ಅಂತರಾಷ್ಟ್ರೀಯ ಕ್ರಿಕೆಟ್’ನಿಂದ ನಿವೃತ್ತಿ ಪಡೆದಿದ್ರೂ ಲೆಜೆಂಡ್ಸ್ ಕ್ರಿಕೆಟ್ ಆಡಲು ಧೋನಿಗಿಲ್ಲ ಅನುಮತಿ! ಯಾಕೆ ಗೊತ್ತಾ?

MS Dhoni: ಧೋನಿಯ ನಾಯಕತ್ವದಲ್ಲಿ ಭಾರತವು 2007 ರಲ್ಲಿ ತಮ್ಮ ಮೊದಲ T20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಇಷ್ಟು ಯಶಸ್ವಿ ನಾಯಕ ಮತ್ತು ಆಟಗಾರನಾದರೂ ಧೋನಿ ಅವರಿಗೆ ಲೆಜೆಂಡ್ಸ್ ಲೀಗ್‌’ನಲ್ಲಿ ಕ್ರಿಕೆಟ್ ಆಡಲು ಏಕೆ ಅವಕಾಶ ನೀಡಲಿಲ್ಲ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

MS Dhoni: ಟೀಂ ಇಂಡಿಯಾದ ಮಾಜಿ ಅನುಭವಿ ಆಟಗಾರ ಮತ್ತು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರ ನಾಯಕತ್ವದಲ್ಲಿ ಭಾರತಕ್ಕೆ ಎರಡನೇ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವ ಅವಕಾಶವಿತ್ತು. ಅಷ್ಟೇ ಅಲ್ಲದೆ, ಮೂರು ಪ್ರಮುಖ ಐಸಿಸಿ ಪಂದ್ಯಾವಳಿಗಳಲ್ಲಿ ತನ್ನ ತಂಡವನ್ನು ಚಾಂಪಿಯನ್ ಮಾಡಿದ ವಿಶ್ವದ ಮೊದಲ ಮತ್ತು ಏಕೈಕ ನಾಯಕ ಧೋನಿ.

ಅವರ ನಾಯಕತ್ವದಲ್ಲಿ, ಭಾರತವು 2011 ರಲ್ಲಿ ODI ವಿಶ್ವಕಪ್ ಮತ್ತು 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದಲ್ಲದೆ, ಧೋನಿಯ ನಾಯಕತ್ವದಲ್ಲಿ ಭಾರತವು 2007 ರಲ್ಲಿ ತಮ್ಮ ಮೊದಲ T20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಇಷ್ಟು ಯಶಸ್ವಿ ನಾಯಕ ಮತ್ತು ಆಟಗಾರನಾದರೂ ಧೋನಿ ಅವರಿಗೆ ಲೆಜೆಂಡ್ಸ್ ಲೀಗ್‌’ನಲ್ಲಿ ಕ್ರಿಕೆಟ್ ಆಡಲು ಏಕೆ ಅವಕಾಶ ನೀಡಲಿಲ್ಲ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

BCCI ನಿಯಮಗಳ ಪ್ರಕಾರ, ಯಾವುದೇ ಆಟಗಾರನು BCCI ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವವರೆಗೆ  ವಿದೇಶಿ ಲೀಗ್ ಅಥವಾ ಫ್ರಾಂಚೈಸ್ ಲೀಗ್‌ನಲ್ಲಿ (ಐಪಿಎಲ್ ಹೊರತುಪಡಿಸಿ) ಆಡುವಂತಿಲ್ಲ. ವಿದೇಶಿ ಲೀಗ್ ಅಥವಾ ಫ್ರಾಂಚೈಸಿ ಲೀಗ್‌’ನಲ್ಲಿ ಆಡಲು, ಆಟಗಾರನು ಬಿಸಿಸಿಐನಿಂದ ಅನುಮತಿ ಪಡೆಯಬೇಕು. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌’ನಿಂದ ನಿವೃತ್ತಿಯಾಗಿದ್ದರೂ ಸಹ ಇನ್ನೂ ಕೂಡ ಐಪಿಎಲ್ ಆಡುತ್ತಿದ್ದಾರೆ. ಅಂದರೆ, ಐಪಿಎಲ್’ನಿಂದಲೂ ನಿವೃತ್ತಿಯಾದಲ್ಲಿ ಲೆಜೆಂಡ್ಸ್ ಲೀಗ್’ನಂತಹ ಪಂದ್ಯಾವಳಿಗಳಲ್ಲಿ ಭಾಗವಹಿಸಬಹುದು.

Source : https://zeenews.india.com/kannada/sports/cricket/why-ms-dhoni-is-not-allowed-to-play-legends-league-cricket-172935

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *