ಚಲಿಸುವ ರೈಲಿನಲ್ಲಿ ಮೊಬೈಲ್ ಕಳೆದೋದ್ರೆ ಚಿಂತೆ ಬೇಡ: ನಿಮ್ಮ ಸಹಾಯಕ್ಕೆ ಬಂದಿದೆ “ಆಪರೇಷನ್ ಅಮಾನತ್”

OPERATION AMANAT : ಭಾರತೀಯ ರೈಲ್ವೆಯು, ಟೆಲಿಕಾಂ ಇಲಾಖೆಯೊಂದಿಗೆ ಕೈಜೋಡಿಸಿ ಕೈಗೊಂಡಿರುವ ಈ ಆಪರೇಷನ್​ ಅಮಾನತ್​ ಟೆಕ್ನಾಲಜಿಯ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ..

ಹುಬ್ಬಳ್ಳಿ: ದೇಶದಲ್ಲಿ ಅತೀ ಹೆಚ್ಚು ಪ್ರಯಾಣಿಕರನ್ನು ಸಾಗಿಸುವಲ್ಲಿ ರೈಲ್ವೆ ಪ್ರಮುಖ ಪಾತ್ರವಹಿಸುತ್ತದೆ. ನಿತ್ಯ ಕೋಟ್ಯಾಂತರ ಜನ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ರೈಲುಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳ್ಳತನ ಕೂಡ ಸರ್ವೇಸಾಮಾನ್ಯವಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಚಲಿಸುವ ರೈಲಿನಲ್ಲಿಯೇ ಪೊಲೀಸ್ ಠಾಣೆ ಅಲೆದಾಟವಿಲ್ಲದೆ ತಮ್ಮ ಮೊಬೈಲ್ ಸಂಖ್ಯೆ ‌ನಿರ್ಬಂಧಿಸುವ ಮೂಲಕ ಮುಂದೆ ಆಗುವ ಹಾನಿ ತಡೆಟ್ಟಲು ಭಾರತೀಯ ರೈಲ್ವೆ ಹಾಗೂ ಟೆಲಿಕಾಂ ಇಲಾಖೆಯೊಂದಿಗೆ ಕೈ ಜೋಡಿಸಿದೆ.

ಕೆಲವೇ ನಿಮಿಷಗಳಲ್ಲಿ ಪರಿಹಾರ: ಚಲಿಸುತ್ತಿರುವ ರೈಲಿನಲ್ಲಿ ಮೊಬೈಲ್ ಕಳ್ಳತನವಾದರೆ ಇನ್ಮುಂದೆ ಭಯಪಡುವ ಅವಶ್ಯಕತೆ ಇಲ್ಲ. ಕೆಲವೇ ಕೆಲವು ನಿಮಿಷಗಳಲ್ಲಿ ನಿಮ್ಮ ‌ಮೊಬೈಲ್ ಐಎಂಇಐ ಸಂಖ್ಯೆಯಲ್ಲಿ ನಿರ್ಬಂಧಿಸಬಹುದು. ಇಂತಹ ಒಂದು ಮಹತ್​ಕಾರ್ಯಕ್ಕೆ ಭಾರತೀಯ ರೈಲ್ವೆ ಮುಂದಾಗಿದ್ದು, “ಆಪರೇಷನ್ ಅಮಾನತ್” ಎಂಬ ಹೆಸರಿನಲ್ಲಿ ಕಾರ್ಯರೂಪಕ್ಕೆ ಬರುತ್ತಿದೆ.

