ಚಿತ್ರದುರ್ಗ | ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳಿಂದ ವಿವಿಧ ಪುರ್ನವಸತಿ ಕೇಂದ್ರಗಳಿಗೆ ದೇಣಿಗೆ.

ಚಿತ್ರದುರ್ಗ : ನಗರದ ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ತಮ್ಮ ಮನೆಯಿಂದ ಶಕ್ತ್ಯಾನುಸಾರ ಅಕ್ಕಿಯನ್ನು ತಂದು ಸುಮಾರು ಒಂದುವರೆ(150kg) ಕಿಂಟಲ್ ನಷ್ಟು ಸಂಗ್ರಹಿಸಿ ನಗರದ ಕಬೀರಾನಂದ ವೃದ್ಧಾಶ್ರಮ, ತೀಕ್ಷ್ಣ ಅಂಧರ ವಸತಿ ಕೇಂದ್ರ ಮತ್ತು ಅಬಲಾಶ್ರಮಗಳಿಗೆ ದೇಣಿಗೆಯಾಗಿ ನೀಡಿದರು.

ಈ ಜನಸೇವೆಯ ನೇತೃತ್ವವನ್ನು ಶಾಲೆಯ ಅಧ್ಯಕ್ಷರಾದ ಭಾಸ್ಕರ್.ಎಸ್, ಕಾರ್ಯದರ್ಶಿಗಳಾದ ರಕ್ಷಿತ್.ಎಸ್.ಬಿ, ಪ್ರಾಚಾರ್ಯರಾದ ಸಂಪತ್ ಕುಮಾರ್ ಸಿ.ಡಿ, ರವರು ವಹಿಸಿದ್ದರು. ಇವರ ಜೊತೆ ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಹೆಡ್ ಕೋಆರ್ಡಿನೇಟರ್ ಬಸವರಾಜು.ಕೆ ಮತ್ತು ಶಿಕ್ಷಕ-ಶಿಕ್ಷಕಿಯರು, ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕೇತರ ವರ್ಗದವರು ಈ ದೇಣಿಗೆ ಕಾರ್ಯದಲ್ಲಿ ಸಹಾಯ ಹಸ್ತವನ್ನು ನೀಡಿದರು.

Views: 0

Leave a Reply

Your email address will not be published. Required fields are marked *