
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇದೀಗ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಈ ಮೊದಲು ಇಬ್ಬರು ಸೇರಿ ಮಾಡುತ್ತಿದ್ದ ಬೇರೆ ಬೇರೆ ಸಂಸ್ಥೆ ಈಗ ಒಂದಾಗಿದೆ. ಎರಡು ಸಂಸ್ಥೆಯನ್ನು ಒಟ್ಟುಗೂಡಿಸಿ, ‘SEVVA’ ಮಾಡಲು ಹೊರಡಿದ್ದಾರೆ. ವಿರುಷ್ಕಾ ದಂಪತಿ ಈಗ ಹೊಸದಾಗಿ NGO ಶುರು ಮಾಡಿದ್ದಾರೆ.
ಈ ಮೊದಲು ಅನುಷ್ಕಾ ಶರ್ಮಾ ಫೌಂಡೇಶನ್ ಹಾಗೂ ವಿರಾಟ್ ಕೊಹ್ಲಿ ಫೌಂಡೇಶನ್ ಅಂತ ಎರಡು ಇತ್ತು. ಆದ್ರೆ ಈಗ ಅದೆರಡು ಒಂದಾಗಿದೆ. ಈ ಸಂಸ್ಥೆಗೆ SEVVA ಎಂದು ಹೆಸರಿಸಲಾಗಿದೆ. ಅದರ ಹೆಸರು ಕೇಳೋಕೇನೆ ಚೆಂದ ಎನಿಸುತ್ತದೆ. Se ಮೇನ್ಸ್ ಸೆಲ್ಫ್ ಅನ್ನೋ ಅರ್ಥ ಬರುತ್ತೆ. ಇನ್ನು VVA ಅಂದರೆ ವಿರಾಟ್, ವಮಿಕಾ, ಅನುಷ್ಕಾ ಅಂತ ಹೆಸರಿಟ್ಟಿದ್ದಾರೆ.
ಇನ್ನು ಈ ಮೊದಲಿನಿಂದ ಬೇರೆ ಬೇರೆಯಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದ ದಂಪತಿ ಈಗ ಒಗ್ಗಟ್ಟಾಗಿ ಸೇವೆ ಶುರು ಮಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಪೌಷ್ಟಿಕಾಂಶದಿಂದ ಬಳಲುತ್ತಿರುವ ಶಿಶುಗಳಿಗೆ ಪೌಷ್ಟಿಕಾಂಶದ ಆಹಾರ ವ್ಯವಸ್ಥೆ, ಅಥ್ಲೆಟಿಕ್ಸ್ ಗಳಿಗೆ ಸಹಾಯ, ಪ್ರಾಣಿ ದಯಾ ಸಂಘಗಳ ಮೂಲಕ ಪ್ರಾಣಿಗಳಿಗೆ ಸಹಾಯ ಹೀಗೆ ಇಬ್ಬರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರು. ಈಗ ಸೇವಾ ಸಂಸ್ಥೆ ತೆರೆದು ಒಂದೇ ಸಂಸ್ಥೆಯಡಿ ಸಹಾಯ ಮಾಡಲಿದ್ದಾರೆ.
The post ಹೊಸ NGO ಸ್ಥಾಪಿಸಿದ ವಿರುಷ್ಕಾ ದಂಪತಿ : ಏನೆಲ್ಲಾ ಕೆಲಸಗಳು ನಡೆಯುತ್ತೆ ಗೊತ್ತಾ..? first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/JdkFwvQ
via IFTTT
Views: 0