ಆಪರೇಷನ್ ಅಮಾನತ್ ಎಂಬ ಹೆಸರಿನಲ್ಲಿ ಆರ್​​ಪಿಎಫ್‌ ಪೊಲೀಸರು ಕಳೆದು ಹೋದ ಮೊಬೈಲ್​ಗಳನ್ನು ಹುಡುಕಿ ಮೂಲ ‌ಮಾಲೀಕರಿಗೆ ತಲುಪಿಸುವ ಕಾರ್ಯ ಮಾಡುತ್ತದೆ. ಆನ್​ಲೈನ್ ವ್ಯವಹಾರಕ್ಕೆ ಮೊಬೈಲ್ ಬಳಕೆಯಾಗುತ್ತದೆ. ಅಂತಹ ಮೊಬೈಲ್ ಕಳ್ಳತನವಾದರೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಆರ್ಥಿಕ ಸಮಸ್ಯೆ ಜೊತೆಗೆ ಅನ್ಯ ಚಟುವಟಿಕೆಗಳಿಗೆ ಬಳಕೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಕೂಡಲೇ 139 ರೈಲ್ ಮದದ್ ನಂಬರ್​ಗೆ ಹೋಗಿ ಆನ್​ಲೈನ್ ಪೋರ್ಟಲ್​ನಲ್ಲಿ ದೂರು‌ ನೀಡಬಹುದಾಗಿದೆ.

ಕೂಡಲೇ ಆರ್​ಪಿಎಫ್ ಸಿಬ್ಬಂದಿ ಕರೆ ಮಾಡಿ ದೂರು‌ ನೀಡಲು ಸೂಚಿಸುತ್ತಾರೆ. ಚಲಿಸುತ್ತಿರುವ ರೈಲಿನಲ್ಲಿಯೇ ನೀವು ಒಂದು ಹಾಳೆಯ ಮೇಲೆ ನಿಮ್ಮ ಮೊಬೈಲ್ ಮಾಹಿತಿ‌ ನಂಬರ್ ಸೇರಿದಂತೆ ಕೆಲ ಮಾಹಿತಿ ದಾಖಲಿಸಿ ಸಹಿ ಮಾಡಿ ರೈಲಿನಲ್ಲಿ ಕರ್ತವ್ಯ ನಿರ್ವಹಿಸುವ ರೈಲ್ವೆ ‌ಪೊಲೀಸ್ ಕೈಗೆ ಕೊಡಬೇಕು. ಆಗ ರೈಲ್ವೆ ಪೊಲೀಸರು ಟೆಲಿಕಾಂ ಸಂಸ್ಥೆಯ ಸಿಇಐಆರ್ ಎಂಬ ಪೋರ್ಟಲ್​ನಲ್ಲಿ ಕಳೆದ ಮೊಬೈಲ್ ನಂಬರ್ ಬ್ಲಾಕ್ ಮಾಡಲು ಮಾಹಿತಿ ಕಳುಹಿಸುತ್ತಾರೆ. ಕೂಡಲೇ ಮೊಬೈಲ್ ಟ್ರೇಸ್ ಮಾಡಲು ಪ್ರಾರಂಭಿಸಲಾಗುತ್ತದೆ. ಒಂದು ವೇಳೆ ಕಳ್ಳ ಸಿಕ್ಕರೆ ಮರಳಿ ಪಡೆದು ಮೂಲ ಮಾಲೀಕರಿಗೆ ಒಪ್ಪಿಸಲಾಗುತ್ತದೆ.

ಈ ಕುರಿತಂತೆ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕರ ಸಂಪರ್ಕ ಅಧಿಕಾರಿ ಡಾ‌. ಮಂಜುನಾಥ ‌ಕನಮಡಿ  ಪ್ರತಿಕ್ರಿಯಿಸಿ, “ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಹಾಗೂ ಭಾರತ ದೂರಸಂಪರ್ಕ ‌ಇಲಾಖೆ ಸಿಇಆರ್​ಐ ಮೂಲಕ ಕಳೆದು ಹೋದ ಮೊಬೈಲ್ ನಂಬರ್ ಬ್ಲಾಕ್ ಮಾಡುವುದು ಹಾಗೂ ಮೊಬೈಲ್ ಪತ್ತೆಹಚ್ಚಿ ಮೂಲ ಮಾಲೀಕರಿಗೆ ಒಪ್ಪಿಸುವ ವಿನೂತನ ಯೋಜನೆ ಹಾಕಿಕೊಂಡಿದೆ. ಇದರಿಂದ ಪ್ರಯಾಣಿಕರು ‌ಅನುಭವಿಸುವ ಮಾನಸಿಕ ಒತ್ತಡ ಹಾಗೂ ಆರ್ಥಿಕ ನಷ್ಟ ತಪ್ಪಿಸಬಹುದಾಗಿದೆ” ಎಂದರು.

