ರಿಯಾಯಿತಿ ಹೆಸರಿನಲ್ಲಿ ಮೋಸ ಹೋಗದಿರಿ, ಕಾರ್ ವಿಮೆ ಕೊಳ್ಳುವಾಗ ನೆನಪಿರಲಿ ಈ ವಿಷಯ.

  • ಕಾರ್ ವಿಮಾ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುತ್ತಿರುವ ಹಲವು ಪ್ರಕರಣಗಳು ಮುನ್ನಲೆಗೆ ಬರಲಾರಂಭಿಸಿವೆ.
  • ಇಂತಹ ವಂಚನೆಗಳಿಂದ ಬಚಾವ್ ಆಗಲು ವಿಮೆ ಕೊಳ್ಳುವಾಗ ಕೆಲವು ವಿಚಾರಗಳ ಬಗ್ಗೆ ಎಚ್ಚರಿಕೆವಹಿಸುವುದು ಅಗತ್ಯ.
  • ನೀವು ಕಾರ್ ವಿಮೆಯನ್ನು ಖರೀದಿಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ಈ ಪ್ರಮುಖ ವಿಚಾರಗಳ ಬಗ್ಗೆ ವಿಶೇಷ ಗಮನಹರಿಸಿ. ಅವುಗಳೆಂದರೆ…
  • Car Insurance Tips: ಪ್ರಸ್ತುತ ಬದಲಾದ ಜೀವನ ಶೈಲಿಯಲ್ಲಿ ಕಾರು ಕೊಳ್ಳುವವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಿದೆ. ಕಾರ್ ಖರೀದಿಸುವಾಗ ಭವಿಷ್ಯದ ದೃಷ್ಟಿಯಿಂದ ಕಾರ್ ವಿಮೆ ಕೊಳ್ಳುವುದು ಕೂಡ ಅವಶ್ಯಕ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಸ್ಕ್ಯಾಮರ್‌ಗಳು ರಿಯಾಯಿತಿಯಲ್ಲಿ ಅಗ್ಗದ ವಿಮಾ ಯೋಜನೆಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ನೀವು ಇಂತಹ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಕಾರ್ ವಿಮೆ ಕೊಳ್ಳುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ತುಂಬಾ ಅವಶ್ಯಕ. 
  • ಹೌದು, ಕಾರ್ ವಿಮಾ (Car Insurance)  ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುತ್ತಿರುವ ಹಲವು ಪ್ರಕರಣಗಳು ಮುನ್ನಲೆಗೆ ಬರಲಾರಂಭಿಸಿವೆ. ಇಂತಹ ವಂಚನೆಗಳಿಂದ ಬಚಾವ್ ಆಗಲು ವಿಮೆ ಕೊಳ್ಳುವಾಗ ಕೆಲವು ವಿಚಾರಗಳ ಬಗ್ಗೆ ಎಚ್ಚರಿಕೆವಹಿಸುವುದು ಅಗತ್ಯ. ನೀವು ಕಾರ್ ವಿಮೆಯನ್ನು ಖರೀದಿಸುತ್ತಿದ್ದರೆ (Buying Car Insurance) ಅಂತಹ ಸಂದರ್ಭದಲ್ಲಿ ಈ ಪ್ರಮುಖ ವಿಚಾರಗಳ ಬಗ್ಗೆ ವಿಶೇಷ ಗಮನಹರಿಸಿ. ಅವುಗಳೆಂದರೆ… 
  • ಕಾರ್ ವಿಮಾ ಪಾಲಿಸಿಯನ್ನು ಖರೀದಿಸುವಾಗ ನೆನಪಿಡಬೇಕಾದ ಅಂಶಗಳೆಂದರೆ… 
    * ನೀವು ವಿಮಾ ಪಾಲಿಸಿ (Insurance policy) ಖರೀದಿಸುವಾಗ ಅದರ ಪೇಪರ್‌ಗಳನ್ನು ಎಚ್ಚರಿಕೆಯಿಂದ ಓದಿ. ಆನ್‌ಲೈನ್‌ನಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ. 
  • *  ನೀವು ವಿಮೆಯನ್ನು ಪಡೆಯಲು ಹೊರಟಿರುವ ಕಂಪನಿಯ ಹೆಸರನ್ನು ಐ‌ಆರ್‌ಡಿ‌ಎಐ (IRDAI)  ಪೋರ್ಟಲ್‌ನಲ್ಲಿ ಪರಿಶೀಲಿಸುವುದನ್ನು ಮರೆಯಬೇಡಿ. 
  • *  ವಿಮಾ ಪಾಲಿಸಿಯಲ್ಲಿ UID ಸಂಖ್ಯೆಯನ್ನು ಪರೀಕ್ಷಿಸಲು ಮರೆಯದಿರಿ. ವಾಸ್ತವವಾಗಿ, ಯುಐಡಿ ಸಂಖ್ಯೆಯು ಪ್ರತಿ ಪಾಲಿಸಿಗೆ IRDAI ನಿಂದ ನೀಡುವ ಸಂಖ್ಯೆಯಾಗಿದ್ದು, ಈ ಸಂಖ್ಯೆ ಇಲ್ಲದಿದ್ದರೆ ಅದು ನಕಲಿ ಪಾಲಿಸಿಯಾಗಿರುತ್ತದೆ. 
  • * ಪ್ರತಿ ವಿಮಾ ಪಾಲಿಸಿಗೆ ಕ್ಯೂಆರ್ ಕೋಡ್ ಅಗತ್ಯ. ಈ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ನೀವು ಪಾಲಿಸಿಯ ವಿವರಗಳನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ ಇದು ನಿಮ್ಮ ಪಾಲಿಸಿ ಅಸಲಿಯೋ/ನಕಲಿಯೋ ಎಂಬುದನ್ನೂ ಕೊಡೋಯ ಸಾಬೀತುಪಡಿಸುತ್ತದೆ. 
  • ನೀವು ಕಾರ್ ವಿಮೆಯನ್ನು (Car Insurance)  ಖರೀದಿಸುವಾಗ ಆನ್‌ಲೈನ್ ಅಥವಾ ಚೆಕ್ ಮೂಲಕ ಪಾವತಿ ಮಾಡಿ. ಇದನ್ನು ಏಜೆಂಟ್ ಬದಲಿಗೆ ನೇರವಾಗಿ ಕಂಪನಿಯ ಹೆಸರಿಗೆ ಮಾಡುವುದು ಒಳ್ಳೆಯದು.
  • * ಕಂಪನಿಯ ಕಸ್ಟಮರ್ ಕೇರ್‌ನಿಂದ ಪಾಲಿಸಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಮರೆಯದಿರಿ.

Source : https://zeenews.india.com/kannada/business/never-be-fool-in-the-name-of-cheap-car-insurance-must-remember-this-things-while-buying-car-insurance-206480

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *