ಮಳೆಗಾಲದಲ್ಲಿ ಒಂಟಿ ಮರದ ಕೆಳಗೆ ನಿಲ್ಲದೆ ಸಿಡಿಲಿನಿಂದ ರಕ್ಷಿಸಿಕೊಳ್ಳಿ : ಡಾ. ಎಚ್. ಕೆ. ಎಸ್. ಸ್ವಾಮಿ.

ಚಿತ್ರದುರ್ಗ: ಮಳೆಗಾಲದಲ್ಲಿ ಹೆಚ್ಚು ಗುಡುಗು, ಸಿಡಿಲು ಸಂಭವಿಸುವ ಸಂದರ್ಭದಲ್ಲಿ, ರೈತರು, ಕೂಲಿ ಕಾರ್ಮಿಕರು, ಗುಡ್ಡಗಾಡಿನಲ್ಲಿ ವಾಸಿಸುವರು, ಹೆಚ್ಚು ಸಿಡಿಲು ಬಡಿದು ಸಾಯುತ್ತಿರುವುದು ಆತಂಕಕಾರಿಯಾಗಿದೆ. ಅವರನ್ನು ಈ ಪ್ರಕೃತಿ ವಿಕೋಪದಿಂದ ರಕ್ಷಿಸುವ ಮಾರ್ಗಗಳನ್ನ ಜನರಿಗೆ ತಲುಪಿಸಿ, ಜೀವ ರಕ್ಷಣೆ ಮಾಡಬೇಕು. ಮಳೆಗಾಲದಲ್ಲಿ ಜನರು ಎತ್ತರದ ಒಂಟಿ ಮರದ ಕೆಳಗೆ ನಿಲ್ಲದೆ, ಸುರಕ್ಷ ಸ್ಥಳಕ್ಕೆ ತೆರಳಿ ಸಿಡಿಲಿನಿಂದ ಜೀವ ರಕ್ಷಿಸಿಕೊಳ್ಳಿ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ವಿನಂತಿಸಿಕೊoಡಿದ್ದಾರೆ.
ಬಹಳಷ್ಟು ಜನರಿಗೆ ಮಳೆಗಾಲದಲ್ಲಿ ಸಿಡಿಲು ಬಡಿದು ಸಾಯುವ ದೃಶ್ಯ ಆತಂಕಕಾರಿಯಾಗಿದೆ. ಅವರನ್ನು ರಕ್ಷಿಸುವ ಕೆಲಸ ಪ್ರತಿಯೊಬ್ಬ ವೈಜ್ಞಾನಿಕ ತಿಳುವಳಿಕೆಯುಳ್ಳ ವ್ಯಕ್ತಿಯ ಕರ್ತವ್ಯವಾಗಿದೆ. ಸಿಡಿಲು ಬಡಿಯುವ ಬಗ್ಗೆ ಸಾಕಷ್ಟು ವೈಜ್ಞಾನಿಕ ಮಾರ್ಗಗಳನ್ನ ಕಂಡುಕೊAಡು, ಮನುಷ್ಯ ಅವುಗಳಿಂದ ಬಚಾವಾಗುವುದನ್ನ ಕಲಿತಿದ್ದಾನೆ, ಆದರೆ ಅದನ್ನ ರೈತರಿಗೆ, ಕೂಲಿಕಾರ್ಮಿಕರಿಗೆ, ಕುರಿ ಕಾಯುವವರಿಗೆ, ತಿಳಿಸುವವರಿಲ್ಲದೆ ಹೆಚ್ಚು ಸಾವುಗಳಾಗುತ್ತಿವೆ ಎಂದಿದ್ದಾರೆ.