ಪೊಲೀಸ್ ಠಾಣೆಗೆ ಅಲೆಯುವ ಅವಶ್ಯಕತೆ ಇಲ್ಲ: ಈ ಮೊದಲು ರೈಲಿನಲ್ಲಿ ಮೊಬೈಲ್‌ ಕಳ್ಳತನವಾದರೆ ಪೊಲೀಸ್ ಠಾಣೆಗೆ ದೂರು ಕೊಡಬೇಕಿತ್ತು. ಆದರೆ ಈಗ ಯಾವುದೇ ಠಾಣೆಗೆ ಓಡಾಡದೆ ನೇರವಾಗಿ ಸಿಇಐಆರ್ ಪೋರ್ಟಲ್‌ನಲ್ಲಿ ದೂರು ಸಲ್ಲಿಸುವ ಮೂಲಕ ಮೊಬೈಲ್ ‌ಪತ್ತೆ ಜೊತೆಗೆ ಮುಂದೆ ಆಗುವ ಹಾನಿ ತಪ್ಪಿಸಬಹುದಾಗಿದೆ.

ಪ್ರಾಯೋಗಿಕವಾಗಿ ಯಶಸ್ವಿ: ರೈಲುಗಳು ಮತ್ತು ನಿಲ್ದಾಣದ ಆವರಣದಲ್ಲಿ ಕಳೆದುಹೋದ ಮೊಬೈಲ್ ಮರಳಿ ಕೊಡಿಸುವಲ್ಲಿ ಆರ್​ಪಿಎಫ್ ಮುಂಚೂಣಿಯಲ್ಲಿದೆ. ನಿಜವಾದ ಮಾಲೀಕರಿಗೆ ಮೊಬೈಲ್ ಹಿಂದಿರುಗಿಸುವ ಏಕೈಕ ಉದ್ದೇಶವನ್ನು ಹೊಂದಿರುವ ಆರ್‌ಪಿಎಫ್‌ನ ಆಪರೇಷನ್ ಅಮಾನತ್ ಪ್ರಭಾವಶಾಲಿ ಫಲಿತಾಂಶಗಳನ್ನು ನೀಡಿದೆ. ಆರ್​ಪಿಎಎಫ್ ಜನವರಿ 2024 ಮತ್ತು ಫೆಬ್ರವರಿ 2025ರ ನಡುವೆ 284.03 ಕೋಟಿ ಮೌಲ್ಯದ ವಸ್ತುಗಳನ್ನು ಯಶಸ್ವಿಯಾಗಿ 1.15 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಹಿಂದಿರುಗಿಸಿದೆ.

ಮೇ 2024 ರಲ್ಲಿ, RPF CEIR ಪೋರ್ಟಲ್ ಅನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಮತ್ತು ಆರ್​ಪಿಎಫ್​ಗಾಗಿ ಅದರ ಉಪಯುಕ್ತತೆಯನ್ನು ಅಧ್ಯಯನ ಮಾಡಲು ಈಶಾನ್ಯ ಫ್ರಂಟಿಯರ್ ರೈಲ್ವೆಯಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿತು. ಈ ಪ್ರಯೋಗವು ಹಲವಾರು ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಯಶಸ್ವಿಯಾಗಿ ಮರಳಿಪಡೆಯಲು ಯಶಸ್ವಿಯಾಗಿದೆ.

