ಮೈಸೂರು: ವಿಧಾನಸಭಾ ಚುನಾವಣೆಯ ರಣಕಣ ರಂಗೇರಿದೆ. ಅದರಲ್ಲೂ ಈ ಬಾರಿ ಮೈಸೂರು ಭಾಗದಲ್ಲಿ ಗೆಲುವನ್ನು ಪಡೆಯುವುದಕ್ಕೆ ಮೂರು ಪಕ್ಷಗಳು ಹಪಹಪಿಸುತ್ತಿವೆ. ಅದಕ್ಕಾಗಿಯೇ ಭರ್ಜರಿ ಪ್ರಚಾರ ಕೂಡ ನಡೆಸುತ್ತಿದ್ದಾತೆ. ಇದೇ ರೀತಿ ಪ್ರಚಾರದ ವೇಳೆ ಪ್ರಿಯಾಂಕ ಗಾಂಧಿಯವರ ವಿರುದ್ಧ ದೂರು ದಾಖಲಾಗಿದೆ.
ಲಿಂಗಾಯತರನ್ನು ಬಿಜೆಪಿ ಅವಮಾನಿಸಿದೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಬಂಧಿಸಿದಂತೆ ಮೈಸೂರು ಬಿಜೆಪಿ ಗ್ರಾಮಾಂತರ ನಾಯಕರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಕೆ ಆರ್ ನಗರದ ಪ್ರಚಾರದ ವೇಳೆ ಈ ರೀತಿಯಾದಂತ ಹೇಳಿಕೆ ನೀಡಿದ್ದರು.
ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. 13ರಂದು ಫಲಿತಾಂಶ ಸಿಗಲಿದೆ. ಸದ್ಯ ರಾಜ್ಯಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.
The post ಪ್ರಿಯಾಂಕ ಗಾಂಧಿ ವಿರುದ್ಧ ಮೈಸೂರಲ್ಲಿ ದಾಖಲಾಯ್ತು ಕೇಸ್ : ಯಾವ ಕಾರಣಕ್ಕೆ ಗೊತ್ತಾ..? first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/RjBuacl
via IFTTT