ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಬ್ರೇಕ್ ಮಾಡಲು ಅಸಾಧ್ಯವಾದ ಟಾಪ್ 10 ಅಂತಾರಾಷ್ಟ್ರೀಯ ದಾಖಲೆಗಳು ಯಾವುವು ಗೊತ್ತಾ?

Cricket Records That Are Unbreakable: ಹಲವು ಶತಮಾನಗಳಿಂದ ಆಡಲಾಗುತ್ತಿರುವ ಕ್ರಿಕೆಟ್ ಲೋಕದಲ್ಲಿ ನಂಬಲಸಾಧ್ಯವಾದ ಅದೆಷ್ಟೋ ರೆಕಾರ್ಡ್’ಗಳಿವೆ. ಅಷ್ಟೇ ಏಕೆ ಬ್ರೇಕ್ ಮಾಡಲು ಇದುವರೆಗೆ ಅಸಾಧ್ಯವಾದ ದಾಖಲೆಗಳೂ ಇವೆ.

Cricket Records That Are Unbreakable: ನಿಮಗೆಲ್ಲ ತಿಳಿದಿರುವಂತೆ ಕ್ರಿಕೆಟ್ ಒಂದು ಐತಿಹಾಸಿಕ ಆಟ. ಈ ಆಟದಲ್ಲಿ ಕ್ರಿಕೆಟಿಗರು ಅದೆಷ್ಟೋ ದಾಖಲೆಗಳನ್ನು ಸೃಷ್ಟಿಸುತ್ತಾರೆ, ಜೊತೆಗೆ ಬ್ರೇಕ್ ಕೂಡ ಮಾಡುತ್ತಾರೆ. ಹಲವು ಶತಮಾನಗಳಿಂದ ಆಡಲಾಗುತ್ತಿರುವ ಕ್ರಿಕೆಟ್ ಲೋಕದಲ್ಲಿ ನಂಬಲಸಾಧ್ಯವಾದ ಅದೆಷ್ಟೋ ರೆಕಾರ್ಡ್’ಗಳಿವೆ. ಅಷ್ಟೇ ಏಕೆ ಬ್ರೇಕ್ ಮಾಡಲು ಇದುವರೆಗೆ ಅಸಾಧ್ಯವಾದ ದಾಖಲೆಗಳೂ ಇವೆ.

ನಾವಿಂದು ಈ ವರದಿಯಲ್ಲಿ ಕ್ರಿಕೆಟ್ ಇತಿಹಾಸದ ಟಾಪ್ 10 ಮುರಿಯಲಾಗದ ದಾಖಲೆಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.

ಡಾನ್ ಬ್ರಾಡ್ಮನ್:

ಡಾನ್ ಬ್ರಾಡ್ಮನ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌’ಮನ್. ಇವರು ಕ್ರಿಕೆಟ್ ಇತಿಹಾಸದಲ್ಲಿ ಮುರಿಯಲಾಗದ ದಾಖಲೆಯೊಂದನ್ನು ಹೊಂದಿದ್ದಾರೆ. ಟೆಸ್ಟ್ ಬ್ಯಾಟಿಂಗ್ ಸರಾಸರಿ 99.94 ಇದಾಗಿದ್ದು, ಈ ಪ್ರಭಾವ ಶಾಲಿ ದಾಖಲೆಯನ್ನು ಇದುವರೆಗೆ ಬ್ರೇಕ್ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ.

