Viral: ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದ ಮಕ್ಕಳು; ಮುಂದೆ ಆಗಿದ್ದೇನು ಗೊತ್ತಾ?

ಪಾಟ್ನಾ: ಇತ್ತೀಚೆಗಷ್ಟೇ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಐವರು ಮಕ್ಕಳು ಯೂಟ್ಯೂಬ್‌ ನೋಡಿ ಬಾಂಬ್‌ ತಯಾರಿಸಲು ಮುಂದಾಗಿದ್ದಾರೆ. ಬೆಂಕಿಕಡ್ಡಿಗಳಿಂದ ಹಿಡಿದು ಗನ್‌ಪೌಡರ್‌ನವರೆಗೆ ಎಲ್ಲವನ್ನೂ ಸಂಗ್ರಹಿಸಿ ಟಾರ್ಚ್‌ಲೈಟ್‌ಗೆ ಸುರಿದು ಬಾಂಬ್​​​ ಒಂದನ್ನು ತಯಾರಿಸಿದ್ದಾರೆ. ಏಕಾಏಕಿ ಅದು ಸ್ಫೋಟಗೊಂಡಿದ್ದು, ಪರಿಣಾಮ ಒಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಿಹಾರದ ಮುಜಾಫರ್‌ಪುರದ ಗೈಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನಿ ಬಂಗ್ರಾ ಕಲ್ಯಾಣ್ ಗ್ರಾಮದಲ್ಲಿ ಐವರು ಮಕ್ಕಳು ಯೂಟ್ಯೂಬ್ ವಿಡಿಯೋ ನೋಡಿ ಬಾಂಬ್ ತಯಾರಿಸಲು ಬಯಸಿದ್ದರು. ಮಕ್ಕಳು ಬೆಂಕಿಕಡ್ಡಿಗಳು ಮತ್ತು ಗನ್‌ಪೌಡರ್‌ಗಳನ್ನು ಸಂಗ್ರಹಿಸಿ ಟಾರ್ಚ್‌ಲೈಟ್‌ಗೆ ಸುರಿದಿದ್ದರು. ನಂತರ, ಅವರು ಅದರಲ್ಲಿ ಬ್ಯಾಟರಿಯನ್ನು ಹಾಕಿದ್ದಾರೆ. ಏಕಾಏಕಿ ಅದು ಸ್ಫೋಟಗೊಂಡಿದೆ. ಈ ಅವಘಡದಲ್ಲಿ ಒಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯೂಟ್ಯೂಬ್ ವಿಡಿಯೋ ನೋಡಿ ಮಕ್ಕಳು ತಯಾರಿಸಲು ಪ್ರಯತ್ನಿಸಿದ್ದು ಈ ವೇಳೆ ದೊಡ್ಡ ಸ್ಫೋಟ ಸಂಭವಿಸಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪೋಷಕರು ತಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

Source : https://tv9kannada.com/trending/5-children-injured-while-trying-to-make-bomb-watching-youtube-tutorial-aks-880204.html

Views: 0

Leave a Reply

Your email address will not be published. Required fields are marked *