ಯಾವುದಾದರೊಂದು ವ್ಯಕ್ತಿಗೆ ಹಾವು ಕಚ್ಚಿದರೆ, ಹಾವು ಕಚ್ಚಿದ ವ್ಯಕ್ತಿ ಮತ್ತು ಸುತ್ತಮುತ್ತಲಿನ ಜನರು ತುಂಬಾ ಗಾಬರಿಗೊಳ್ಳುತ್ತಾರೆ ಮತ್ತು ಹಾವು ಕಚ್ಚಿದ ಬಳಿಕ ತರಾತುರಿಯಲ್ಲಿ ಕೆಲ ತಪ್ಪುಗಳನ್ನು ಮಾಡುತ್ತಾರೆ. ಹಾವು ಕಚ್ಚಿದ ನಂತರ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

- ಹಾವುಗಳು ಸಾಮಾನ್ಯವಾಗಿ ನಮ್ಮ ತೋಟಗಳಿಗೆ ಅಥವಾ ಮನೆಗಳಿಗೆ ಇಲಿಗಳನ್ನು ಹುಡುಕಿಕೊಂಡು ಬರುತ್ತವೆ,
- ಈ ಜೀವಿ ಯಾರಿಗಾದರೂ ಕಚ್ಚಿದರೆ ಅವರು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.
- ಇಂತಹ ಪರಿಸ್ಥಿತಿಯಲ್ಲಿ ನೀವು ತಕ್ಷಣ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
ಭಾರತದಲ್ಲಿ, ಹಾವು ಕಡಿತದಿಂದ ಸಾಕಷ್ಟು ಜನರು ಸಾವನ್ನಪ್ಪುತ್ತಾರೆ. ಭಾರತದಲ್ಲಿನ ತಾಪಮಾನವು ಈ ತೆವಳುವ ಜೀವಿಗಳಿಗೆ ಸಾಕಷ್ಟು ಅನುಕೂಲಕರವಾಗಿದೆ, ಆದ್ದರಿಂದ ವುಗಳಿಂದ ಹಾನಿಯೂ ಇಲ್ಲಿ ಹೆಚ್ಚು ಕಂಡುಬರುತ್ತದೆ. ಹಾವುಗಳು ವಿಶೇಷವಾಗಿ ಭತ್ತದ ಗದ್ದೆಗಳಲ್ಲಿ ಕಂಡುಬರುತ್ತವೆ, ಆದರೂ ಅವು ಇಲಿಗಳನ್ನು ತಿನ್ನುವ ಮೂಲಕ ಬಹಳಷ್ಟು ರೈತರ ಬೆಳೆಗಳನ್ನು ನಾಶದಿಂದ ಉಳಿಸುತ್ತವೆ, ಆದರೆ ಯಾವುದೇ ಮನುಷ್ಯ ಹಾವುಗಳನ್ನು ಎದುರಿಸಲು ಬಯಸುವುದಿಲ್ಲ. ಹಾವುಗಳು ಸಾಮಾನ್ಯವಾಗಿ ನಮ್ಮ ತೋಟಗಳಿಗೆ ಅಥವಾ ಮನೆಗಳಿಗೆ ಇಲಿಗಳನ್ನು ಹುಡುಕಿಕೊಂಡು ಬರುತ್ತವೆ, ಈ ಜೀವಿ ಯಾರಿಗಾದರೂ ಕಚ್ಚಿದರೆ ಅವರು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ತಕ್ಷಣ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
ಹಾವು ಕಚ್ಚಿದ ತಕ್ಷಣ ಈ ಕೆಲಸ ಮಾಡಿ
1. ಹಾವು ಕಚ್ಚಿದ ವ್ಯಕ್ತಿಯ ಕೈ ಅಥವಾ ಕಾಲುಗಳ ಮೇಲೆ ಕಟ್ಟಿರುವ ಬಳೆ, ಕಾಲ್ಗೆಜ್ಜೆ , ಬಾಸ್ಲೆಟ್ ಅಥವಾ ಕಾಲುಂಗುರವನ್ನು ತಕ್ಷಣವೇ ತೆಗೆದುಹಾಕಿ. ಸಾಮಾನ್ಯವಾಗಿ ಹಾವು ಕಡಿದ ಮೇಲೆ ಬಾವು ಬರುತ್ತದೆ, ಹೀಗಾಗಿ ನಂತರ ಈ ವಸ್ತುಗಳನ್ನು ತೆಗೆದುಹಾಕಲು ಕಷ್ಟವಾಗುತ್ತದೆ.