ಸಚಿನ್ ತೆಂಡೂಲ್ಕರ್:

ಸಾರ್ವಕಾಲಿಕ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್‌’ಮನ್‌’ಗಳಲ್ಲಿ ಸಚಿನ್ ಕೂಡ ಒಬ್ಬರು. ವಿಶ್ವದ ಅತ್ಯುತ್ತಮ ಬೌಲರ್‌’ಗಳ ವಿರುದ್ಧವೂ ಅವರು ಪಿಚ್‌’ನಲ್ಲಿ ದೀರ್ಘಕಾಲ ಉಳಿಯುವ ಸಾಮರ್ಥ್ಯ ಹೊಂದಿದ್ದ ಕ್ರಿಕೆಟ್ ದೇವರು ಸಚಿನ್, 34,357 ರನ್ ಮತ್ತು 100 ಶತಕಗಳೊಂದಿಗೆ ಕ್ರಿಕೆಟ್ ಇತಿಹಾಸದಲ್ಲಿ ಮುರಿಯಲಾಗದ ದಾಖಲೆಯನ್ನು ಬರೆದಿದ್ದಾರೆ.

ಬ್ರಿಯಾನ್ ಲಾರಾ:

ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿರುವ ಟ್ರಿನಿಡಾಡಿಯನ್ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗ ಬ್ರಿಯಾನ್ ಲಾರಾ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌’ನಲ್ಲಿ 400 ರನ್ ಗಳಿಸಿದ ಆಕರ್ಷಕ ದಾಖಲೆ ಹೊಂದಿದ್ದಾರೆ,

ಜಿಮ್ ಲೇಕರ್:

ಜಿಮ್ ಲೇಕರ್ ಒಬ್ಬ ಪ್ರಸಿದ್ಧ ಇಂಗ್ಲಿಷ್ ವೃತ್ತಿಪರ ಕ್ರಿಕೆಟಿಗ. 1956 ರಲ್ಲಿ, ಮ್ಯಾಂಚೆಸ್ಟರ್‌’ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ, ಎರಡೂ ಇನ್ನಿಂಗ್ಸ್‌ಗಳಲ್ಲಿ 19 ವಿಕೆಟ್‌’ಗಳನ್ನು ಪಡೆದು ನಂಬಲಾಗದ ದಾಖಲೆಯನ್ನು ಮಾಡಿದ್ದಾರೆ.

ಜಾಕ್ವೆಸ್ ಕಾಲಿಸ್:

ಜಾಕ್ವೆಸ್ ಕಾಲಿಸ್ ಅವರು ದಕ್ಷಿಣ ಆಫ್ರಿಕಾದ ಅತ್ಯಂತ ಪ್ರಸಿದ್ಧ ಕ್ರಿಕೆಟ್ ತರಬೇತುದಾರ ಮತ್ತು ಮಾಜಿ ಕ್ರಿಕೆಟಿಗ. ಇವರು ಕ್ರಿಕೆಟ್ ಇತಿಹಾಸದಲ್ಲಿ 25432 ರನ್‌’ಗಳ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ.

ಬಹುತೇಕ ಮುರಿಯಲಾಗದ ಇತರ ಅಂತಾರಾಷ್ಟ್ರೀಯ ಕ್ರಿಕೆಟ್ ದಾಖಲೆಗಳು:

  • ಭಾರತ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ (12 ಎಸೆತಗಳಲ್ಲಿ 50 ರನ್)
  • ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ (1357 ವಿಕೆಟ್)
  • ಶ್ರೀಲಂಕಾದ ಗ್ರೇಟೆಸ್ಟ್ ಬೌಲರ್ ಲಸಿತ್ ಮಾಲಿಂಗ (4 ಎಸೆತಗಳಲ್ಲಿ ಎರಡು ಬಾರಿ 4 ವಿಕೆಟ್)
  • ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ (ಕೇವಲ 31 ಎಸೆತಗಳಲ್ಲಿ ವೇಗದ ಶತಕ)
  • ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (ಇನಿಂಗ್ಸ್‌ನಲ್ಲಿ 264 ರನ್)

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshkನಮ್ಮ Facebook page: https://www.facebook.com/samagrasudii

Source: https://zeenews.india.com/kannada/sports/top-10-international-cricket-records-that-are-nearly-unbreakable-157414

Leave a Reply

Your email address will not be published. Required fields are marked *