ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಪೂರ್ವಜರು ಆರಂಭಿಸಿದ ಸಂಪ್ರದಾಯ ಹಳೆಯ ಕಾಲದ ಆಭರಣಗಳಿದ್ದಂತೆ ಅವುಗಳನ್ನು ಇಂದಿನ ಪೀಳಿಗೆ ಹೊಸ ಡಿಸೈನ್ ಮಾಡಿಕೊಂಡು ಬಳಸುವಂತೆ ನಾವು ಸಂಪ್ರದಾಯವನ್ನು ಉಳಿಸಬೇಕು ಎಂದು ಚಿತ್ರದುರ್ಗ ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ,ಶಿವಕುಮಾರ್ ಅಭಿಪ್ರಾಯಪಟ್ಟರು.

ಚಿತ್ರದುರ್ಗ : ಸ್ಟೇಡಿಯಂ ರಸ್ತೆಯಲ್ಲಿರುವ ವೀರ ಸೌಧದಲ್ಲಿ ಪತಾಂಜಲಿ ಮಹಿಳಾ ಯೋಗ ಸಮಿತಿಯಿಂದ ನಡೆದ ಯೋಗ ಶಿಕ್ಷಕರ ತರಭೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ನಮ್ಮಪೂರ್ವಜರು ಆಚರಿಸುತಿದ್ದ, ಎಲ್ಲಾ ಸಂಪ್ರದಾಯ ನಮ್ಮಆರೋಗ್ಯಕ್ಕೆಪೂರಕವಾಗಿವೆ. ಆದರೆ ಇಂದಿನ ಸಮಾಜದಲ್ಲಿ ಶರೀರಕ್ಕಿಂತ ಹೆಚ್ಚಾಗಿ ಮನಸಿನ ಕಾಯಿಲೆ ಹೆಚ್ಚಾಗಿವೆ ಹೀಗಾಗಿ ಯೋಗ ಸೇರಿದಂತೆ ನಮ್ಮ ಪೂರ್ವಜರು ಆರಂಭಿಸಿದ್ದ ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ನಾವು ಮುನ್ನಡೆಸಬೇಕಿದೆ.ಆ ಸಂಪ್ರದಾಯಗಳು ನಮ್ಮ ಆರೋಗ್ಯ ರಕ್ಷಣೆಗೆ ದಾರಿದೀಪವಾಗಿವೆ.ಆದರೆ ಇಂದಿನ ಮಹಿಳೆಯರು ಆ ಸಾಂಪ್ರದಾಯಿಕ ಆಚರಣೆಗಳನ್ನು ಮರೆತು ಸಾಮರಸ್ಯ ಕದಡುವ ಧಾರವಾಹಿಗಳತ್ತ ಮಾರು ಹೋಗುತ್ತಿದ್ದಾರೆ. ಈ ಹಿಂದೆ ಕೋವಿಡ್ ಮಹಾಮಾರಿ ಆರಂಭವಾದಾಗ ಸಾಮಾಜಿಕ ಅಂತರಪಾಲಿಸುವಂತೆ ಸೂಚಿಸಿದ್ದಾಗ,ಪ್ರಾಣಭಯದಿಂದ ಎಲ್ಲರು ಅದನ್ನು ಪಾಲಿಸಿದೆವು.ಅಂತೆಯೇ ಈಗಿನ ಪೀಳಿಗ ಸಹ ವೈಜ್ಞಾನಿಕ ತತ್ವ ಪಾಲಿಸಿದ್ರೆ ನಮ್ಮ ಆರೋಗ್ಯ ಸುರಕ್ಷಿತವಾಗಿರಲಿದೆ.ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿವೆ.ಇಡೀ ವಿಶ್ವಕ್ಕೆ ಶಾಂತಿಸಿಗಲಿದೆ ಎಂದರು.
ಇದೇ ವೇಳೆ ಮಾತನಾಡಿದ ಯೋಗಪಟು ಹಾಗುಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿದ್ದರಾಜು ಅವರು,ಯೋಗ ಕೇವಲ ಆರೋಗ್ಯ ರಕ್ಷಣೆಗಾಗಿ ಅಲ್ಲ,ಅದು ಶಿಸ್ತನ್ನು ಕಲಿಸುತ್ತದೆ. ಉತ್ತಮ ಸಂಸ್ಕ್ರತಿ ಯನ್ನು ಕಲಿಸುತ್ತದೆ. ಹೀಗಾಗಿ ಎಲ್ಲರು ತಪ್ಪದೇ ನಿತ್ಯ ಯೋಗ ಮಾಡುವಂತೆ ಕರೆ ನೀಡಿದರು.
ನಿತ್ಯ ಯೋಗ ಮಾಡುವ ಯೋಗಪಟುಗಳು ಬೆಳಗಿನ ಜಾವ 5 ಗಂಟೆಗೆ ಎದ್ದು ಯೋಗಾಭ್ಯಾಸ ಮಾಡುವ ಶಿಸ್ತು ಕಲಿಸಲಿದೆ.ಹಾಗೆಯೆ ಗೃಹಿಣಿಯರು ಹೆಚ್ಚಾಗಿ ಯೋಗಾಭ್ಯಾಸ ಮಾಡಿದ್ರೆ ಅದು ತುಂಭಾ ಸಹಕಾರವಾಗಲಿದೆ.ಮನೆಯೇ ಮೊದಲ ಪಾಠಶಾಲೆ ಎಂಬಂತೆ ಮನೆಯಲ್ಲಿನ ತಾಯಿಯೊಬ್ರು ಯೋಗ ಕಲಿತರೆ, ಆ ಮನೆಯೊಂದು ಯೋಗಕೇಂದ್ರವಾಗಲಿದೆ.ಆಗ ಇಡೀ ಕುಟುಂಬ ಯೋಗಾಭ್ಯಾಸ ಮಾಡಲಿದೆ ಎಂದರು.
