆ ಮೆಷಿನ್ : 
ವಿದ್ಯುತ್ ಸೊಳ್ಳೆ ನಿವಾರಕ ಸಾಧನದ ವಿದ್ಯುತ್ ಬಳಕೆ ತುಂಬಾ ಕಡಿಮೆ. ಸಾಮಾನ್ಯವಾಗಿ ಈ ಸಾಧನಗಳು 5W ಅಥವಾ 7W ಆಗಿರುತ್ತವೆ. ಇದು ಎಲ್ಇಡಿ ನೈಟ್ ಲ್ಯಾಂಪ್ ಗೆ ಸಮನಾಗಿರುತ್ತದೆ. ಉದಾಹರಣೆಗೆ, ನೀವು ದಿನಕ್ಕೆ 8 ಗಂಟೆಗಳ ಕಾಲ 5W ಸೊಳ್ಳೆ ನಿವಾರಕ ಸಾಧನವನ್ನು ಬಳಸಿದರೆ, ಅದು ಕೇವಲ 40W ಶಕ್ತಿಯನ್ನು ಬಳಸುತ್ತದೆ.

ಒಂದು ದಿನದಲ್ಲಿ 8 ಗಂಟೆಗಳ ಬಳಕೆಯೊಂದಿಗೆ, ಸಾಧನವು 40W ಶಕ್ತಿಯನ್ನು ಬಳಸುತ್ತದೆ. ಒಂದು ತಿಂಗಳಿಗೆ ನೋಡುವುದಾದರೆ 30 ದಿನಗಳು x 8 ಗಂಟೆಗಳ = 240 ಗಂಟೆಗಳವರೆಗೆ ಈ ಬತ್ತಿ ಉರಿಯುತ್ತದೆ.  ಆದ್ದರಿಂದ, ಒಟ್ಟು ವಿದ್ಯುತ್ ಬಳಕೆಯು 240 ಗಂಟೆಗಳ x 5W = 1200W ಅಥವಾ 1.2kWh ಆಗಿರುತ್ತದೆ. ಒಂದು ಯೂನಿಟ್ ಗೆ 8 ರೂ. ಪಾವತಿಸುವುದಾದರೆ ಈ ಸೊಳ್ಳೆ ಕಾಯಿಲ್ ನಿಂದ ನೀವು ತಿಂಗಳಿಗೆ ಪಡೆಯುವ ಬಿಲ್ ನಲ್ಲಿ   9.6 ರೂಪಾಯಿ ಸೊಳ್ಳೆ ಬತ್ತಿಯದ್ದಾಗಿರುತ್ತದೆ. 

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/technology/how-much-electricity-does-mosquito-repellent-device-consume-in-a-month-160118

Leave a Reply

Your email address will not be published. Required fields are marked *