ಎತ್ತರದ ಪ್ರದೇಶದಲ್ಲಿ ಮಳೆ ಬಂದಾಗ, ಗುಡುಗು ಸಿಡಿಲು ಇದ್ದಾಗ ಒಂಟಿ ಎತ್ತರದ ಮರದ ಕೆಳಗೆ ನಿಂತು, ಸಿಡಿಲು ಬಡಿಸಿಕೊಂಡು ಸಾಯುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಹಾಗಾಗಿ ಸಿಡಿಲು ಬರುತ್ತಿದ್ದರೆ, ಎತ್ತರದ ಪ್ರದೇಶದಲ್ಲಿ, ಒಂಟಿ ಮರದ ಕೆಳಗಡೆ ನಿಲ್ಲದೆ, ತಗ್ಗಿನ ಪ್ರದೇಶಕ್ಕೆ ಬಂದು, ಸಿಡಿಲಿಂದ ರಕ್ಷಣೆ ಪಡೆಯಬೇಕು. ಯಾವುದೇ ಕಬ್ಬಿಣದ, ನೀರಿನ ಸಂಪರ್ಕವಿಲ್ಲದ ಜಾಗದಲ್ಲಿ ಆಶ್ರಯ ಪಡೆಯಬೇಕು ಎಂದಿದ್ದಾರೆ.
ಕುರಿ ಮೇಯಿಸಲು ಅರಣ್ಯದ ಕಡೆ, ಗುಡ್ಡದ ಕಡೆ, ಹೋಗುವಂತಹ ರೈತರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಎತ್ತರದ ಮರದ ಕೆಳಗೆ, ಎತ್ತರದ ದಿಬ್ಬದ ಮೇಲೆ ನಿಲ್ಲದೆ, ತಗ್ಗಿನ ಪ್ರದೇಶಕ್ಕೆ ಬರಬೇಕು. ಸಣ್ಣ ಅಥವಾ ಚಿಕ್ಕಮರದ ಕೆಳಗೆ ಆಶ್ರಯ ಪಡೆಯಬಹುದು. ವಿದ್ಯುತ್ ಕಂಬ, ಟೆಲಿಫೋನ್ ಕಂಬದ ಕೆಳಗೆ ಆಶ್ರಯ ಪಡೆಯಬಾರದು. ಯಾವುದೇ ಆಶ್ರಯ ತಾಣವಿಲ್ಲದಿದ್ದರೆ, ತಗ್ಗಿನ ಪ್ರದೇಶದಲ್ಲಿ ಮಂಡಿ ಊರಿ ಕುಳಿತು, ತಲೆಯನ್ನು ಬಗ್ಗಿಸಿ, ಕಿವಿಗಳನ್ನು ಮುಚ್ಚಿಕೊಳ್ಳಬೇಕು. ಕುರಿಗಳ ಗುಂಪಿನಲ್ಲಿದ್ದರೆ, ಗುಂಪನ್ನ ಚದುರಿಸಿಕೊಳ್ಳಬೇಕು, ಹೆಚ್ಚು ಜನ ಇದ್ದರೆ ಗುಂಪನ್ನ ಕಡಿಮೆ ಮಾಡಲು ಪ್ರಯತ್ನಿಸಬೇಕು. ಗುಂಪಿನಿoದ ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.
ವಾಹನದಲ್ಲಿ ಚಲಿಸುತ್ತಿದ್ದರೆ ವಾಹನವನ್ನು ನಿಲ್ಲಿಸಿ, ಕಿಟಕಿಗಳನ್ನ ಮುಚ್ಚಿ ಒಳಗೆ ರಕ್ಷಣೆ ಪಡೆಯಬಹುದು, ಮರದ ಕೆಳಗೆ, ವಿದ್ಯುತ್ ಕಂಬದ ಕೆಳಗೆ, ವಾಹನವನ್ನು ನಿಲ್ಲಿಸಬಾರದು. ಮೊಬೈಲ್ ಟವರ್, ರೈಲು ಹಳಿಗಳಿಂದಲೂ ಸಹ ದೂರವಿರಬೇಕು. ಕೆರೆ ಮತ್ತು ನದಿಗಳು ನೀರಿನ ಮೂಲಗಳಿಂದ ದೂರವಿರುವುದು ಒಳ್ಳೆಯದು ಎಂದರು.


