ಚಿತ್ರದುರ್ಗ|ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೇಮ ಮೂಡಿಸುವುದು ಆದ್ಯ ಕರ್ತವ್ಯ – ಡಾ. ಬಸವಕುಮಾರ ಸ್ವಾಮೀಜಿ.


ಚಿತ್ರದುರ್ಗ, ನ 17: ಕರ್ನಾಟಕ, ಕನ್ನಡ ಎಂದರೆ ಒಂದು ಸುಂದರ ಅನುಭವ, ನಮ್ಮ ನಾಡು ನುಡಿ ಹಲವಾರು ವ್ಯಾಯಾಮಗಳಲ್ಲಿ
ಸಂಪದ್ಭರಿತವಾಗಿದ್ದು,ಚಿತ್ರದುರ್ಗದ ನರ್ಸಿಂಗ್ ಕಾಲೇಜಿನಲ್ಲಿ ರಾಜ್ಯದ ಜತೆ ಹಲವಾರು ವಿದ್ಯಾರ್ಥಿಗಳು ಹೊರ ರಾಜ್ಯಗಳಿಂದ ಅಭ್ಯಾಸ
ಮಾಡಲು ಬಂದಿದ್ದು ಕನ್ನಡ ಕಲಿಯುವದರ ಮೂಲಕ ಕನ್ನಡದ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು. ಆ ರೀತಿಯಲ್ಲಿ ಎಲ್ಲರೂ ಸೇರಿ ಕನ್ನಡ
ರಾಜ್ಯೋತ್ಸವ ಆಚರಿಸುವ ಕ್ರಮ ಸಂತಸದ ವಿಷಯ ಎಂದು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್
ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಸಲಹೆ ನೀಡಿದರು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಶ್ರೀಗಳವರು ನಗರದ ಎಸ್.ಜೆ.ಎಂ.ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಕಾಲೇಜಿನ ವತಿಯಿಂದ ಬಿಚ್ಚುಗತ್ತಿ ಭರಮಣ್ಣ ನಾಯಕ ಸಭಾಂಗಣದಲ್ಲಿ ನಡೆದ ೬೯ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಕರ್ನಾಟಕವು ಎಲ್ಲ ಆಯಾಮಗಳಲ್ಲಿಯೂ ಒಂದು ಸುಂದರ ರಾಜ್ಯವಾಗಿದ್ದು, ವಿಭಿನ್ನ ಭಾಷೆ, ಧರ್ಮ,ಜಾತಿ ವ್ಯವಸ್ಥೆಯನ್ನ ಒಳಗೊಂಡಿದೆ, ಹಾಗೆಯೇ ನಮ್ಮ ವಿದ್ಯಾಪೀಠದ ಅಡಿಯಲ್ಲಿ ಹಲವಾರು ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ವಿಭಿನ್ನ ರಾಜ್ಯಗಳ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.
ಕನ್ನಡ ನಾಡಗೀತೆಯಲ್ಲಿರುವ ಪ್ರತೀ ಸಾಲಿನ ಪದಗಳು ಸಹ ಕನ್ನಡದ ಮಹತ್ವವನ್ನು ಸಾರಿ,ಸಾರಿ ಹೇಳುತ್ತವೆ. ಕನ್ನಡಿಗರಾಗಿರುವ ನಾವೇ ಧನ್ಯರು. ಕನ್ನಡ ಉಳಿಸಿ,ಬೆಳೆಸುವ ಜತೆಗೆ ಕನ್ನಡ ಬಳಸುವುದು ಅತೀ ಅವಶ್ಯಕ ಎಂದು ತಿಳಿಸಿದರು.

ಜಾನಪದ ಲಾವಣಿಕಾರರಾದ ಗಂಜಿಗಟ್ಟೆ ಕೃಷ್ಣಮೂರ್ತಿಯವರು ಕರ್ನಾಟಕದ ವಿಶಿಷ್ಟ ಆಚರಣೆಗಳು,ಧರ್ಮ, ಇತಿಹಾಸ, ಮಹಾನೀಯರು
ನೀಡಿದ ಸಂದೇಶಗಳು, ಕಾಣಿಕೆಗಳನ್ನು ತಮ್ಮ ಲಾವಣಿ ಹಾಡುಗಳ ಮೂಲಕ ನೆರೆದಿದ್ದ ವಿದ್ಯಾರ್ಥಿಗಳಿಗೆ ಅರ್ಥೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ವಿ. ಸವಿತಾ
ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ತೋರದೆ ಪ್ರತಿಯೊಬ್ಬರೂ ಕನ್ನಡ ಮಾತನಾಡುವುದರ ಮೂಲಕ ಭಾಷೆಯ ಮೇಲಿರುವ ತಮ್ಮ
ಅಭಿಮಾನವನ್ನು ಮೆರೆಯಬೇಕು ಮತ್ತು ಅಭಿಮಾನ ಬೇರೆಯವರಿಗೆ ಮೂಡಿಸುವಂತಹ ಕೆಲಸ ಮಾಡಬೇಕೆಂದರು. ನರ್ಸಿಂಗ್ ಕಾಲೇಜಿನ ಬೋಧಕ ಸಿಬ್ಬಂದಿಯವರು ಕನ್ನಡ ರಾಜ್ಯೋತ್ಸವದ ಮಹತ್ವ ಸಾರುವ ಸಂದೇಶವನ್ನು ವೀಡಿಯೊ ಚಿತ್ರಗಳ ಮೂಲಕ
ಅಳವಡಿಸಿರುವ ಕಿರು ಚಿತ್ರಕ್ಕೆ ಶ್ರೀಗಳವರು ಚಾಲನೆ ನೀಡಿದರು.

ಪ್ರಾಧ್ಯಾಪಕರಾದ ಬಸವರಾಜ .ಎನ್,ಸಹ ಪ್ರಾಧ್ಯಾಪಕರಾದ ಶ್ರೀಮತಿ ಪವಿತ್ರ ಎಂ,ಶ್ರೀ ಮಹದೇಶ್ವರ .ಎಸ್, ಶ್ರೀಮತಿ ಮಧು. ಬಿ,
ವೀರೇಶ್, ಮೋನಿಕಾ, ಯಶಸ್ವಿನಿ, ಸುಮಿತ್ರಾ, ಆಕಾಶ್, ಮೌನೇಶ್, ದಿವ್ಯಾ, ನಯನ, ಸುಮಯ, ಕುಸುಮ, ಬೋಧಕೇತರ
ಸಿಬ್ಬಂದಿಗಳಾದ ಲಿಂಗರಾಜು, ಕೀರ್ತಿಕುಮಾರ್, ಅಭಿಷೇಕ, ಬಸವರಾಜ, ಕುಮಾರಿ ಚಂದನ, ವಿವೇಕಾನಂದ,
ನಾಗೇಂದ್ರಪ್ಪ,ಶ್ರುತಿ, ಹಾಗೂ ಕಾರ್ತಿಕ್ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಕನ್ನಡ, ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಭಾವಗೀತೆ, ಜನಪದ ಗೀತೆಗಳ ನೃತ್ಯ ವೈಭವ ನೆರವೇರಿತು.

Leave a Reply

Your email address will not be published. Required fields are marked *