ಡೋಲೋ-650 ಮಾತ್ರೆಗಳನ್ನು ಬಳಸಿಕೊಂಡು ಸುಲಭವಾಗಿ ಬಟ್ಟೆಗಳಲ್ಲಿನ ಕಲೆಯನ್ನು ತೆಗೆದು ಹಾಕಬಹುದಂತೆ. ಇದು ನಿಜಾನಾ ಅಂತ ನೀವು ಕೇಳಬಹುದು.

ಗೃಹಿಣಿಯರ ಒಂದೇ ಟೆನ್ಶನ್ ಅಂದ್ರೆ ಬಟ್ಟೆ ಒಗೆಯುವಾಗ ಕಲೆ ಹೋಗದೇ ಇರುವುದು. ಏನೇ ಹಾಕಿದ್ರೂ ಕೆಲವೊಂದು ಕಲೆಗಳು ಹಾಗೇ ಉಳಿದುಕೊಂಡು ಬಿಡುತ್ತೆ. ಡಿಟರ್ಜೆಂಟ್ ಪೌಡರ್ ಅಥವಾ ಡಿಟರ್ಜೆಂಟ್ ಲಿಕ್ವಿಡ್ ಹಾಗಕಿದ್ರೂ ಹೋಗಲ್ಲ.

ಕೆಲವೊಂದು ವೈರಲ್ ವಿಡಿಯೋಗಳಲ್ಲಿ ನೀವು ನೋಡಿರಬಹುದು. ಪೆಸ್ಟ್ ಹಾಕಿ ಉಜ್ಜಿದ್ರೆ ಕಲೆ ಹೋಗುತ್ತೆ. ಇಲ್ಲ ಅಡುಗೆ ಸೋಡ ಹಾಕಿ ಉಜ್ಜಿದ್ರೆ ಕಲೆ ಹೋಗುತ್ತೆ ಅಂತ ಹೇಳುವ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.

ಈ ಕಲೆ ಹೋಗಿಸುವಷ್ಟರಲ್ಲಿ ಗೃಹಿಣಿಯರು ಹೈರಾಣಿಗಿರುತ್ತಾರೆ. ಆದ್ರೆ ಇನ್ಮುಂದೆ ಆ ಟೆನ್ಶನ್ ಬೇಡ. ಮನೆಯಲ್ಲಿ ಡೋಲೋ 650 ಮಾತ್ರ ಇದ್ರೆ ಸಾಕು. ಕ್ಷಣ ಮಾತ್ರದಲ್ಲಿ ಎಂಥ ಕಲೆ ಕೂಡ ಕ್ಷಣಮಾತ್ರದಲ್ಲಿ ಮಂಗಮಾಯವಾಗುತ್ತೆ.
ಡೋಲೋ-650 ಮಾತ್ರೆಗಳನ್ನು ಬಳಸಿಕೊಂಡು ಸುಲಭವಾಗಿ ಬಟ್ಟೆಗಳಲ್ಲಿನ ಕಲೆಯನ್ನು ತೆಗೆದು ಹಾಕಬಹುದಂತೆ. ಇದು ನಿಜಾನಾ ಅಂತ ನೀವು ಕೇಳಬಹುದು. ಈ ರೀತಿ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಂದು ನಾಯರ್ (@nair_nandu08) ಎಂಬವರು ಈ ವಿಡಿಯೋವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಡೋಲೋ 650 ಮಾತ್ರೆಯನ್ನು ಬಳಸಿಕೊಂಡು ಬಿಳಿ ಬಟ್ಟೆಯಲ್ಲಿದ್ದ ಕಲೆಯನ್ನು ತೆಗೆದುಹಾಕಿದ್ದಾರೆ.
ಮಹಿಳೆಯೊಬ್ಬರು ಬಟ್ಟೆಗಳಲ್ಲಿನ ಕಲೆಗಳನ್ನು ಡೋಲೋ-650 ಮಾತ್ರೆಯನ್ನು ಬಳಸಿ ಹೇಗೆ ತೆಗೆದುಹಾಕಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಒಂದು ಕಪ್ ಕುದಿಯುತ್ತಿರುವ ನೀರಿಗೆ ಎರಡು ಡೋಲೋ 650 ಮಾತ್ರೆಗಳನ್ನು ಪುಡಿ ಪುಡಿ ಮಾಡಿ ಹಾಕಿದ್ದಾರೆ. ಅದೇ ನೀರಿಗೆ ಒಂದು ಸ್ಪೂನ್ ಅಡಿಗೆ ಸೋಡಾ, ಜೊತೆಗೆ ಡಿರ್ಟಂಜೆಟ್ ಪೌಡರ್ ಹಾಕಿ ಮಿಕ್ಸ್ ಮಾಡಬೇಕು.

ಇದಾದ ಬಳಿಕ ಆ ನೀರಿಗೆ ಕಲೆಯಾಗಿರೋ ಬಟ್ಟೆಯನ್ನು ಅದ್ದಿಡಬೇಕು. 3 ನಿಮಿಷಗಳ ಬಳಿಕ ಆ ಬಟ್ಟೆಯನ್ನು ಹೊರತೆಗೆದರೆ ಆ ಬಟ್ಟೆಯಲ್ಲಿ ಯಾವುದೇ ಕೆಲ ಇಲ್ಲದಿರುವದನ್ನು ಈ ವೈರಲ್ ವಿಡಿಯೋದಲ್ಲಿ ನೋಡಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1