ವಿಜಯ್​ ಮರ್ಚೆಂಟ್ ಟ್ರೋಫಿ: U-16 ಕರ್ನಾಟಕಕ್ಕೆ ದ್ರಾವಿಡ್​ ಪುತ್ರ ನಾಯಕ, ರಾಯಚೂರು ಹುಡುಗ ಉಪನಾಯಕ.

Vijay Merchant Trophy-U-16 Cricket: ವಿಜಯ್​ ಮರ್ಚೆಂಟ್ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಕರ್ನಾಟಕ ಅಂಡರ್​-16 ತಂಡವನ್ನು ಪ್ರಕಟಿಸಲಾಗಿದ್ದು, ಕ್ಯಾಪ್ಟನ್‌ ಆಗಿ ರಾಹುಲ್ ದ್ರಾವಿಡ್ ಪುತ್ರ ಆಯ್ಕೆಯಾದರೆ, ರಾಯಚೂರಿನ ಹುಡುಗನಿಗೆ ಉಪನಾಯಕನ ಸ್ಥಾನ ಸಿಕ್ಕಿದೆ..

ರಾಯಚೂರು: 2023-24ನೇ ಸಾಲಿನ ವಿಜಯ್​ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯ ಸದ್ಯದಲ್ಲೇ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಂಡರ್-16 ತಂಡವನ್ನು ಉಪ ನಾಯಕನಾಗಿ ಮುನ್ನಡೆಸುವ ಅವಕಾಶ ರಾಯಚೂರಿನಲ್ಲಿ ಹುಡುಗ ಅನಿಕೇತ ರೆಡ್ಡಿ ಅವರಿಗೆ ಲಭಿಸಿದೆ. ಇವರು ಸೈಬರ್ ಕ್ರೈಮ್‌ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಹೆಡ್‌ಕಾನ್ಸ್‌ಟೆಬಲ್ ವಿಕ್ರಮರೆಡ್ಡಿ ಎಂಬವರ ಪುತ್ರ. 2023 ಡಿಸೆಂಬರ್ 1ರಿಂದ 23ರವರೆಗೆ ವಿಜಯವಾಡದಲ್ಲಿ ಟೂರ್ನಿ ನಡೆಯಲಿದೆ.

ದ್ರಾವಿಡ್​ ಮಗ ನಾಯಕ: ಭಾರತ ಕ್ರಿಕೆಟ್‌ ತಂಡ ಪ್ರಧಾನ ಕೋಚ್‌ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಈ ತಂಡಕ್ಕೆ ಕ್ಯಾಪ್ಟನ್ ಆಗಿದ್ದಾರೆ. ಅನ್ವಯ್ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ. ದ್ರಾವಿಡ್ ಏಕದಿನ ಮತ್ತು ಟೆಸ್ಟ್‌ನಲ್ಲಿ ವಿಕೆಟ್‌ಕೀಪರ್ ಬ್ಯಾಟರ್‌ ಆಗಿದ್ದವರು. ಅನ್ವಯ್ ಸಹೋದರ ಸಮಿತ್ ಕೂಡ ಕ್ರಿಕೆಟಿಗರಾಗಿದ್ದಾರೆ. ಸಮಿತ್ 2019-20ರಲ್ಲಿ 14 ವರ್ಷದೊಳಗಿನವರ ವಿಭಾಗದಲ್ಲಿ ಎರಡು ದ್ವಿಶತಕ ಗಳಿಸಿ ಗಮನ ಸೆಳೆದಿದ್ದರು. ಅಂಡರ್-14 ಮಟ್ಟದಲ್ಲೂ ಸಮಿತ್ ವಿಶಿಷ್ಟ ಗುರುತು ಹೊಂದಿದ್ದಾರೆ.

ದ್ರಾವಿಡ್ ತರಬೇತುದಾರರಾಗಿರುವ ಟೀಂ ಇಂಡಿಯಾ ವಿಶ್ವಕಪ್ ಕ್ರಿಕೆಟ್​ ಅಭಿಯಾನದುದ್ದಕ್ಕೂ ಮಿಂಚಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನಪ್ಪಿತ್ತು. ಈ ಮೂಲಕ ವಿಶ್ವಕಪ್​ ಎತ್ತಿ ಹಿಡಿಯುವ ಅವಕಾಶ ಮಿಸ್ ಮಾಡಿಕೊಂಡಿತ್ತು. ಸದ್ಯ ಭಾರತ-ಆಸೀಸ್​ ನಡುವೆ 5 ಟಿ20 ಪಂದ್ಯಗಳ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ 1-0 ಅಂತರದಿಂದ ಭಾರತ ಮುನ್ನಡೆ ಸಾಧಿಸಿದೆ.

ಕರ್ನಾಟಕ ತಂಡ U16 ತಂಡ: ಅನ್ವಯ್​ ದ್ರಾವಿಡ್ (ನಾಯಕ ಮತ್ತು ವಿಕೆಟ್​ ಕೀಪರ್)​, ಅನಿಕೇತ್​ ರೆಡ್ಡಿ (ಉಪ ನಾಯಕ), ತಲ್ಹಾ ಶರೀಫ್, ರೋಹನ್​ ಮೊಹಮ್ಮದ್​, ಪಾರ್ಥ ಆರ್​, ಶಿವ ಆರ್​, ಅಮೋಘ ಆರ್​ ಶೆಟ್ಟಿ, ಮಿಲನ್​ ಧಾಮಿ, ಧ್ಯಾನ್​ ಎಂ.ಹಿರೇಮಠ, ಪ್ರದ್ಯುಮ್ನ ಎ.ಎನ್.​, ವೈಭವ್​ ಸಿ, ಸಾಯಿ ಕೃತಿನ್​ ಯೆಡಿಡಿ, ರೋಹಿತ್ ಎ.ಎ., ತೇಜಸ್​ ಆರ್​ ನಾಯಕ್​, ಆರ್ಯ ಜೆ.ಗೌಡ.​

Source : https://m.dailyhunt.in/news/india/kannada/etvbhar9348944527258-epaper-etvbhkn/vijay+marchent+trofi+u+16+karnaatakakke+draavid+putra+naayaka+raayachuru+huduga+upanaayaka-newsid-n559274674?listname=newspaperLanding&topic=homenews&index=8&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *