ಪ್ಲಾಸ್ಟಿಕ್ ಮುಕ್ತ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ : ಡಾ.ಹೆಚ್ ಕೆ ಎಸ್ ಸ್ವಾಮಿ.

ಚಿತ್ರದುರ್ಗ : ನಗರದ ಪ್ರತಿಷ್ಠಿತವಿದ್ಯಾ ವಿಕಾಸ ವಿದ್ಯಾ ಸಂಸ್ಥೆ, ಇಲ್ಲಿ ದಿನಾಂಕ 27.07.2024ರಂದು “ವನಮಹೋತ್ಸವ ಕಾರ್ಯಕ್ರಮವನ್ನು” ಆಚರಿಸಲಾಯಿತು. ಕಾರ್ಯಕ್ರಮದ ವಿಶೇಷತೆಯನ್ನು ಕುರಿತು ‘ಕಾಡಿದ್ದರೆ ನಾಡು ನಾಡಿದ್ದರೆ ನಾವು’ ‘ಗಿಡ ಬೆಳೆಸಿ ಪರಿಸರ ಉಳಿಸಿ’ ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದ್ದು ಹೃದಯ ಸಂಬಂಧಿ, ಶ್ವಾಸಕೋಶದ ಸಂಬಂಧಿ ಖಾಯಿಲೆಗಳಿಂದ ಬಳಲುವವರ ಸಂಖ್ಯೆ ಹೆಚ್ಚುತಿದ್ದು ಇದಕ್ಕೆ ಪರಿಹಾರ ನಮ್ಮ ಪರಿಸರದ ಸ್ವಚ್ಚತೆಯ ಜೊತೆಗೆ ಕಾಡನ್ನು ರಕ್ಷಿಸಿ ಬೆಳೆಸವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ವಿದ್ಯಾರ್ಥಿನಿ ಕೀರ್ತನಾ ಎಸ್ ಯು ಭಾಷಣ ಮಾಡಿದರು.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಹೆಚ್ ಕೆ ಎಸ್ ಸ್ವಾಮಿ ಅವರು ‘ಕಸದಿಂದ ರಸ’ ಎಂಬಂತೆ ನಿರುಪಯುಕ್ತ ವಸ್ತುಗಳನ್ನು ಮರುಬಳಕೆ ಮಾಡಲು ತಾವು ತಂದ ಮಾದರಿಗಳನ್ನು ತೋರಿಸುತ್ತಾ ಉತ್ತೇಜಿಸಿದರು. ಗಾಂಧೀಜಿಯವರ ಕನಸಾದ ಸ್ವದೇಶಿ ವಸ್ತುಗಳ ಬಳಕೆ ಹಾಗೂ ಚರಕದ ಉಪಯೋಗದ ಬಗ್ಗೆ ತಿಳಿಸಿದರು. ಪ್ಲಾಸ್ಟಿಕ್ ಮುಕ್ತ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ ಎಂದು ತಿಳಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಸಮೃದ್ಧ ಪರಿಸರ ಮತ್ತು ಜಲಸಂರಕ್ಷಣೆಗೆ ಅಗತ್ಯ ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕರಾದ ಎಸ್.ಎಂ.ಪೃಥ್ವೀಶ ಅವರು ಡಾ.ಹೆಚ್ ಕೆ ಎಸ್ ಸ್ವಾಮಿ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಸ್.ಎಂ.ಪೃಥ್ವೀಶ , ಮುಖ್ಯೋಪಾಧ್ಯಾಯರಾದ ತಿಪ್ಪೇಸ್ವಾಮಿ ಎನ್.ಜಿ, ಐಸಿಎಸ್‌ಸಿ ಪ್ರಾಚಾರ್ಯರಾದ ಬಸವರಾಜಯ್ಯ ಪಿ., ಉಪಪ್ರಾಚಾರ್ಯರಾದ ಅವಿನಾಶ್.ಬಿ. ಶಿಕ್ಷಕ/ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿ ಸುಪ್ರಿತಾ ನಿರೂಪಿಸಿದರು, ನುರೈನ್ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *