IPL 2023: RCB ತಂಡದಲ್ಲಿರುವ ಮುಂಬೈ ಇಂಡಿಯನ್ಸ್​ನ 3 ಮಾಜಿ ಆಟಗಾರರು ಯಾರು ಗೊತ್ತಾ?

IPL 2023: ಐಪಿಎಲ್​ನ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಗುಜರಾತ್ ಟೈಟಾನ್ಸ್, ಸಿಎಸ್​ಕೆ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ ಪ್ರವೇಶಿಸಿದೆ. ಇದೀಗ 4ನೇ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ನಡುವೆ ಪೈಪೋಟಿ ಏರ್ಪಟ್ಟಿದೆ.ಅಂದರೆ ಲೀಗ್​ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ಮುಖಾಮುಖಿಯಾದರೆ, 70ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ ಕಣಕ್ಕಿಳಿಯಲಿದೆ. ಈ ಪಂದ್ಯಗಳಲ್ಲಿ ಆರ್​ಸಿಬಿ ಹಾಗೂ ಮುಂಬೈ ಗೆದ್ದರೆ 16 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು. ಆದರೆ ಇಲ್ಲಿ ನೆಟ್ ರನ್​ ರೇಟ್ ಕೂಡ ಗಣನೆಗೆ ಬರಲಿದೆ. ಹೀಗಾಗಿ ಎರಡೂ ತಂಡಗಳು ಭರ್ಜರಿ ಜಯವನ್ನು ಎದುರು ನೋಡಲಿದೆ.ಇತ್ತ ರೋಚಕ ಘಟ್ಟದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ತಂಡಗಳು ಕಣದಲ್ಲಿರುವ ಕುತೂಹಲ ಒಂದೆಡೆಯಾದರೆ, ಮುಂಬೈ ಇಂಡಿಯನ್ಸ್ ಪರ ಆಡಿದ ಮೂವರು ಮಾಜಿ ಆಟಗಾರರು ಆರ್​ಸಿಬಿ ಪರ ಆಡುತ್ತಿದ್ದಾರೆ. ಅವರೆಂದರೆ...
1- ಗ್ಲೆನ್ ಮ್ಯಾಕ್ಸ್​ವೆಲ್: ಆರ್​ಸಿಬಿ ತಂಡದ ಸ್ಟಾರ್ ಆಟಗಾರನಾಗಿರುವ ಗ್ಲೆನ್ ಮ್ಯಾಕ್ಸ್​ವೆಲ್ 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಅಲ್ಲದೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 3 ಪಂದ್ಯಗಳಲ್ಲಿ ಕಣಕ್ಕಿಳಿದು ಒಟ್ಟು 36 ರನ್ ಕಲೆಹಾಕಿದ್ದರು.2- ದಿನೇಶ್ ಕಾರ್ತಿಕ್: ಆರ್​ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ 2012 ಹಾಗೂ 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಅಲ್ಲದೆ ಮುಂಬೈ ಪರ ಒಟ್ಟು 19 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಡಿಕೆ ಒಟ್ಟು 510 ರನ್​ಗಳಿಸಿ ಮಿಂಚಿದ್ದರು.3- ಕರ್ಣ್ ಶರ್ಮಾ: ಆರ್​ಸಿಬಿ ತಂಡದಲ್ಲಿರುವ ಲೆಗ್ ಸ್ಪಿನ್ನರ್ ಕರ್ಣ್ ಶರ್ಮಾ ಕೂಡ ಮಾಜಿ ಮುಂಬೈ ಇಂಡಿಯನ್ಸ್ ಆಟಗಾರ. 2017 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಒಟ್ಟು 9 ಪಂದ್ಯಗಳನ್ನಾಡಿರುವ ಕರ್ಣ್ ಶರ್ಮಾ 13 ವಿಕೆಟ್ ಕಬಳಿಸಿ ಮಿಂಚಿದ್ದರು.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಝಲ್‌ವುಡ್, ಹರ್ಷಲ್ ಪಟೇಲ್ , ಸಿದ್ದಾರ್ಥ್ ಕೌಲ್, ಕೇದಾರ್ ಜಾಧವ್, ಮೈಕೆಲ್ ಬ್ರೇಸ್ವೆಲ್, ವೈಶಾಕ್ ವಿಜಯಕುಮಾರ್, ಫಿನ್ ಅಲೆನ್, ಸೋನು ಯಾದವ್, ಮನೋಜ್ ಭಾಂಡಗೆ, ಶಹಬಾಝ್ ಅಹ್ಮದ್, ಆಕಾಶ್ ದೀಪ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ.ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ನಾಯಕ) , ಇಶಾನ್ ಕಿಶನ್ (ವಿಕೆಟ್ ಕೀಪರ್) , ಕ್ಯಾಮೆರೋನ್ ಗ್ರೀನ್ , ತಿಲಕ್ ವರ್ಮಾ , ಟಿಮ್ ಡೇವಿಡ್ , ನೆಹಾಲ್ ವಧೇರಾ , ಜೋಫ್ರಾ ಆರ್ಚರ್ , ಪಿಯೂಷ್ ಚಾವ್ಲಾ , ಕುಮಾರ್ ಕಾರ್ತಿಕೇಯ , ಆಕಾಶ್ ಮಧ್ವಲ್ , ಅರ್ಷದ್ ಖಾನ್, ಸೂರ್ಯಕುಮಾರ್ ಯಾದವ್ , ಟ್ರಿಸ್ಟಾನ್ ಸ್ಟಬ್ಸ್ , ಡೆವಾಲ್ಡ್ ಬ್ರೆವಿಸ್ , ವಿಷ್ಣು ವಿನೋದ್ , ರಮಣದೀಪ್ ಸಿಂಗ್ , ಅರ್ಜುನ್ ತೆಂಡೂಲ್ಕರ್ , ಶಮ್ಸ್ ಮುಲಾನಿ , ಕ್ರಿಸ್ ಜೋರ್ಡಾನ್ , ಜೇಸನ್ ಬೆಹ್ರೆಂಡಾರ್ಫ್ , ಸಂದೀಪ್ ವಾರಿಯರ್ , ಹೃತಿಕ್ ಶೋಕೀನ್ , ಡುವಾನ್ ಜಾನ್ಸೆನ್ , ರಾಘವ್ ಗೋಯಲ್ , ರಿಲೆ ಮೆರೆಡಿತ್

source https://tv9kannada.com/photo-gallery/cricket-photos/ipl-2023-former-mi-players-who-are-now-with-rcb-kannada-news-zp-574101.html

Leave a Reply

Your email address will not be published. Required fields are marked *