ಸಿಡಿಲು ಬಡಿದ ವ್ಯಕ್ತಿಗಳನ್ನ ರಕ್ಷಿಸುವುದು ಸಹ ಒಂದು ಒಳ್ಳೆಯ ಕೆಲಸ, ಅವರನ್ನ ತಕ್ಷಣ ಆಸ್ಪತ್ರೆಗೆ ಕರೆತರಬೇಕು ಇಲ್ಲ ಪ್ರಥಮ ಚಿಕಿತ್ಸೆ ನೀಡಿ, ಅವರು ಹೃದಯ ಬಡಿತ, ಉಸಿರಾಟವನ್ನು ಸರಿಪಡಿಸಬೇಕು. ಸಿಡಿಲು ಹೊಡೆದ ವ್ಯಕ್ತಿಗಳಿಗೆ ಸುಟ್ಟ ಗಾಯಗಳಾಗಿರುತ್ತದೆ, ಅಂತಹ ಗಾಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಆ ವ್ಯಕ್ತಿಯನ್ನು ತಕ್ಷಣ ಸ್ಥಳಾಂತರಿಸಿ, ಸೂಕ್ತ ರಕ್ಷಣಾ ಸ್ಥಳಕ್ಕೆ ಕರೆದೊಯ್ಯಬೇಕು. ಮತ್ತೆ ಮತ್ತೆ ಸಿಡಿಲು ಪಡೆಯುವ ಸಂಭವಗಳು ಹೆಚ್ಚಾಗಿರುವುದರಿಂದ, ಆ ಸ್ಥಳದಿಂದ ಆ ವ್ಯಕ್ತಿಯನ್ನು, ಅಪಾಯಕಾರಿ ಸ್ಥಳದಿಂದ ಸ್ಥಳಾಂತರ ಮಾಡಬೇಕು ಎಂದರು.


ನಗರಗಳಲ್ಲಿ ಇರುವವರು ವಿದ್ಯುತ್ ಸಂಪರ್ಕ ಇರುವಂತ ಯಾವುದೇ ಉಪಕರಣಗಳಾದ ಕಂಪ್ಯೂಟರ್, ಲ್ಯಾಪ್ ಟ್ಯಾಪ್, ವಿಡಿಯೋ ಗೇಮ್ಸ್, ಮೊಬೈಲ್ ಫೋನು, ವಾಷಿಂಗ್ ಮೆಷಿನ್, ಸ್ಟವ್, ವಿದ್ಯುತ್ ಸಂಪರ್ಕ ಉಪಕರಣಗಳನ್ನು ಕಡಿತಗೊಳಿಸಬೇಕು, ಬಳಸಬಾರದು ಮತ್ತು ಸಂಪರ್ಕ ಕಡಿತಗೊಳಿಸಬೇಕು. ಮಿಂಚುಬರುವ ಸಂದರ್ಭದಲ್ಲಿ ರಬ್ಬರ್ ಸೋಲ್ ಇರುವ ಚಪ್ಪಲಿಗಳು ಮತ್ತು ಕಾರಿನ ಚಕ್ರಗಳು ಸಹ ಸುರಕ್ಷಿತವಲ್ಲ. ಅವುಗಳಿಂದ ದೂರವಿರಬೇಕು. ಅರಣ್ಯ ಪ್ರದೇಶದಲ್ಲಿ ಇದ್ದರೆ, ಗಿಡ ಗಂಟೆಗಳಿಗೂ ಸಹ ಕಾಡಿನ ಕಿಚ್ಚು ಹತ್ತುವ ಸಂಭವವಿರುತ್ತದೆ, ಆಟದ ಮೈದಾನ, ಉದ್ಯಾನವನ, ಈಜುಕೊಳ, ಸಮುದ್ರ ತೀರಗಳಿಂದ ದೂರ ಬರಬೇಕು ಎಂದರು.


ಸಿಡಿಲು ಉಂಟಾಗುವ ಸಂದರ್ಭದಲ್ಲಿ ಹೊರಗಡೆ ಪಾತ್ರೆ ತೊಳೆಯಬಾರದು, ಮಕ್ಕಳು, ವಯಸ್ಸಾದವರು, ಜಾನುವಾರುಗಳನ್ನು, ಸಾಕುಪ್ರಾಣಿಗಳನ್ನ, ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನ ಹರಿಸಬೇಕು. ಕಿಟಕಿ ಬಾಗಿಲುಗಳನ್ನು ಮುಚ್ಚಿ, ಬೆಂಕಿ ಮತ್ತು ವಿದ್ಯುತ್ ಶಕ್ತಿ ಸಂಪರ್ಕದಿAದ ದೂರವಿರಬೇಕು. ಈ ರೀತಿ ನಾನಾ ಸುರಕ್ಷಿತ ವಿಚಾರಗಳನ್ನ ಜನರಿಗೆ ಮನದಟ್ಟು ಮಾಡಿಕೊಟ್ಟು, ಶಾಲಾ-ಕಾಲೇಜುಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಿದರೆ, ಸಿಡಿಲಿನಿಂದ ಆಗುವ ಸಾವು ನೋವುಗಳನ್ನು ತಡೆಯಬಹುದು ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊoಡಿದ್ದಾರೆ.

Leave a Reply

Your email address will not be published. Required fields are marked *