ಮೊಬೈಲ್ ಕಳೆದುಕೊಂಡ ಪ್ರಯಾಣಿಕರು ಅನುಸರಿಸಬೇಕಾದ ಕ್ರಮಗಳು:

ರೈಲ್ ಮದದ್ ಮೂಲಕ ದೂರು ನೋಂದಣಿ: ಪ್ರಯಾಣಿಕರು ಕಳೆದುಹೋದ ಅಥವಾ ಕಳುವಾದ ಮೊಬೈಲ್ ಫೋನ್‌ಗಳನ್ನು ರೈಲ್ ಮದದ್ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ 139 ಅನ್ನು ಡಯಲ್ ಮಾಡುವ ಮೂಲಕ ವರದಿ ಮಾಡಬಹುದು. ಅವರು ಎಫ್‌ಐಆರ್ ದಾಖಲಿಸದಿರಲು ನಿರ್ಧರಿಸಿದರೆ, ಸಿಇಐಆರ್ ಪೋರ್ಟಲ್‌ನಲ್ಲಿ ತಮ್ಮ ದೂರನ್ನು ನೋಂದಾಯಿಸಲು ಅವರಿಗೆ ಮಾರ್ಗದರ್ಶನ ನೀಡಲಾಗುತ್ತದೆ.

ಆರ್‌ಪಿಎಫ್‌ನಿಂದ ಸಿಇಐಆರ್ ನೋಂದಣಿ: ಆರ್‌ಪಿಎಫ್‌ನ ವಲಯ ಸೈಬರ್ ಕೋಶಗಳು ಸಿಇಐಆರ್ ಪೋರ್ಟಲ್‌ನಲ್ಲಿ ದೂರನ್ನು ನೋಂದಾಯಿಸುತ್ತದೆ. ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಸಾಧನವನ್ನು ನಿರ್ಬಂಧಿಸುತ್ತದೆ.

ಟ್ರ್ಯಾಕಿಂಗ್ ಮತ್ತು ಮರುಪಡೆಯುವಿಕೆ: ಕಳೆದುಹೋದ ಫೋನ್ ಅನ್ನು ಹೊಸ ಸಿಮ್ ಕಾರ್ಡ್‌ನೊಂದಿಗೆ ಪತ್ತೆಹಚ್ಚಿದ ನಂತರ, ಸಾಧನದ ಬಳಕೆದಾರರಿಗೆ ಅದನ್ನು ಹತ್ತಿರದ ಆರ್‌ಪಿಎಫ್ ಪೋಸ್ಟ್‌ಗೆ ಹಿಂತಿರುಗಿಸಲು ಸಲಹೆ ನೀಡಲಾಗುತ್ತದೆ. ಸಾಧನವನ್ನು ಹಿಂಪಡೆಯಲು ಸರಿಯಾದ ಮಾಲೀಕರು ಪೋಷಕ ದಾಖಲೆಗಳನ್ನು ಪ್ರಸ್ತುತಪಡಿಸಬೇಕು.

ಕಾನೂನು ಕ್ರಮ: ಪಾಲಿಸದಿದ್ದಲ್ಲಿ, ಎಫ್‌ಐಆರ್ ದಾಖಲಿಸಬಹುದು, ಮತ್ತು ವಿಷಯವು ಜಿಲ್ಲಾ ಪೊಲೀಸ್‌ ಗಮನಕ್ಕೆ ತರಲಾಗುವುದು.

ಡಿವೈಸ್ ಅನ್‌ಬ್ಲಾಕಿಂಗ್: ಚೇತರಿಸಿಕೊಂಡ ನಂತರ, ದೂರುದಾರರು ಸಿಇಐಆರ್ ಪೋರ್ಟಲ್ ಮೂಲಕ ಫೋನ್ ಅನ್ನು ಅನ್‌ಬ್ಲಾಕ್ ಮಾಡಲು ವಿನಂತಿಸಬಹುದು. ಅಗತ್ಯವಿದ್ದರೆ ಆರ್‌ಪಿಎಫ್ ಸಹಾಯದಿಂದ ಮರಳಿ ಪಡೆಯಬಹುದು.

ETV Bharat

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *