
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ, ಮೊ : 8088076203
ಭೀಮಸಮುದ್ರ ಗ್ರಾಮದ ತುರೆಬೈಲು ಕಾಲೋನಿಯಾ ಭೀಮ್ ಸರ್ಕಲ್ ಬಳಿ ಇಂದು ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ರವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು ಮಾಜಿ ಸೈನಿಕರಾದ ದಾದಾಪೀರ್ ರವರನ್ನು ಶಾಲು ಹಾಗೂ ಹೂವಿನ ಹಾರ ಹಾಕಿ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮವನ್ನು ಕುರಿತು ಗ್ರಾಮದ ಮಾಜಿ ಸೈನಿಕ ದಾದಾಪೀರ್ ಮಾತನಾಡಿ. ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಿ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನದ ಬಗ್ಗೆ ಗೌರವ ತರುವಂತಹ ಕೆಲಸ ಮಾಡಿದ್ದಾರೆ ಅಂಬೇಡ್ಕರ್ ನಮಗೆ ಒಂದು ಆದರ್ಶ ವ್ಯಕ್ತಿ ಇಂದಿನ ಮಕ್ಕಳು ಇವರಂತೆ ಚೆನ್ನಾಗಿ ಓದಿ ಸಮಾಜದಲ್ಲಿ ಒಬ್ಬ ಉನ್ನತ ವ್ಯಕ್ತಿಯಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ್, ಮಂಜುನಾಥ್, ದೇವರಾಜ್ ,ತಿಪ್ಪೇಸ್ವಾಮಿ, ಸುರೇಶ್, ದಾದು ಶಿವರಾಜ್ ,ಮಣಿಕಂಠ, ಪರಮೇಶ್ ,ರಾಮ ಲಕ್ಷ್ಮಣ, ಅರುಣ, ದಿನೇಶ್, ದಿಲೀಪ ,ಸಂದೀಪು ಇದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1