ಭಾರತದ 7 ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ನೀತಿ ಆಯೋಗದ ಮಾದರಿಯಲ್ಲೇ ರಾಜ್ಯಗಳ ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡುವ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು ರಾಜ್ಯಗಳ Gross State Domestic Product (GSDP) ಕೊಡುಗೆಯನ್ನು ಆಧರಿಸಿ ಮೊದಲ, ದ್ವಿತೀಯ ಮತ್ತಿತರ ಕ್ರಮಾಂಕದಲ್ಲಿ ‘ಶ್ರೀಮಂತ ರಾಜ್ಯ’ ಎಂದು ನಿರ್ಧರಿಸಲಿದೆ. ಈ ಬಾರಿ ಈ ಕೆಳಕಂಡ 7 ರಾಜ್ಯಗಳು ಮೊದಲ ಶ್ರೀಮಂತ ರಾಜ್ಯಗಳಾಗಿವೆ.

ದೇಶದ ವಾಣಿಜ್ಯ ರಾಜಧಾನಿ ಎಂದೇ ಕರೆಯಲಾಗಿರುವ ಮುಂಬೈ ಅನ್ನು ಹೊಂದಿರುವ ಮತ್ತು ಕೈಗಾರಿಕಾ, ವ್ಯಾಪಾರ, ವಹಿವಾಟು, ಕೃಷಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮಹಾರಾಷ್ಟ್ರ ದೇಶದ ಮೊದಲ ಶ್ರೀಮಂತ ರಾಜ್ಯವಾಗಿದೆ. ಮಹಾರಾಷ್ಟ್ರ ರಾಜ್ಯವು 31 ಟ್ರಿಲಿಯನ್ ರೂಪಾಯಿಗಿಂತಲೂ ಹೆಚ್ಚಿನ GSDP ಹೊಂದಿರುವ ಭಾರತದ ಅತಿ ಹೆಚ್ಚು ಗಳಿಕೆಯ ರಾಜ್ಯವಾಗಿದೆ. 

ಕೈಗಾರಿಕಾ ಕ್ಷೇತ್ರದಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ತಮಿಳುನಾಡು ರಾಜ್ಯವು ಹಲವು ಜನಪರ ಕಲ್ಯಾಣ ಮತ್ತು ಉಚಿತ ಯೋಜನೆಗಳನ್ನೂ ಜಾರಿಗೊಳಿಸಿಯೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. 20 ಟ್ರಿಲಿಯನ್ ರೂಪಾಯಿ GSDP ಕೊಡುಗೆ ನೀಡುವ ತಮಿಳುನಾಡು ಭಾರತದ ಅತಿ ಹೆಚ್ಚು ಗಳಿಕೆಯ ರಾಜ್ಯಗಳ ಪೈಕಿ ಎರಡನೆಯ ಸ್ಥಾನದಲ್ಲಿದೆ. 

ಲಗಾಯತ್ತಿನಿಂದಲೂ ವ್ಯಾಪಾರ-ವಹಿವಾಟು ವಿಷಯದಲ್ಲಿ ಮುಂಚೂಣಿಯಲ್ಲಿರುವ ಗುಜರಾತ್  ಭಾರತದ ಅತಿ ಹೆಚ್ಚು ಗಳಿಕೆಯ ರಾಜ್ಯಗಳ ಪೈಕಿ ಮೂರನೆಯ ಸ್ಥಾನದಲ್ಲಿದೆ. ಗುಜರಾತ್ ಕೂಡ ತಮಿಳುನಾಡಿನಂತೆ 20 ಟ್ರಿಲಿಯನ್ ರೂಪಾಯಿ GSDP ಕೊಡುಗೆ ನೀಡುತ್ತಿರುವ ರಾಜ್ಯವಾಗಿದೆ.

ದೇಶದಲ್ಲೇ ವಿಸ್ತೀರ್ಣದಲ್ಲಿ ಮತ್ತು ಜನಸಂಖ್ಯೆಯಲ್ಲಿ ಅತ್ಯಂತ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶ ಕೃಷಿಪ್ರಧಾನ ರಾಜ್ಯವಾಗಿದೆ. 19.7 ಟ್ರಿಲಿಯನ್ ರೂಪಾಯಿ GSDP ಕೊಡುಗೆ ನೀಡುವ ಉತ್ತರ ಪ್ರದೇಶವು ಭಾರತದ ಅತಿ ಹೆಚ್ಚು ಗಳಿಕೆಯ ರಾಜ್ಯಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ.

ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ನಗರವನ್ನು ಹೊಂದಿರುವ ಕರ್ನಾಟಕವು ಕೃಷಿ, ಕೈಗಾರಿಕೆ ಮತ್ತಿತರ ಕ್ಷೇತ್ರಗಳಲ್ಲೂ ಗಣನೀಯ ಸಾಧನೆ ಮಾಡಿದೆ. 19.6 ಟ್ರಿಲಿಯನ್ ರೂಪಾಯಿ GSDP ಕೊಡುಗೆ ನೀಡುವ ಮೂಲಕ  ಭಾರತದ ಅತಿ ಹೆಚ್ಚು ಗಳಿಕೆಯ ರಾಜ್ಯಗಳ ಪೈಕಿ ಐದನೇ ಸ್ಥಾನದಲ್ಲಿದೆ.

ದೇಶದಲ್ಲಿ ತನ್ನದೆಯಾದ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಪಶ್ಚಿಮ ಬಂಗಾಳ ರಾಜ್ಯವು 13 ಟ್ರಿಲಿಯನ್ ರೂಪಾಯಿ GSDP ಕೊಡುಗೆ ನೀಡುವ ಮೂಲಕ  ಭಾರತದ ಅತಿ ಹೆಚ್ಚು ಗಳಿಕೆಯ ರಾಜ್ಯಗಳ ಪೈಕಿ ಆರನೇ ಸ್ಥಾನದಲ್ಲಿದೆ.

ಹೈದರಾಬಾದ್ ಮಹಾನಗರವನ್ನು ಒಳಗೊಂಡಿದ್ದ ತೆಲಾಂಗಣ ಬೇರೆಯಾದ ಬಳಿಕವೂ ಆಂಧ್ರ ಪ್ರದೇಶ ಅಭಿವೃದ್ಧಿಯಲ್ಲಿ ಗಮನಾರ್ಹವಾದ ಸಾಧನೆಯನ್ನೇ ಮಾಡಿದೆ. 11.3 ಟ್ರಿಲಿಯನ್ ರೂಪಾಯಿ GSDP ಕೊಡುಗೆ ನೀಡುವ ಮೂಲಕ ಭಾರತದ ಅತಿ ಹೆಚ್ಚು ಗಳಿಕೆಯ ರಾಜ್ಯಗಳ ಪೈಕಿ ಏಳನೇ ಸ್ಥಾನದಲ್ಲಿದೆ.

Source : https://zeenews.india.com/kannada/photo-gallery/pmeac-report-reveals-financial-status-of-various-states-7-richest-states-of-country-258274/andhra-pradesh-258275

Leave a Reply

Your email address will not be published. Required fields are marked *