ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನ. 06: ಅಪ್ಪರ್ ಭದ್ರಾ ಯೋಜನೆ ಇಟ್ಟುಕೊಂಡು ರಾಜಕಾರಣ ಮಾಡಬೇಡಿ ಎಂದು ಯಾದವ್ ರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ. ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದ ಅವರು ಅಪ್ಪರ್ ಭದ್ರಾ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಶೀಘ್ರವಾಗಿ ಹಣ ಬಿಡುಗಡೆ ಮಾಡಬೇಕು. ಈ
ಯೋಜನೆಯನ್ನು ಇಟ್ಟುಕೊಂಡು ರಾಜಕೀಯ ಮಾಡಬೇಡಿ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲಾ ಜೀವನಾಡಿಯಾದ ಅಪ್ಪರ್ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ರೂ
ನೀಡುವುದಾಗಿ 2023ನೇ ಬಜೆಟ್ ಅಲ್ಲಿ ಹೇಳಿತ್ತು ಆದರೆ ಈವರೆಗೂ ಒಂದು ಪೈಸೆಯನ್ನು ಸಹ ಬಿಡುಗಡೆ ಮಾಡಿಲ್ಲ. ಇದಲ್ಲದೆ ತಾಂತ್ರಿಕ
ಕಾರಣಗಳನ್ನು ಮುಂದೊಡ್ಡಿ ಹಣವನ್ನು ಕೊತ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ ಕೇಂದ್ರ ಸರ್ಕಾರ 2023ರಲ್ಲಿ 5300
ಕೋಟಿ ರೂ ನೀಡುವ ಭರವಸೆ ನೀಡಿದ್ದು ಆದರೆ ಈಗ 1860 ಕೋಟಿ ರೂಗಳನ್ನು ಕಡಿತ ಮಾಡಿ ಉಳಿದ ಹಣವನ್ನು ನಮ್ಮಲ್ಲಿ ಆರ್ಥಿಕ
ಸಂಪನ್ಮೂಲ ಇದ್ದಲ್ಲಿ ಮಾತ್ರ ಹಣ ನೀಡುವುದಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.ಇದಲ್ಲದೇ ಅಪ್ಪರ್ ಭದ್ರಾ ಯೋಜನೆಗೆ ಇದುವರೆಗೂ
ಖರ್ಚು ಮಾಡಿರುವ ಹಣದ ಮಾಹಿತಿ ನೀಡಿ ಎಂದು ಸಹ ಪತ್ರ ಬರೆದಿದೆ. ಆದರೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ರಾಷ್ಟ್ರೀಯ
ಯೋಜನೆ ಎಂದು ಘೋಷಣೆ ಮಾಡುವ ಮುಂಚೆಯೇ ಎಲ್ಲಾ ರೀತಿಯ ಮಾಹಿತಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ನೀಡಿತ್ತು
ಎಂದು ತಿಳಿಸಿದರು.
ಈಗ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಹಣ ನೀಡಬಾರದು ಎಂಬ ದುರುದ್ದೇಶದಿಂದ ಮತ್ತೊಮ್ಮೆ ತಕರಾರು ತೆಗೆದಿದೆ.. ಇದರಿಂದ
ರಾಜ್ಯ ಸರ್ಕಾರಕ್ಕೆ ಈ ಯೋಜನೆಯಲ್ಲಿ ಹಿನ್ನಡೆ ಉಂಟಾಗಿದೆ.ಚಿತ್ರದುರ್ಗ ಜಿಲ್ಲೆಯಲ್ಲಿನ ಚುನಾಯಿತ ಪ್ರತಿನಿಧಿಗಳು ಇದರ ಬಗ್ಗೆ ಗಮನ
ನೀಡುತ್ತಿಲ್ಲ.ಈ ಸಲವೂ ಸಹ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದೇ ಇದ್ದರೆ ಮತ್ತಷ್ಟು ಹಣ ಕಡಿತವಾಗಲಿದೆ.ಇದಕ್ಕೆ ಯಾರು
ಹೊಣೆ..?ಕೇಂದ್ರ ಸರ್ಕಾರ ದುರುದ್ದೇಶದಿಂದ ಈ ರೀತಿಯಾದ ತಾಂತ್ರಿಕ ಕಾರಣಗಳನ್ನು ಮುಂದೂಡುತ್ತಾ ಹಣ ನೀಡಿದಂತೆ ಮಾಡುತ್ತಿದೆ
ಎಂದು ದೂರಿದರು.
ಇತ್ತೀಚೆಗೆ ಪ್ರಾರಂಭವಾದ ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರಮಾಣದ ಅನುದಾನವನ್ನು ನೀಡಿ ಮಲತಾಯಿ
ಧೋರಣೆಯನ್ನು ಅನುಸರಿಸುತ್ತಿದೆ.ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಸ್ಥಗಿತಗೊಂಡಿದೆ.. ಕಾಮಗಾರಿ ಮಾಡುತ್ತಿದ್ದ
ಗುತ್ತಿಗೆದಾರರಿಗೂ ಸಹ ಹಣ ನೀಡಿಲ್ಲ ಎಂದು ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.ಈಗ 22 ಸಾವಿರ ಕೋಟಿ ರೂ ಇರುವ ಯೋಜನೆ ಇದೇ
ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ 30 ಸಾವಿರ ಕೋಟಿ ರೂಗೂ ಹೆಚ್ಚಾಗಿ ಯೋಜನೆ ನೆನೆಗುದಿಗೆ ಬೀಳಲಿದೆ. ಎಂದು
ಅಂತಕವನ್ನು ವ್ಯಕ್ತಪಡಿಸಿದರು.
ಅಪ್ಪರ್ ಭದ್ರ ಯೋಜನೆಗೆ ಕೇಂದ್ರ ಸರ್ಕಾರ ಪದೇ ಪದೇ ಮೋಸ ಮಾಡುತ್ತಿದೆ. ಚಿತ್ರದುರ್ಗ ಜಿಲ್ಲಾ ಮಂತ್ರಿಗಳು ಕೂಡ ಅಪ್ಪರ್ ಭದ್ರ
ಯೋಜನೆ ಬಗ್ಗೆ ಮಾತನಾಡದೆ ಅವಮಾನ ಮಾಡುತ್ತಿದ್ದಾರೆ. ಪ್ರಧಾನಿಗಳ ಬಳಿ ಮಾತನಾಡದೆ ದುರ್ಬಲ ಹಾಗೂ ಶಕ್ತಿಹೀನ
ರಾಜಕಾರಣದಿಂದ ಜಿಲ್ಲೆಗೆ ಸಹಕಾರಿ ಆಗುವುದಿಲ್ಲ. ಅಭಿವೃದ್ಧಿ ಇಟ್ಟುಕೊಂಡು ನೀರಾವರಿಗಾಗಿ ರಾಜಕಾರಣ ಮಾಡಬೇಕು. ಸಂಸದರು ಈ
ಬಗ್ಗೆ ಅಯೋಗವನ್ನು ತೆಗೆದುಕೊಂಡು ಹೋಗಬೇಕು. ಶಾಸಕರು ಕೂಡ ಸಂಬಂದ ಇಲ್ಲ ಎಂಬಂತೆ ಇರಬಾರದು ಜಿಲ್ಲೆಯ ಸಮಸ್ಯೆ ಎಂದು
ಪರಿಗಣಿಸಬೇಕು ಎಂದು ಯಾದವ ರೆಡ್ಡಿ ತಿಳಿಸಿ ಈಗಲಾದರು ಕೇಂದ್ರ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿ ಚಿತ್ರದುರ್ಗ ಜಿಲ್ಲೆಯ
ತುಂಬಾ ಅವಶ್ಯಕವಾಗಿರುವ ಅಪ್ಪರ್ ಭದ್ರಾ ಯೋಜನೆಯನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಗೋಷ್ಟಿಯಲ್ಲಿ ಹಿರಿಯ ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ, ಸಿಪಿಐನ ಸುರೇಶ್ ಬಾಬು ಬಾಗವಹಿಸಿದ್ದರು.