Indian Richest farmer : ಮನೆ ನಡೆಯುವ ಮಟ್ಟಿಗೆ ವೇತನ ಸಿಕ್ರೆ ಸಾಕು, ಆರಾಮಾಗಿ ಎಸಿ ರೂಮ್ ಕೆಳಗೆ ಕೂತು ಜೀವನ ಕಳೆಯುವ.. ಎನ್ನುವ ಜನರ ಮಧ್ಯ ಅತಿ ಹೆಚ್ಚು ಸಂಬಳ ಬರುತ್ತಿದ್ದ ಇಂಜಿನಿಯರಿಂಗ್ ವೃತ್ತಿ ಬಿಟ್ಟು ಕೃಷಿ ನಂಬಿದ ವ್ಯಕ್ತಿಯೊಬ್ಬ ಇಂದು ದೇಶದ ಶ್ರೀಮಂತ ರೈತರಾಗಿ ಮಾದರಿಯಾಗಿದ್ದಾರೆ. ಹೌದು.. ಈ ವಿಚಾರವನ್ನು ನೀವು ನಂಬಲೇಬೇಕು.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ…

Pramod Gautam : ಭಾರತದಲ್ಲಿ ಹೆಚ್ಚಿನ ಸಂಬಳದ ಉದ್ಯೋಗದ ವಿಷಯಕ್ಕೆ ಬಂದಾಗ, ಜನರು ಎಂಬಿಎ ಪದವೀಧರರು ಮತ್ತು ಎಂಜಿನಿಯರ್‌ಗಳತ್ತ ಕೈ ಮಾಡ್ತಾರೆ. ಅಲ್ಲದೆ, ಐಐಟಿ ಮತ್ತು ಐಐಎಂ ಪದವೀಧರರು ದೇಶದ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳಲ್ಲಿ ಒಬ್ಬರು. ಇದೀಗ ಇಂತಹ ದೊಡ್ಡ ಸಂಬಳವನ್ನು ಬಿಟ್ಟು ಪ್ರಮೋದ್ ಗೌತಮ್ ಎಂಬುವರು ಕೃಷಿ ನಂಬಿ ಇಂದು ಭಾರತದ ಶ್ರೀಮಂತ ರೈತ ಎನಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮೂಲದ ರೈತ ಪ್ರಮೋದ್ ಗೌತಮ್ ಅವರದ್ದು, ವಿಶಿಷ್ಟವಾದ ಯಶಸ್ಸಿನ ಕಥೆ. ಕೈತುಂಬ ಸಂಬಳ ಬರುತ್ತಿದ್ದ ಎಂಜಿನಿಯರ್ ಅನ್ನು ಭಾರತದ ಶ್ರೀಮಂತ ರೈತನನ್ನಾಗಿ ಪರಿವರ್ತಿಸಿದ ನೈಜ ಕಥೆ ಇದು.. ಹೌದು.. ದೊಡ್ಡ MNC ಯಲ್ಲಿ ಆಟೋಮೊಬೈಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರಮೋದ್, ಕೈ ತುಂಬಾ ಸಂಬಳ ಪಡೆಯುತ್ತಿದ್ದರು. ಆದರೆ ಅವರ ಒಲವು ಕೃಷಿ ಕಡೆ ಇತ್ತು ಅನಿಸುತ್ತದೆ, ಆ ಕೆಲಸವನ್ನು ಬಿಟ್ಟು ತಮ್ಮ 26 ಎಕರೆ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಲು ನಿರ್ಧರಿಸಿದರು.
ಯಶ್… ಮೊದಲೇ ಹೇಳಿದಂತೆ ಇವರದ್ದು ವಿಶಿಷ್ಟವಾದ ಕಥೆ… ಪ್ರಮೋದ್ ಸಾಂಪ್ರದಾಯಿಕ ಕೃಷಿಗೆ ಅಂಟಿಕೊಳ್ಳದೆ, ಹೊಸ ಮಾರ್ಗವನ್ನು ಅನುಸರಿಸಿ ತೋಟಗಾರಿಕೆಯನ್ನು ಅನ್ವೇಷಿಸಲು ನಿರ್ಧರಿಸಿದರು. ಈ ಪೈಕಿ ಅವರು ಹಸಿರು ಮನೆಯೊಳಗೆ (Agro Green House ) ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದರು.
ಮೊದಲಿಗೆ ಸಣ್ಣದಾಗಿ ಕೃಷಿಕಾಯಕ ಪ್ರಾರಂಭಿಸಿದ ಗೌತಮ್ ಆರಂಭದಲ್ಲಿ ಕಡಲೆಕಾಯಿ ಮತ್ತು ಅರಿಶಿನ ಬೆಳೆಯನ್ನು ಬೆಳೆದರು. ಆದರೆ ಅದು ಹೆಚ್ಚು ಲಾಭ ಕಾಣದ ಹಿನ್ನೆಲೆ ಬೆಂಡೆಕಾಯಿಯನ್ನೂ ಸಹ ಬೆಳೆಯಲು ಮುಂದಾದರು. ನಂತರ ಮಹಾರಾಷ್ಟ್ರದ ನಾಗ್ಪುರದಲ್ಲಿನ ಬೆಳೆಗಳ ಬೆಲೆ ಮತ್ತು ಪ್ರಾಮುಖ್ಯತೆಯನ್ನು ಅರಿತು, ಸ್ವಂತ ದಾಲ್ ಬ್ರ್ಯಾಂಡ್ ʼವಂದನಾ ಫುಡ್ಸ್ʼ ಅನ್ನು ಪ್ರಾರಂಭಿಸಿದರು.
ಇದರ ಮೂಲಕ ವಿವಿಧ ರೀತಿಯ ಬೇಳೆಕಾಳುಗಳು ಮತ್ತು ವಿವಿಧ ದಾನ್ಯಗಳನ್ನು ಬೆಳೆದು ಮಾರಾಟ ಮಾಡಲು ಮುಂದಾದರು. ಇದೀಗ ಇವರ ಬ್ರ್ಯಾಂಡ್‌ನ ಧಾನ್ಯಗಳು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ದೇಶಾದ್ಯಂತ ಮಾರಾಟಕ್ಕೆ ಲಭ್ಯವಿದೆ.
ಅವರ ಆದಾಯದ ವಿಚಾರಕ್ಕೆ ಬಂದ್ರೆ, ಪ್ರಮೋದ್ ಪ್ರತಿ ವರ್ಷ ಸರಿಸುಮಾರು 1 ಕೋಟಿ ಗಳಿಸುತ್ತಿದ್ದಾರೆ. ಅಲ್ಲದೆ, ತಿಂಗಳಿಗೆ 10 ರಿಂದ 12 ಲಕ್ಷ ರೂ. ಆದಾಯ ಹೊಂದಿದ್ದಾರೆ. ಈ ಮೂಲಕ ಇನ್ನೊಬ್ಬರ ಕಂಪನಿಯಲ್ಲಿ ಕೆಲಸ ಮಾಡುವ IIT ಮತ್ತು IIM ಪದವೀಧರರಿಗಿಂತ ಹೆಚ್ಚಿನ ಹೆಚ್ಚಿನ ಹಣ ಗಳಿಸುವ ಮೂಲಕ ದೇಶದಲ್ಲೇ ಶ್ರೀಮಂತ ರೈತರಾಗಿ ಮಾದರಿಯಾಗಿದ್ದಾರೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii
Source : https://zeenews.india.com/kannada/business/indian-richest-farmer-pramod-gautam-life-story-156878