ಒಡೆದ ಹಾಲನ್ನು ಎಸೆಯಬೇಕಿಲ್ಲ, ಈ ಐದು ರೀತಿಯಲ್ಲಿ ರೀತಿ ಬಳಸಿ !

ಒಡೆದ ಹಾಲನ್ನು ಸ್ಮೂಥಿ ಮಾಡಲು ಅಥವಾ ಶೇಕ್ ಮಾಡಲು ಬಳಸಬಹುದು.  ಈ ರೀತಿಯಾಗಿ ಹಾಲು ವ್ಯರ್ಥವಾಗುವುದಿಲ್ಲ.  

ಬೆಂಗಳೂರು : ಪ್ರತಿ ಮನೆಯಲ್ಲೂ  ಹಾಲು ಒಡೆಯುತ್ತದೆ. ಒಡೆದ ಹಾಲನ್ನು ನಾವು ಬಳಸುವುದಿಲ್ಲ. ಎಸೆದು ಬಿಡುತ್ತೇವೆ. ಆದರೆ ಒಡೆದ ಹಾಲು ಕೂಡಾ ನಮಗೆ ತುಂಬಾ ಉಪಯುಕ್ತವಾಗಬಹುದು. ಅದನ್ನು ಎಸೆಯುವ ಬದಲು ಅನೇಕ  ರೀತಿಯಲ್ಲಿ ಬಳಸಬಹುದು. 

ಒಡೆದ ಹಾಲನ್ನು ಸ್ಮೂಥಿ ಮಾಡಲು ಅಥವಾ ಶೇಕ್ ಮಾಡಲು ಬಳಸಬಹುದು.  ಈ ರೀತಿಯಾಗಿ ಹಾಲು ವ್ಯರ್ಥವಾಗುವುದಿಲ್ಲ.  

ಒಡೆದ ಹಾಲಿನಿಂದ ಅನೇಕ ಆರೋಗ್ಯಕರ ವಸ್ತುಗಳನ್ನು ತಯಾರಿಸಬಹುದು.  ನೀವು ಅದಕ್ಕೆ ಉಪ್ಪು ಮತ್ತು ಕರಿಮೆಣಸು ಸೇರಿಸಿ  ಬುರ್ಜಿ ಮಾಡಬಹುದು.  

ಒಡೆದ ಹಾಲನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದು, ಇದರಿಂದ ನಿಮ್ಮ ಮುಖ ಸ್ವಚ್ಛವಾಗುತ್ತದೆ ಮತ್ತು ತ್ವಚೆಯ ಮೇಲೆ ಸಾಕಷ್ಟು ಹೊಳಪು ಇರುತ್ತದೆ.

ಮೃದುವಾದ  ಚಪಾತಿ ತಯಾರಿಸಲು  ಒದೆದಹಾಳನ್ನು ಬೆರೆಸಿ ಹಿಟ್ಟು ಕಳಸಬಹುದು. ಇದರಿಂದ ಚಪಾತಿ ತುಂಬಾ ಮೃದುವಾಗುವುದಲ್ಲದೆ, ಬಹಳ ರುಚಿಯಾಗಿರುವುದು. 

 ನೀವು ಮಾಡುವ ಯಾವುದಾದರೂ ತರಕಾರಿಯ ಪಲ್ಯ ತುಂಬಾ ನೀರಾಗಿದೆ ಅಥವಾ ತೆಳುವಾಗಿದೆ ಎಂದಾದರೆ ಅದಕ್ಕೆ ಈ ಒಡೆದ ಹಾಲನ್ನು ಸೇರಿಸಿ ದಪ್ಪ ಮಾಡಬಹುದು.

Source : https://zeenews.india.com/kannada/photo-gallery/5-major-benefits-of-curdled-milk-176097/to-make-food-thick-176098

Leave a Reply

Your email address will not be published. Required fields are marked *