ನಾವು ದಿನ ನಿತ್ಯ ಬಳಸುವ ಆಹಾರ ಪದಾರ್ಥಗಳು ಫ್ರೇಶ್ ಆಗಿರಲೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಹಾಗಾಗಿಯೇ, ಇವುಗಳ ತಾಜಾತನವನ್ನು ಕಾಪಾಡಿಕೊಳ್ಳಲು ಅವುಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಕೆಲವು ಆಹಾರ ಪದಾರ್ಥಗಳು ಫ್ರಿಡ್ಜ್‌ನಲ್ಲಿಟ್ಟರೆ ಹಾಳಾಗುತ್ತವೆ ಎಂದು ನಿಮಗೆ ತಿಳಿದಿದೆಯೇ?
![](https://samagrasuddi.co.in/wp-content/uploads/2023/09/image-136-300x169.png)
Things Never Keep In Fridge: ಸಾಧ್ಯವಾದಷ್ಟು ಕಾಲ ಹಣ್ಣುಗಳು, ತರಕಾರಿಗಳನ್ನು ತಾಜಾವಾಗಿಡಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಕೆಲವು ಹಣ್ಣು-ತರಕಾರಿಗಳು ಫ್ರಿಡ್ಜ್‌ನ ತಂಪಾದ ತಾಪಮಾನ ಮತ್ತು ತೇವಾಂಶಕ್ಕೆ ಹಾಳಾಗುತ್ತವೆ. ಹಾಗಾಗಿ, ಆ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಬಾರದು ಎಂದು ಹೇಳಲಾಗುತ್ತದೆ.
ಫ್ರಿಡ್ಜ್‌ನಲ್ಲಿಟ್ಟರೆ ಹಾಳಾಗುವಂತಹ ಕೆಲವು ಹಣ್ಣು, ತರಕಾರಿಗಳು ಯಾವುದು ಎಂದು ನೋಡುವುದಾದರೆ…
ಟೊಮ್ಯಾಟೋ:
ಟೊಮ್ಯಾಟೋವನ್ನು ಫ್ರಿಡ್ಜ್‌ನ ಒಳಗೆ ಇಡುವುದರಿಂದ ತ್ವರಿತವಾಗಿ ಹಾಳಾಗುತ್ತವೆ. ಟೊಮ್ಯಾಟೋವನ್ನು ಶೈತ್ಯೀಕರಣಗೊಳಿಸುವುದರ್ಫಿಂದ ಅವು ಪರಿಮಳ ಕಳೆದುಕೊಳ್ಳಬಹುದು. ಫ್ರಿಡ್ಜ್‌ನ ಒಳಗಿನ ತಂಪಾದ, ಆರ್ದ್ರ ವಾತಾವರಣವು ಟೊಮಾಟೊಗಳ ರುಚಿಯನ್ನು ಕೆಡಿಸುವುದರ ಜೊತೆಗೆ ಇದು ಆರೋಗ್ಯಕ್ಕೂ ಹಾನಿಕಾರಕವಾಗಿದೆ.
ಈರುಳ್ಳಿ:
ಈರುಳ್ಳಿಯನ್ನು ಯಾವಾಗಲೂ ಕೋಣೆಯ ಉಷ್ಣಾಂಶದಲ್ಲಿ ಶೇಖರಿಸಿಡಿದಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಏಕೆಂದರೆ, ಈರುಳ್ಳಿ ಹೆಚ್ಚಿನ ತೇವಾಂಶವನ್ನು ಹೊಂದಿರುತ್ತದೆ. ಇವುಗಳನ್ನು ಫ್ರಿಡ್ಜ್‌ನಲ್ಲಿ ಅಥವಾ ಗಾಳಿಯಾಡದ ಕಂಟೇನರ್‌ನಲ್ಲಿ ಸಂಗ್ರಹಿಸುವುದರಿಂದ ಇವು ಬೇಗನೆ ಕೊಳೆಯುತ್ತವೆ.
ಆಲೂಗಡ್ಡೆ:
ಆಲೂಗಡ್ಡೆಯನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದರಿಂದ ಇದು ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ. ಇದರಿಂದಾಗಿ ಆಲೂಗಡ್ಡೆ ರುಚಿ, ವಿನ್ಯಾಸ ಎರಡರ ಮೇಲೂ ಪರಿಣಾಮ ಬೀರಬಹುದು.
ಬೆಳ್ಳುಳ್ಳಿ:
ಈರುಳ್ಳಿಯಂತೆ ಬೆಳ್ಳುಳ್ಳಿಯೂ ಸಹ ಶುಷ್ಕ ಮತ್ತು ತಂಪಾದ ವಾತಾವರಣಕ್ಕೆ ಆದ್ಯತೆ ನೀಡುತ್ತದೆ. ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸುವುದರಿಂದ ಅದು ಬೇಗೆ ಮೊಳಕೆಯೊಡಿಯುತ್ತದೆ.
ಬ್ರೆಡ್:
ರೆಫ್ರಿಜರೇಟರ್ ಬ್ರೆಡ್ ಅನ್ನು ಅಚ್ಚೊತ್ತದಂತೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಫ್ರಿಡ್ಜ್‌ನ ಆರ್ದ್ರತೆಯು ಬ್ರೆಡ್‌ನಿಂದ ತೇವಾಂಶವನ್ನು ಹೊರತೆಗೆಯುತ್ತದೆ. ಮಾತ್ರವಲ್ಲದೆ, ಇದು ಮೃದುತ್ವವನ್ನು ಕೂಡ ಕಳೆದುಕೊಳ್ಳುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii
Source : https://zeenews.india.com/kannada/lifestyle/never-keep-these-five-foods-in-the-fridge-160131