2. ಹಾವು ಕಚ್ಚಿದ ದೇಹದ ಭಾಗವನ್ನು ಹೃದಯದ ಕೆಳಗೆ ಇಡಲು ಪ್ರಯತ್ನಿಸಿ ಮತ್ತು ಅದನ್ನು ಜಾಸ್ತಿ ಅಲುಗಾಡಲು ಬಿಡಬೇಡಿ.
3. ಹಾವು ಕಚ್ಚಿದಾಗ ಗಾಬರಿಗೊಳ್ಳಬೇಡಿ, ಏಕೆಂದರೆ ಗಾಬರಿಯಿಂದ ರಕ್ತದೊತ್ತಡವು ವೇಗವಾಗಿ ಹೆಚ್ಚಾಗುತ್ತದೆ. ಮತ್ತು ವಿಷವು ತ್ವರಿತವಾಗಿ ಹರಡುತ್ತದೆ. ಸಾಧ್ಯವಾದಷ್ಟು ಶಾಂತವಾಗಿರಲು ಪ್ರಯತ್ನಿಸಿ.
4. ಹಾವು ಕಚ್ಚಿದ ಜಾಗವನ್ನು ಸಾಬೂನಿನಿಂದ ತೊಳೆದು ಚೆನ್ನಾಗಿ ಸ್ವಚ್ಛಗೊಳಿಸಿ, ಇದರಿಂದ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.
5. ಮನೆಯಲ್ಲಿಯೇ ಪ್ರಥಮ ಚಿಕಿತ್ಸೆ ಮಾಡಿದ ನಂತರ, ಪೀಡೆಗೊಳಗಾದ ವ್ಯಕ್ತಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ, ಸಾಧ್ಯವಾದರೆ, ಕಚ್ಚುವ ಹಾವನ್ನು ಮೊದಲೇ ಗುರುತಿಸಿ ಅಥವಾ ಅದರ ಚಿತ್ರವನ್ನು ತೆಗೆದುಕೊಳ್ಳಿ, ಇದು ವೈದ್ಯರಿಗೆ ಸರಿಯಾದ ಔಷಧವನ್ನು ನೀಡಲು ಸಹಾಯ ಮಾಡುತ್ತದೆ.
ಹಾವು ಕಚ್ಚಿದ ಬಳಿಕ ಈ ಕೆಲಸ ಮಾಡಬೇಡಿ
1. ಹಾವು ಕಚ್ಚಿದ ದೇಹದ ಭಾಗದಲ್ಲಿ ಐಸ್ ಮತ್ತು ಬಿಸಿನೀರಿನಂತಹ ಯಾವುದೇ ಬಿಸಿ ಅಥವಾ ತಣ್ಣನೆಯ ಪದಾರ್ಥಗಳನ್ನು ಬಳಸಬೇಡಿ..
2. ಹಾವು ಕಾಲಿಗೆ ಅಥವಾ ಕೈಗೆ ಕಚ್ಚಿದರೆ, ಮೇಲಿನ ಭಾಗವನ್ನು ಬಿಗಿಯಾಗಿ ಕಟ್ಟಬೇಡಿ. ಇದರಿಂದ ರಕ್ತಸಂಚಾರ ನಿಲ್ಲುವ ಸಾಧ್ಯತೆ ಇರುತ್ತದೆ
3. ಹಾವು ಕಚ್ಚಿದ ಭಾಗವನ್ನು ಛೇಡಿಬೇಡಿ.
4. ಪೀಡಿತ ವ್ಯಕ್ತಿಯನ್ನು ಜಾಸ್ತಿ ಓಡಾಡಲು ಬಿಡಬೇಡಿ, ಗಾಲಿಕುರ್ಚಿ ಅಥವಾ ಕಾರನ್ನು ಬಳಸಿ
5. ಹಾವು ಕಚ್ಚಿದ ವ್ಯಕ್ತಿಯನ್ನು ಮಲಗದಂತೆ ತಡೆಯಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. SamagraSuddi ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
Source: https://zeenews.india.com/kannada/health/do-not-do-these-mistakes-when-venomous-snake-bites-115101