ಜೊತೆಗೆ ಸತತ ಒಂದು ವಾರದಿಂದ ನಡೆದ ಯೋಗ ಶಿಕ್ಷಕರ ತರಭೇತಿಯ ಸಮಾರೋಪ ಅಂದ್ರೆ,ಸನ್ಮಾನ ಸಭೆ ಇರೋದು ಸಹಜ ಆದ್ರೆ ಇಲ್ಲಿನ ವಾತಾವರಣ ಕಂಡಾಗ ಇದೊಂದು ಭಾರತೀಯ ಸಂಸ್ಕ್ರತಿ ಉಳಿಸುವ ಕೇಂದ್ರ ಎಂಬ ಭಾವನೆ ಮೂಡಿತು.ಶಿಕ್ಷಕರ ತರಭೇತಿಪಡೆದು ಪ್ರಮಾಣಪತ್ರ ಸ್ವೀಕರಿಸಲು ಆಕರ್ಶಕಉಡುಗೆ ತೊಡುಗೆಗಳಿಂದ ಸಿಂಗರಗೊಂಡು ಸನ್ನಧರಾಗಿದ್ದ ಯೋಗಪಟುಗಳ ಸಂಭ್ರಮ ಕಂಡಾಗ ವೀರಸೌಧದಲ್ಲಿ ಒಂದು ಬಗೆಯ ಹಬ್ಬದ ವಾತಾವರಣ ನಿರ್ಮಾಣವಾಗಿರೋದನ್ನ ಕಂಡಾಗ ಸಂತಸ ತಂದಿದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ತರಭೇತಿ ಪಡೆದ ಸುಮಾರು38 ಜನ ಯೋಗ ಶಿಕ್ಷಕರಿಗೆ ಪ್ರಮಾಣಪತ್ರ ನೀಡಿ ಅಭಿನಂಧಿಸಲಾಯಿತು.ಈ ವೇಳೆ ಐಯುಡಿಪಿ ನಿಸರ್ಗ ಯೋಗ ಕೇಂದ್ರದ ಗೀತಮ್ಮ,ಮಂಜುಳ,ಸಂಯುಕ್ತ,ವಾಸವಿ,ಜಯ್ಯಣ್ಣ, ಅಣ್ಣೇಶ್ ಶಿಕ್ಷಕರಾಗಿ ಬಡ್ತಿ ಪಡೆದಿದ್ದು, ರೀನಾವೀರಭದ್ರಪ್ಪ,ಶೈಲ ಅವರ ಅನಿಸಿಕೆ ತಿಳಿಸಿದರು.ಬಳಿಕ ಲೋಕಕಲ್ಯಾಣಕ್ಕಾಗಿ ದೇವಿಯಜ್ಞ ಹೋಮ ನೆರವೇರಿಸಲಾಯಿತು.ಈ ಹೋಮ ಮಾಡುವುದರಿಂದ ವಾತಾವರಣ ಶುದ್ದಿ,ರೋಗ ನಿವಾರಣೆ ಹಾಗು 150 ಮೀಟರ್ ಅಂತರದವರೆಗೆ ಈ ಹೋಮದ ಪಾಸಿಟಿವ್ ಎನರ್ಜಿ ಪ್ರಸಾರವಾಗಲಿದೆ ಎಂದು ಪತಾಂಜಲಿ ರಾಜ್ಯ ಪ್ರಭಾರಿ ಆರತಿ ಕಾಂಗೊ ತಿಳಿಸಿದರು.ಈ ವೇಳೆ ಸ್ವತಂತ್ರ ಹೋರಾಟಗಾರರಾದ ಗೌರಮ್ಮಹಾಗು ಸಾಧಕ ಯೋಗಪಟುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತಾಂಜಲಿ ಯೋಗ ಕೇಂದ್ರ ಜಿಲ್ಲಾ ಪ್ರಭಾರಿ ಹೇಮಲತ ವಹಿಸಿದ್ದರು.ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಪತಾಂಜಲಿ ಯೋಗಕೇಂದ್ರದ ವಿಭಾಗೀಯ ಪ್ರಭಾರಿ ಜ್ಯೋತಿ, ಜಿಲ್ಲಾ ಯೋಗ ಕೇಂದ್ರದ ಉಸ್ತುವಾರಿ ಮಲ್ಲಿಕಾರ್ಜುನಸ್ವಾಮಿ,ಕೇಂದ್ರದ ಅಮರೇಂದ್ರಸಿಂಗ್ ಉಪಸಮಿತಿ ಅಧ್ಯಕ್ಷರಾದ ಲವಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯೋಗಸಾಧಕ ನಾಗೇಶ್ ಸ್ವಾಗತಿಸಿದರು. ಯೋಗಶಿಕ್ಷಕಿ ಶೋಭಾ, ಶಶಿಕಲಾ,ಶೈಲಜ ಪ್ರಾರ್ಥಿಸಿದರು, ಜಯ್ಯಣ್ಣ ವಂದಿಸಿದರು.